ಕುಮಟಾ ಮಿರ್ಜಾನಿನ ಲ್ಯಾಬ್ ಟೆಕ್ನಿಶಿಯನ್ ಬಾಲಕೃಷ್ಣ ನಾಯ್ಕ ಅವರಿಗೆ ಮೋಸವಾಗಿದೆ. ಕುಮಟಾ ಪಟ್ಟಣದಲ್ಲಿ ಪ್ರಯೋಗಾಲಯ ನಿರ್ಮಿಸಿಕೊಡುವುದಾಗಿ ನಂಬಿಸಿದ ಮೂವರು ಅವರಿಂದ ಹಣಪಡೆದು ವಂಚಿಸಿದ್ದಾರೆ.
ಕುಮಟಾ ಮಿರ್ಜಾನಿನ ಗೌರಸ್ಗಿಯಲ್ಲಿ ಬಾಲಕೃಷ್ಣ ನಾಯ್ಕ ಅವರು ವಾಸವಾಗಿದ್ದಾರೆ. ಲ್ಯಾಬ್ ಟೆಕ್ನಿಶಯನ್ ಆಗಿ ಕೆಲಸ ಮಾಡಿದ ಅವರಿಗೆ ಸ್ವಂತ ಪ್ರಯೋಗಾಲಯ ನಿರ್ಮಿಸುವ ಕನಸಿತ್ತು. ಹೀಗಿರುವಾಗ ಶಿವಮೊಗ್ಗ ಹೊಸನಗರದ ರಾಮನಗರದಲ್ಲಿ ಮೆಡಿಕಲ್ ಶಾಪ್ ನಡೆಸುವ ಶಬಿನಾ ಖಲಿಮುಲ್ಲಾ, ಮೆಡಿಕಲ್ ರಿಪ್ರಂಜಟೇಟಿವ್ ಸಯ್ಯದ್ ಖಲಿಮುಲ್ಲಾ ಹಾಗೂ ಕುಮಟಾ ಪೈರಗದ್ದೆಯ ರೆಹಮತುಲ್ಲಾ ಜಾನ್ ಲ್ಯಾಬ್ ನಿರ್ಮಿಸಿಕೊಡುವ ಭರವಸೆ ನೀಡಿದ್ದರು.
ಕುಮಟಾ ಪಟ್ಟಣದ ಜಗನ್ನಾಥ ನಾಯ್ಕ ಅವರ ಕಟ್ಟಡವನ್ನು ತಾವು ಬಾಡಿಗೆ ಪಡೆದಿರುವುದಾಗಿ ಆ ಮೂವರು ಬಾಲಕೃಷ್ಣ ನಾಯ್ಕ ಅವರಿಗೆ ನಂಬಿಸಿದರು. ಪ್ರಯೋಗಾಲಯ ನಿರ್ಮಿಸಲು 3.85 ಲಕ್ಷ ರೂ ಹಣಪಡೆದರು. ಆದರೆ, ಪ್ರಯೋಗಾಲಯವನ್ನು ನಿರ್ಮಿಸಿ ಕೊಡಲಿಲ್ಲ. ಹಣವನ್ನು ಮರಳಿಸಲಿಲ್ಲ.
ಈ ಬಗ್ಗೆ ಬಾಲಕೃಷ್ಣ ನಾಯ್ಕ ವರು ಪ್ರಶ್ನಿಸಿದಾಗ ಆ ಮೂವರು ಸೇರಿ ಅವರಿಗೆ ಬೈದರು. ಮತ್ತೆ ಹಣ ಕೇಳಿದರೆ ಜೀವ ತೆಗೆಯುವೆ ಎಂದು ಬೆದರಿಸಿದರು. ಹೀಗಾಗಿ ಬಾಲಕೃಷ್ಣ ನಾಯ್ಕ ಅವರು ಕುಮಟಾ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದರು. ಪೊಲೀಸರು ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ.
Discussion about this post