ಅಂಕೋಲಾ-ಗೋಕರ್ಣ ನಡುವೆ ಓಡಾಡುವ ಸರ್ಕಾರಿ ಬಸ್ಸು ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತಿದೆ. ಕೆಟ್ಟು ನಿಂತಾಗಲೆಲ್ಲ ಬಸ್ಸಿನೊಳಗಿದ್ದ ಪ್ರಯಾಣಿಕರು ಬಸ್ಸನ್ನು ದೂಡಿ ಚಾಲು ಮಾಡುತ್ತಿದ್ದು, ಇದೇ ಪದ್ಧತಿ ಮುಂದುವರೆದಿದ್ದರಿoದ ಬಸ್ಸನ್ನು ಸರಿಪಡಿಸುವ ಗೋಜಿಗೆ ನಿಗಮ ಹೋಗಿಲ್ಲ!
`ಹೊಂಡಬಿದ್ದ ರಸ್ತೆಯನ್ನು ಸರಿಪಡಿಸಿ.. ಓಡಾಡುವ ಬಸ್ಸುಗಳನ್ನು ಸರಿಯಾಗಿರಿಸಿ’ ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ. ಗೋಕರ್ಣದಿಂದ ಅಂಕೋಲಾಗೆ ಹೋಗುತ್ತಿದ್ದ ಬಸ್ಸು ನಡುವೆ ಕೆಟ್ಟು ನಿಂತಿತು. ಪ್ರಯಾಣಿಕರೆಲ್ಲ ಸೇರಿ ಬಸ್ಸನ್ನು ದೂಡಿ ಮುಂದೆ ಓಡಿಸಿದ್ದು, ಅದಾದ ನಂತರ ಹೊಂಡದಲ್ಲಿ ಸಿಕ್ಕಿ ಬಿದ್ದಿತು!
ಮೂಲಕೇರಿ ಬಳಿಯ ಹೊಂಡದಲ್ಲಿ ಸಿಕ್ಕಿ ಬಿದ್ದ ಬಸ್ಸನ್ನು ಮೇಲೆತ್ತಲು ಪ್ರಯಾಣಿಕರು ಮತ್ತೆ ಬಸ್ಸಿನಿಂದ ಇಳಿದರು. ಎಲ್ಲರೂ ಸೇರಿ ಬಸ್ಸನ್ನು ತಳ್ಳಿ ಮುಂದೆ ಸಾಗಿದರು. ಬಸ್ಸು ಹಾಳಾಗಿದ್ದು ಹಾಗೂ ಹೊಂಡದಲ್ಲಿ ಸಿಲಿಕಿದಲ್ಲದೇ, ಬಸ್ಸು ನಿಧಾನವಾಗಿ ಚಲಿಸಿದ್ದರಿಂದ ಜನ ಸಮಯಕ್ಕೆ ಸರಿಯಾಗಿ ತಲುಪಬೇಕಾದ ಸ್ಥಳಕ್ಕೆ ತಲುಪಲು ಆಗಲಿಲ್ಲ. ಇದರಿಂದ ಎಲ್ಲರೂ ಸಮಸ್ಯೆ ಅನುಭವಿಸಿದರು.
ಈ ಸರ್ಕಾರಿ ಬಸ್ಸಿನಲ್ಲಿ ಗೋಕರ್ಣದಿಂದ ಮಾದನಗೇರಿಯವರೆಗೆ 10 ಕಿಮೀ ಸಂಚಾರಕ್ಕೆ 30 ನಿಮಿಷ ಬೇಕಾಗುತ್ತಿದೆ. ಬಸ್ಸು ಹಾಳಾಗಿರುವುದು ಒಂದು ಸಮಸ್ಯೆಯಾದರೆ ರಸ್ತೆ ಪೂರ್ತಿ ಹೊಂಡ ತುಂಬಿದ್ದು ಇನ್ನೊಂದು ಸಮಸ್ಯೆ.
Discussion about this post