ಅಂಕೋಲಾ ಕೇಣಿಯಲ್ಲಿ ವಾಣಿಜ್ಯ ಬಂದರು ನಿರ್ಮಾಣದ ಕುರಿತು ಸಾರ್ವಜನಿಕರ ಅಭಿಪ್ರಾಯಪಡೆಯಲು ಅಗಸ್ಟ 22ರಂದು ಅಹವಾಲು ಸಭೆ ಕರೆಯಲಾಗಿದೆ.
ಸಾವಿರ ಸಂಖ್ಯೆಯ ಜನ ಬರುವ ನಿರೀಕ್ಷೆಯಿದ್ದರಿಂದ ವಾಹನ ಸಂಚಾರ ವ್ಯವಸ್ಥೆ ಅಸ್ಥವ್ಯಸ್ಥವಾಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಉತ್ತರ ಕನ್ನಡ ಜಿಲ್ಲಾಡಳಿತ ಹಲವು ಮುನ್ನಚ್ಚರಿಕಾ ಕ್ರಮ ಜರುಗಿಸಿದ್ದು, ವಿವಿಧ ರಸ್ತೆಯ ಸಂಚಾರವನ್ನು ನಿಷೇಧಿಸಿದೆ. ವಾಣಿಜ್ಯ ಬಂದರು ನಿರ್ಮಾಣ ಕುರಿತು ಅಂಕೋಲಾದ ಸತ್ಯಾಗ್ರಹ ಸ್ಮಾರಕ ಭವನದಲ್ಲಿ ಸಭೆ ಆಯೋಜಿಸಲಾಗಿದೆ. ವಾಣಿಜ್ಯ ಬಂದರು ನಿರ್ಮಾಣದ ಪರವಾಗಿ ಮತ್ತು ವಿರೋಧವಾಗಿ ಅಭಿಪ್ರಾಯ ಹಂಚಿಕೆ ಹಾಗೂ ಅಧಿಕೃತ ಪತ್ರ ನೀಡಲು ಇಲ್ಲಿ ಅವಕಾಶ ಕೊಡಲಾಗಿದೆ. ಈ ಸಭೆಗೆ ಸ್ಥಳೀಯರ ಜೊತೆ ಹೊರಗಿನಿಂದಲೂ ಅನೇಕರು ಬರುವ ಸಾಧ್ಯತೆಗಳಿವೆ.
ಹೆಚ್ಚಿನ ಪ್ರಮಾಣದಲ್ಲಿ ಸಾರ್ವಜನಿಕರು ಸೇರುವ ಲಕ್ಷಣಗಳಿರುವುದರಿಂದ ಯಾರಿಗೂ ತೊಂದರೆಯಾಗದAತೆ ನೋಡಿಕೊಳ್ಳಲು ಜಿಲ್ಲಾಡಳಿತ ಮುಂದಾಗಿದೆ. ಈ ವೇಳೆ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲು ಅಂಕೋಲಾ ಶಹರದ ಬಸ್ ನಿಲ್ದಾಣ ವೃತ್ತದಿಂದ ಸುಂದರ ನಾರಾಯಣ ದೇವಸ್ಥಾನ ಪಿಕಾಕ್ ಬಾರಿನವರೆಗಿನ ರಸ್ತೆಯಲ್ಲಿ ಸಂಚಾರ ನಿಷೇಧಿಸಲಾಗಿದೆ. ಜೊತೆಗೆ ಈ ಪ್ರದೇಶದಲ್ಲಿ ವಾಹನ ನಿಲುಗಡೆಯನ್ನು ಸಹ ನಿಷೇಧಿಸಲಾಗಿದೆ. ಬೆಳಿಗ್ಗೆ 5ಗಂಟೆಯಿAದ ರಾತ್ರಿ 10 ಗಂಟೆಯವರೆಗೆ ವಾಹನ ಸಂಚಾರ ಹಾಗೂ ನಿಲುಗಡೆ ನಿಷೇಧಿಸಿ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಆದೇಶ ಹೊರಡಿಸಿದ್ದಾರೆ.
