ಮೇಷ ರಾಶಿ: ಸ್ನೇಹಿತರ ಜೊತೆ ಆಪ್ತ ಸಮಾಲೋಚನೆ ಸಾಧ್ಯ. ನಿಮ್ಮ ಆಲೋಚನೆಗೆ ಗೌರವ ಸಿಗಲಿದೆ. ನಿಮ್ಮ ಮಾತು ಪ್ರಭಾವವೂ ಬೀರಲಿದೆ. ಧೈರ್ಯದಿಂದ ಮಾತನಾಡಿ.
ವೃಷಭ ರಾಶಿ: ಹಣಕಾಸು ವಿಷಯದಲ್ಲಿ ಜಾಗೃತಿ ಅಗತ್ಯ. ಅನಗತ್ಯ ವೆಚ್ಚ ಮಾಡಬೇಡಿ. ಬದ್ಧತೆಯಿಂದ ಕಾರ್ಯನಿರ್ವಹಿಸಿ. ಅನಗತ್ಯ ಮಾತುಗಳಿಂದ ದೂರವಿರಿ.
ಮಿಥುನ ರಾಶಿ: ಧ್ಯಾನ ಹಾಗೂ ಪ್ರಾಣಾಯಾಮದಿಂದ ಮನಸ್ಸು ಶಾಂತವಾಗಲಿದೆ. ನಿಮ್ಮ ನಿರ್ಧಾರಗಳು ನಿಮಗೆ ಲಾಭ ಕೊಡಲಿದೆ. ಆಸ್ತಿ ವ್ಯವಹಾರಕ್ಕೆ ಸೂಕ್ತ ಸಮಯ.
ಕರ್ಕ ರಾಶಿ: ಪ್ರಯಾಣ ಸಾಧ್ಯತೆ ಹೆಚ್ಚಿದೆ. ಪ್ರಮುಖ ವ್ಯಕ್ತಿಗಳ ಭೇಟಿ ಆಗಲಿದೆ. ಸಮಯಾವಕಾಶವನ್ನು ಸರಿಯಾಗಿ ಬಳಸಿಕೊಳ್ಳಿ. ಸಂಗಾತಿ ಜೊತೆ ಸಮಯ ಕಳೆಯಿರಿ.
ಸಿಂಹ ರಾಶಿ: ಭಾವನಾತ್ಮಕ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ವ್ಯವಹಾರಗಳಲ್ಲಿ ತಾಳ್ಮೆಯಿರಲಿ. ಆತ್ಮವಿಶ್ವಾಸದಿಂದ ಜೀವಿಸಿ. ನಕಾರಾತ್ಮಕ ಚಿಂತೆ ಬೇಡ.
ಕನ್ಯಾ ರಾಶಿ: ಆರೋಗ್ಯದ ಕಡೆ ಗಮನಹರಿಸಿ. ಆಹಾರ ಸೇವನೆಯಲ್ಲಿ ಬದಲಾವಣೆ ಉತ್ತಮ. ಆಯಾ ದಿನದ ಕೆಲಸವನ್ನು ಅದೇ ದಿನ ಮುಗಿಸಿದರೆ ಯಶಸ್ಸು ಸಾಧ್ಯ.
ತುಲಾ ರಾಶಿ: ಕೆಲಸದ ಸಮಯದಲ್ಲಿ ಸ್ಪಷ್ಠ ನಿರ್ಧಾರ ಪ್ರಕಟಿಸಿ. ಹೊಸ ಆಲೋಚನೆಗಳನ್ನು ಜಾರಿಗೆ ತನ್ನಿ. ಭಯ ಬೇಡ.
ವೃಶ್ಚಿಕ ರಾಶಿ: ಸ್ನೇಹಿತರ ಜೊತೆ ಚನ್ನಾಗಿರಿ. ಒಳ್ಳೆಯ ಮಾತುಗಳಿಂದ ಅವರನ್ನು ಹುರಿದುಂಬಿಸಿ. ನಿಮ್ಮ ಬೆಂಬಲದಿoದ ಬೇರೆಯವರ ಸಮಸ್ಯೆ ದೂರವಾಗಲಿದೆ.
ಧನು ರಾಶಿ: ಸಮಯ ನಿರ್ವಹಣೆಗೆ ಯೋಜನೆ ಅಗತ್ಯ. ಕೆಲಸವನ್ನು ಬೇಗ ಮುಗಿಸಿದಲ್ಲಿ ವಿಶ್ರಾಂತಿಗೆ ಸಮಯ ಸಿಗಲಿದೆ. ಧ್ಯಾನ ಮಾಡುವುದು ಉತ್ತಮ.
ಮಕರ ರಾಶಿ: ನಕಾರಾತ್ಮಕ ಚಿಂತನೆ ದೂರ ಮಾಡಲು ಹಾಸ್ಯ ಪ್ರಜ್ಞೆ ಅಗತ್ಯ. ಖರ್ಚು-ವೆಚ್ಚಗಳ ಬಗ್ಗೆ ನಿಯಂತ್ರಣವಿರಲಿ. ಆರೋಗ್ಯದ ಕಡೆ ಗಮನಕೊಡಿ.
ಕುಂಭ ರಾಶಿ: ಹಣಕಾಸು ವಿಷಯದಲ್ಲಿ ಯಶಸ್ಸು ಸಿಗಲಿದೆ. ವೃತ್ತಿ ಜೀವನ ಚನ್ನಾಗಿರಲಿದೆ. ವಿರೋಧಿಗಳಿಗೆ ಹಿನ್ನಡೆ ಆಗಿ ನಿಮಗೆ ಜಯ ಸಿಗಲಿದೆ.
ಮೀನ ರಾಶಿ: ನಿಮ್ಮ ಮಾತಿಗೆ ನೀವು ಬದ್ಧರಾಗಿರುವುದು ಮುಖ್ಯ. ಕುಟುಂಬದಲ್ಲಿ ಕಲಹ ಒಳ್ಳೆಯದಲ್ಲ. ದೈಹಿಕ ಹಾಗೂ ಮಾನಸಿಕ ಆರೋಗ್ಯ ಸಮತೋಲನದಲ್ಲಿರಿಸಲು ಪ್ರಯತ್ನಿಸಿ.
Discussion about this post