ಕುಡಿಯುವ ನೀರಿನ ಪೈಪ್ ಕಳ್ಳತನ, ಲಂಚ ಸ್ವೀಕಾರ ಪ್ರಕರಣದಲ್ಲಿ ಭಾಗಿಯಾಗಿದ್ದ ಶಿರಸಿ ನಗರಸಭೆ ಸದಸ್ಯ ಗಣಪತಿ ನಾಯ್ಕ ಅವರ ಸದಸ್ಯತ್ವವನ್ನು ಬಿಜೆಪಿ ಅಮಾನತು ಮಾಡಿದೆ.
ಶಿರಸಿ ನಗರಸಭೆಯೂ ಜನರಿಗೆ ಕುಡಿಯುವ ನೀರು ಪೂರೈಕೆ ಮಾಡುತ್ತಿದ್ದ ಕಬ್ಬಿಣದ ಪೈಪ್ ಕಳ್ಳತನ ಪ್ರಕರಣದಲ್ಲಿ ನಗರಸಭೆ ಸದಸ್ಯ ಗಣಪತಿ ನಾಯ್ಕ ಸಿಕ್ಕಿ ಬಿದ್ದಿದ್ದರು. ಪೊಲೀಸ್ ವಿಚಾರಣೆ ವೇಳೆ ಗಣಪತಿ ನಾಯ್ಕ ಅವರು ಆರೋಪಿಯಾಗಿದ್ದು, ಪ್ರಕರಣದಲ್ಲಿ ಅವರ ಹೆಸರು ಸೇರಿಸಲಾಗಿತ್ತು. ಅದರ ಬೆನ್ನಲ್ಲೆ ಗಣಪತಿ ನಾಯ್ಕ ಅವರು ಸಾರ್ವಜನಿಕರೊಬ್ಬರಿಂದ ಲಂಚ ಸ್ವೀಕರಿಸಿದ್ದರು. ಆ ವೇಳೆ ಲೋಕಾಯುಕ್ತ ದಾಳಿ ನಡೆದಿದ್ದು, ಗಣಪತಿ ನಾಯ್ಕ ಅವರು ಜೈಲು ವಾಸ ಅನುಭವಿಸಿದ್ದರು.
ಬಿಜೆಪಿ ಸದಸ್ಯರಾಗಿದ್ದ ಗಣಪತಿ ನಾಯ್ಕ ಅವರ ಮೇಲಿದ್ದ ಪೈಪ್ ಕಳ್ಳತನ ಹಾಗೂ ಲಂಚ ಸ್ವೀಕಾರ ಪಕ್ಷದವರ ಮುಜುಗರಕ್ಕೆ ಕಾರಣವಾಗಿತ್ತು. ಈ ಎರಡು ಪ್ರಕರಣದ ಬಗ್ಗೆ ಕೂಲಂಕುಶ ವಿಚಾರಣೆ ನಡೆಸದ ಎನ್ ಎಸ್ ಹೆಗಡೆ ಅವರು ಕಠಿಣ ಕ್ರಮಕ್ಕೆ ಮುಂದಾದರು. ಪಕ್ಷದಿಂದ ಗಣಪತಿ ನಾಯ್ಕ ಅವರನ್ನು ದೂರ ಮಾಡುವುದಕ್ಕಾಗಿ ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಿದರು. ಈ ಅಮಾನತು ಜಿಲ್ಲಾಧ್ಯಕ್ಷರ ಮುಂದಿನ ಆದೇಶದವರೆಗೆ ಮಾತ್ರ ಸೀಮಿತವಾಗಿದೆ.
Discussion about this post