ಹಳಿಯಾಳದ ಮಕ್ತುಂ ಹುಸೇನ್ ಬುಡ್ಡೇಸಾಬ್ ಮುಲ್ಲಾ ಅವರಿಗೆ ವಸೀಂ ಅಸ್ಲಂ ಶೇಖ್ ಎಂಬಾತರು ಚಾಕು ಇರಿದಿದ್ದಾರೆ. ಗಾಯಗೊಂಡ ಮಕ್ತುಂ ಹುಸೇನ್ ಬುಡ್ಡೇಸಾಬ್ ಮುಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹಳಿಯಾಳ ಪಟ್ಟಣದ ಚವ್ಹಾಣ್ ಫ್ಲ್ಯಾಟ್ ಬಡಾವಣೆಯಲ್ಲಿ ಬುಧವಾರ ಮಕ್ತುಂ ಹುಸೇನ್ ಬುಡ್ಡೇಸಾಬ್ ಮುಲ್ಲಾ ಅವರು ಬೈಕಿನಲ್ಲಿ ಸಂಚರಿಸುತ್ತಿದ್ದರು. ಆಗ, ವಸೀಂ ಅಸ್ಲಂ ಶೇಖ್ ಅವರು ಬೈಕಿಗೆ ಅಡ್ಡಲಾಗಿ ಕೈ ಮಾಡಿದರು. ಬೈಕ್ ನಿಲ್ಲಿಸಿದಾಗ ಬೈಕಿನ ಹಿಂದೆ ಕುಳಿತ ವಸೀಂ ಅಸ್ಲಂ ಶೇಖ್ ಕೆಲ ದೂರದವರೆಗೆ ಬೈಕಿನಲ್ಲಿ ಜೊತೆಗೆ ಸಂಚರಿಸಿದರು. ಅದಾದ ನಂತರ ಏಕಾಏಕಿ ಚಾಕುವಿನಿಂದ ಬೆನ್ನಿಗೆ ಚುಚ್ಚಿದರು.
ಇದರಿಂದ ಮಕ್ತುಂ ಹುಸೇನ್ ಬುಡ್ಡೇಸಾಬ್ ಮುಲ್ಲಾ ಗಾಯಗೊಂಡು ನೆಲಕ್ಕೆ ಬಿದ್ದಿದ್ದು, ವಸೀಂ ಅಸ್ಲಂ ಶೇಖ್ ಅಲ್ಲಿಂದ ಓಡಿ ಪರಾರಿಯಾದರು. ಹೊಸೂರಗಲ್ಲಿಯ ಮಕ್ತುಂ ಹುಸೇನ್ ಬುಡ್ಡೇಸಾಬ್ ಮುಲ್ಲಾ ಹೋಟೆಲ್ ಕಾರ್ಮಿಕರಾಗಿದ್ದಾರೆ. ಆರೋಪಿ ವಾಸೀಂ ಕಟ್ಟಡ ಕಾರ್ಮಿಕರಾಗಿದ್ದಾರೆ. ಚಾಕು ಇರಿತಕ್ಕೆ ಕಾರಣ ಗೊತ್ತಾಗಿಲ್ಲ. ಗಾಯಾಳುವಿಗೆ ಹಳಿಯಾಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ಧಾರವಾಡ ಆಸ್ಪತ್ರೆಗೆ ಕಳುಹಿಸಲಾಗಿದೆ.
Discussion about this post