ಕಳೆದ ವರ್ಷ 90 ಲಕ್ಷ ರೂ ಲಾಭಗಳಿಸಿದ್ದ ಯಲ್ಲಾಪುರದ ವಿಕಾಸ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಈ ವರ್ಷ 1.27 ಕೋಟಿ ರೂ ಲಾಭಗಳಿಸಿದೆ. ಆ ಮೂಲಕ ವರ್ಷದಿಂದ ವರ್ಷಕ್ಕೆ ಈ ಬ್ಯಾಂಕು ಇನ್ನಷ್ಟು ವಿಕಾಸವಾಗುತ್ತಿದೆ.
ತಂತ್ರಜ್ಞಾನ ಆಧಾರಿತ ಬ್ಯಾಂಕಿoಗ್ ಸೇವೆ ಒದಗಿಸುವುದರಲ್ಲಿ ಮುಂಜೂಣಿಯಲ್ಲಿರುವ ವಿಕಾಸ್ ಬ್ಯಾಂಕ್ ಈಗಾಗಲೇ ಎಟಿಎಂ, ಇ-ಕಾಮರ್ಸ, ಮೊಬೈಲ್ ಬ್ಯಾಂಕಿoಗ್ ಪದ್ಧತಿಯನ್ನು ಅಳವಡಿಸಿಕೊಂಡಿದೆ. ಈ ವರ್ಷ ಗ್ರಾಹಕರಿಗೆ ಯುಪಿಐ ಸೇವೆಯನ್ನು ಒದಗಿಸುವುದಕ್ಕಾಗಿ ಸಿದ್ಧತೆ ನಡೆಸಿದೆ. 1997ರಲ್ಲಿ ಶುರುವಾದ ಈ ಬ್ಯಾಂಕಿಗೆ ಸದ್ಯ 10853 ಸದಸ್ಯರಿದ್ದಾರೆ. ಮುರುಳಿ ಹೆಗಡೆ ಅವರು ಅಧ್ಯಕ್ಷರಾಗಿ ಹಾಗೂ ನರಸಿಂಹ ಬೊಳಪಾಲ್ ಅವರು ಉಪಾಧ್ಯಕ್ಷಾಗಿರುವ ಈ ಬ್ಯಾಂಕಿಗೆ ವಿವಿಧ ಕ್ಷೇತ್ರದಲ್ಲಿ ಅನುಭವಹೊಂದಿರುವ 18 ನಿರ್ದೇಶಕರಿದ್ದಾರೆ.
`ಗ್ರಾಹಕರೇ ದೇವರು ಎಂಬ ತತ್ವದ ಅಡಿ ವಿಕಾಸ ಅರ್ಬನ ಕೋ ಆಪರೇಟಿವ್ ಬ್ಯಾಂಕ್ ಕೆಲಸ ಮಾಡುತ್ತಿದೆ. ಕಾಯ್ದೆಯಲ್ಲಿನ ಬದಲಾವಣೆ, ಹೆಚ್ಚುವರಿ ತಾಂತ್ರಿಕ ಅಳವಡಿಕೆ ಸೇರಿ ಗ್ರಾಹಕ ಸ್ನೇಹಿ ವ್ಯವಹಾರಗಳಿಂದ ಬ್ಯಾಂಕು ಪ್ರಸಿದ್ಧಿಪಡೆದಿದೆ. ಉತ್ತಮ ಬ್ಯಾಂಕಿoಗ್ ಅನುಭವ ನೀಡುವುದೇ ನಮ್ಮ ಗುರಿ’ ಎಂದು ವಿಕಾಸ ಬ್ಯಾಂಕಿನ ಅಧ್ಯಕ್ಷ ಮುರಳಿ ಹೆಗಡೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. `

ಅಗಸ್ಟ 25ರಂದು ಮಧ್ಯಾಹ್ನ 4 ಗಂಟೆಗೆ ಅಡಿಕೆ ಭವನದಲ್ಲಿ ಬ್ಯಾಂಕಿನ ವಾರ್ಷಿಕ ಸಭೆ ನಡೆಯಲಿದ್ದು, ಸದಸ್ಯರು ಆಗಮಿಸಿ ಸಲಹೆ-ಸೂಚನೆ ನೀಡಬೇಕು’ ಎಂದು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಉಮೇಶ ಭಾಗ್ವತ, ಉಪಾಧ್ಯಕ್ಷ ನರಸಿಂಹ ಭಟ್ಟ, ನಿರ್ದೇಶಕರಾದ ಸುಬ್ರಾಯ ಭಾಗ್ವತ, ಶಿವರಾಮ ಭಟ್ಟ, ಪ್ರಿಯಾ ಗಾಂವ್ಕರ್ ಮನವಿ ಮಾಡಿದರು.
Discussion about this post