ಈ ದಿನ ಬೆಳಗ್ಗೆ 5 ಗಂಟೆಗೆ ಎದ್ದ ಹೊನ್ನಾವರದ ಉಮೇಶ ಉಪ್ಪಾರ್ ವಿಷ ಸೇವಿಸಿ ಸಾವನಪ್ಪಿದ್ದಾರೆ. ಅವರನ್ನು ಆಸ್ಪತ್ರೆಗೆ ಕರೆತಂದರೂ ಅದರಿಂದ ಪ್ರಯೋಜನವಾಗಲಿಲ್ಲ.
ಹೊನ್ನಾವರದ ಸರಳಗಿ ಉಪ್ಪಾರಕೇರಿಯಲ್ಲಿ ಉಮೇಶ ಉಪ್ಪಾರ್ ಅವರು ವಾಸವಾಗಿದ್ದರು. ಕೂಲಿ ಕೆಲಸ ಮಾಡಿಕೊಂಡಿದ್ದ ಅವರು ನೆಮ್ಮದಿಯ ಜೀವನವನ್ನೇ ನಡೆಸುತ್ತಿದ್ದರು. ಕೆಲ ದಿನದಿಂದ ಅವರು ಮಂಕಾಗಿದ್ದು, ಅದಕ್ಕೆ ಕಾರಣ ಏನು? ಎಂದು ಯಾರಿಗೂ ಗೊತ್ತಿರಲಿಲ್ಲ.
ಹೀಗಿರುವಾಗ ಅಗಸ್ಟ 21ರಂದು ಬೆಳಗ್ಗೆ 5 ಗಂಟೆಗೆ ಎದ್ದರು. ಅಡಿಕೆ ಮರಕ್ಕೆ ಹೊಡೆಯಲು ತಂದಿರಿಸಿದ್ದ ಕಳೆನಾಶಕವನ್ನು ಸೇವಿಸಿ ಅಸ್ವಸ್ಥರಾದರು. ಉಮೇಶ ಅವರ ತಾಯಿ ಪಾರ್ವತಿ ಉಪ್ಪಾರ್ ಅವರು ಇದನ್ನು ನೋಡಿ ಕೂಡಲೇ ಮಗನನ್ನು ಹೊನ್ನಾವರ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರು. ಆದರೆ, ಆಸ್ಪತ್ರೆಗೆ ಬರುವ ಮೊದಲೇ ಉಮೇಶ ಉಪ್ಪಾರ್ ಸಾವನಪ್ಪಿದ ಬಗ್ಗೆ ವೈದ್ಯರು ಹೇಳಿದರು.
9.45ಕ್ಕೆ ಉಮೇಶ ಉಪ್ಪಾರ್ ಅವರ ಸಾವು ಖಚಿತವಾಗಿದ್ದು, ಪಾರ್ವತಿ ಉಪ್ಪಾರ್ ಅವರ ಹೇಳಿಕೆ ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿದರು.
Discussion about this post