ಲಂಚ ಸ್ವೀಕಾರದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಹೊನ್ನಾವರ ಪಪಂ ಅಧ್ಯಕ್ಷ ವಿಜಯ ಕಾಮತ ಅವರ ಸದಸ್ಯತ್ವ ಅಮಾನತಾಗಿದೆ. ಲೋಕಾಯುಕ್ತ ವರದಿ ಆಧರಿಸಿ ಭಟ್ಕಳ ಉಪವಿಭಾಗಾಧಿಕಾರಿ ಕಾವ್ಯಾರಾಣಿ ಅವರು ಸದಸ್ಯತ್ವ ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಒಂದು ವರ್ಷದ ಹಿಂದೆ ಹೊನ್ನಾವರ ಪಟ್ಟಣ ಪಂಚಾಯತ ಮೇಲೆ ಲೋಕಾಯುಕ್ತರು ದಾಳಿ ನಡೆಸಿದ್ದರು. ಚಂದ್ರಹಾಸ ಬಾಂದೇಕರ ಎನ್ನುವವರಿಗೆ ಸೇರಿದ ಆಸ್ತಿಯನ್ನು ಇ-ಸ್ವತ್ತು ಮಾಡಿಸಲು ಪ ಪಂ ಮುಖ್ಯಾಧಿಕಾರಿ 25 ಸಾವಿರ ಬೇಡಿದ್ದು, ಆ ವೇಳೆ ಪ ಪಂ ಮುಖ್ಯಾಧಿಕಾರಿ ಜೊತೆ ಅಧ್ಯಕ್ಷರು ಸಿಕ್ಕಿ ಬಿದ್ದಿದ್ದರು.
ಲಂಚ ಸ್ವೀಕರಿಸುತ್ತಿರುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದ ವಿಜಯ ಕಾಮತ ಕೆಲ ಕಾಲ ಜೈಲಿನಲ್ಲಿದ್ದು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ಅವರು ಇತ್ತೀಚೆಗೆ ಅಧಿಕಾರ ವಹಿಸಿಕೊಂಡಿದ್ದರು. ಇದೀಗ ಪಟ್ಟಣ ಅಧ್ಯಕ್ಷ ವಿಜಯ್ ಕಾಮತ ಇವರನ್ನು ಆ ಹುದ್ದೆಯಿಂದ ಅಮಾನತ್ತುಗೊಳಿಸಲಾಗಿದೆ.
Discussion about this post