25 ವರ್ಷದ ಹಿಂದೆ ಹಳಿಯಾಳದ ತೆರಗಾಂವಿನಲ್ಲಿರುವ ಸೊಸೈಟಿಗೆ ನುಗ್ಗ ದರೋಡೆ ನಡೆಸಿದ್ದ ಡಕಾಯಿತ ಇದೀಗ ಸಿಕ್ಕಿಬಿದ್ದಿದ್ದು, ಆರೋಪಿ ಶಿವಪುತ್ರಪ್ಪ ದಾಸರ ಎಂಬಾತರನ್ನು ಪೊಲೀಸರು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ಹುಬ್ಬಳ್ಳಿ ಗಣೇಶಪೇಟೆಯ ಶಿವಪುತ್ರಪ್ಪ ತಿಮ್ಮಪ್ಪ ದಾಸರ (56) 2000 ಎಪ್ರಿಲ್ 14ರಂದು ಹಳಿಯಾಳಕ್ಕೆ ಆಗಮಿಸಿದ್ದು, ಅಲ್ಲಿನ ತೆರಗಾಂವ ಗ್ರಾಮದ ಸೊಸೈಟಿಗೆ ನುಗ್ಗಿ ಕಳ್ಳತನ ಮಾಡಿದ್ದ. ಆ ಅವಧಿಯಲ್ಲಿಯೇ ಪೊಲೀಸರು ಕಳ್ಳನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಜಾಮೀನಿನ ಮೇಲೆ ಹೊರಬಂದ ಈತ ನಂತರ ವಿಚಾರಣೆಗೆ ಹಾಜರಾಗಿರಲಿಲ್ಲ. ಪೊಲೀಸರ ಕೈಗೆ ಸಹ ಸಿಕ್ಕಿರಲಿಲ್ಲ.
ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಗದೀಶ ನಾಯ್ಕ, ಡಿವೈಎಸ್ಪಿ ಶಿವಾನಂದ ಮದರಖಂಡಿ, ಹಳಿಯಾಳ ಸಿಪಿಐ ಜಯಪಾಲ್ ಪಾಟೀಲ್ ಈ ಬಗ್ಗೆ ಶೋಧ ನಡೆಸಿದರು. ಪಿಎಸ್ಐ ಬಸವರಾಜ ಮಬನೂರ, ಕೃಷ್ಣ ಅರಕೇರಿ ನೇತ್ರತ್ವದಲ್ಲಿ ತಲೆಮರೆಸಿಕೊಂಡವನ ಹುಡುಕಾಟ ನಡೆಯಿತು. ಪೊಲೀಸ್ ಸಿಬ್ಬಂದಿ ಎಮ್ ಎಮ್ ಮುಲ್ಲಾ, ಶ್ರೀಶೈಲ್ ಬಿ ಎಮ್, ವಿನೋದ ಜಿ ಬಿ, ಲಕ್ಷ್ಮಣ ಪೂಜಾರಿ, ರಾಘವೇಂದ್ರ ಕೆರವಾಡ, ಪ್ರೇಮಾ ಜಕನೂರ, ಉಮೇಶ ತೇಲಿ ಸೇರಿ ಕಾರವಾರದ ಟೆಕ್ನಿಕಲ್ ತಜ್ಞ ಉದಯ ಗುನಗಾ ಅವರ ನೆರವಿನೊಂದಿಗೆ ಕಳ್ಳನ ಅಡಗುತಾಣ ಪತ್ತೆ ಮಾಡಿದರು.
ಗೋವಾದಲ್ಲಿ ಅಡಗಿದ್ದ ಶಿವಪುತ್ರಪ್ಪ ದಾಸರರನ್ನು ಹುಬ್ಬಳ್ಳಿ ರೈಲ್ವೆ ಪೊಲೀಸ್ ಸಿಬ್ಬಂದಿ ರಫೀಕ, ಹಳೆ ಹುಬ್ಬಳ್ಳಿ ಠಾಣೆಯ ನಾಗರಾಜ್, ಹುಬ್ಬಳ್ಳಿ ಶಹರ ಠಾಣೆಯ ರವಿರಾಜ್, ಹುಬ್ಬಳ್ಳಿ ಗ್ರಾಮೀಣ ಠಾಣೆಯ ಚೆನ್ನಪ್ಪ, ದಾಂಡೇಲಿ ಶಹರ ಪೊಲೀಸ್ ಠಾಣೆಯ ಶಂಕರಲಿoಗ ಹಾಗೂ ಹಳಿಯಾಳ ಠಾಣೆಯ ಹೋಮಗಾರ್ಡ್ ಸಿಬ್ಬಂದಿ ರವಿ ಮಿರಜಕರ್ ಸೇರಿ ಬಂಧಿಸಿದರು. ಗೋವಾದ ಕೊಲ್ವಾ ಸಾಲಷೆಟ್’ನಲ್ಲಿ ಆತ ಸಿಕ್ಕಿಬಿದ್ದಿದ್ದು ಆತನನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.
