ಮೇಷ ರಾಶಿ: ಕೆಲಸದಲ್ಲಿ ಯಶಸ್ಸು ಸಿಗಲಿದೆ. ಹಿರಿಯರಿಂದ ಮೆಚ್ಚುಗೆಗೆ ಪಾತ್ರರಾಗಲಿದ್ದೀರಿ. ಆರೋಗ್ಯ ಸ್ಥಿರವಾಗಿರಲಿದೆ. ಹೊಸ ಅವಕಾಶ ಸಿಕ್ಕರೆ ಒಪ್ಪಿಕೊಳ್ಳಿ.
ವೃಷಭ ರಾಶಿ: ವಾಹನ ಓಡಿಸುವಾಗ ಎಚ್ಚರಿಕೆ ಅಗತ್ಯ. ಹಣಕಾಸು ವಿಷಯದಲ್ಲಿ ದುಡುಕಿನ ನಿರ್ಧಾರ ಬೇಡ. ಸಣ್ಣ ಸಣ್ಣ ವಿಷಯಗಳಿಗೆ ಬೇಸರ ಮಾಡಿಕೊಳ್ಳದಿರಿ.
ಮಿಥುನ ರಾಶಿ: ವ್ಯಾಪಾರ-ವಹಿವಾಟು ಹೆಚ್ಚಳವಾಗಲಿದೆ. ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಸೂಕ್ತ ದಿನ. ಆತ್ಮವಿಶ್ವಾಸದಿಂದ ಕೆಲಸ ಮಾಡಿ.
ಕರ್ಕ ರಾಶಿ: ನೀವು ಮಾಡಿದ ಕೆಲಸ ಮೆಚ್ಚುಗೆಗಳಿಸಲಿದೆ. ಆರೋಗ್ಯ ಸುಧಾರಣೆ ಸಾಧ್ಯ. ಸಂಜೆ ವೇಳೆ ಅದೃಷ್ಟ ಬದಲಾಗಲಿದೆ. ಆಸ್ತಿ ವಿಷಯದಲ್ಲಿ ಲಾಭವಾಗಲಿದೆ.
ಸಿಂಹ ರಾಶಿ: ಕೆಲಸದಲ್ಲಿ ಸುಧಾರಣೆ ಸಾಧ್ಯವಿದೆ. ಹಣಕಾಸಿನ ಹರಿವು ಆಗಲಿದೆ. ಅನಗತ್ಯ ಯೋಜನೆಗಳಿಂದ ದೂರವಿರುವುದು ಉತ್ತಮ.
ಕನ್ಯಾ ರಾಶಿ: ಆರೋಗ್ಯದ ಬಗ್ಗೆ ಕಾಳಜಿವಹಿಸಿ. ಉದ್ಯೋಗದಲ್ಲಿ ಮುನ್ನಡೆ ಸಾಧಿಸಿ. ಏಕಾಗೃತೆಯಿಂದ ಮಾಡಿದ ಕೆಲಸದಲ್ಲಿ ಯಶಸ್ಸು ಸಿಗಲಿದೆ.
ತುಲಾ ರಾಶಿ: ಕುಟುಂಬದವರ ಜೊತೆ ಕಾಲ ಕಳೆಯುವಿರಿ. ಸೃಜನಶೀಲತೆಯಿಂದ ಆದಾಯ ಹೆಚ್ಚಳವಾಗಲಿದೆ. ಪ್ರೀತಿ-ಪ್ರೇಮದ ವಿಷಯದಲ್ಲಿ ಜಯ ಸಿಗಲಿದೆ.
ವೃಶ್ಚಿಕ ರಾಶಿ: ಕುಟುಂಬದ ಬೆಂಬಲದಿoದ ಕೆಲಸ ಪೂರ್ಣಗೊಳಿಸುವಿರಿ. ಶತ್ರುಗಳ ಕಾಟಕ್ಕೆ ಮುಕ್ತಿ ದೊರೆಯಲಿದೆ. ಕೆಲಸದಲ್ಲಿ ಯಶಸ್ಸು ಸಿಗಲಿದೆ.
ಧನು ರಾಶಿ: ದೂರ ಪ್ರಯಾಣದ ಅವಕಾಶ ಬರಲಿದೆ. ಹಣ ಹೂಡಿಕೆಗೆ ಸೂಕ್ತ ಸಮಯ. ಆರೋಗ್ಯದ ವಿಷಯದಲ್ಲಿ ಎಚ್ಚರಿಕೆ ಮುಖ್ಯ.
ಮಕರ ರಾಶಿ: ಕುಟುಂಬದವರ ಮಾತಿಗೆ ಮನ್ನಣೆ ಕೊಡಿ. ವೃತ್ತಿಯಲ್ಲಿ ಬೆಳವಣಿಗೆ ಸಾಧ್ಯವಿದೆ. ಹೊಸ ಒಪ್ಪಂದಗಳನ್ನು ಒಪ್ಪಿ, ಮುನ್ನಡೆಯಿರಿ.
ಕುಂಭ ರಾಶಿ: ಮಾನಸಿಕ ನೆಮ್ಮದಿಗೆ ಧ್ಯಾನ ಮಾಡಿ. ವಿವಾದಗಳಿಂದ ದೂರವಾಗಿರಿ. ಖರ್ಚುಗಳನ್ನು ನಿಯಂತ್ರಿಸಿ.
ಮೀನ ರಾಶಿ: ಮನೆ ಕೆಲಸಗಳಿಗೆ ಸಮಯ ಕೊಡುವುದು ಮುಖ್ಯ. ಹಣಕಾಸಿನ ಹರಿವು ಚನ್ನಾಗಿರಲಿದೆ. ಆರೋಗ್ಯದಲ್ಲಿ ಸುಧಾರಣೆ ಕಾಣಬಹುದು.
Discussion about this post