ಕಾರವಾರದ ಅಮದಳ್ಳಿಯಲ್ಲಿ ನಡೆದ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಅಲ್ಲಿನ ಎಜುಕೇರ್ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ.
ಚಕ್ರ ಎಸೆತ ಸುಪ್ರೀತ್ ಆರ್ ನಾಯ್ಕ ಪ್ರಥಮ ಸ್ಥಾನಪಡೆದಿದ್ದಾರೆ. 3ಸಾವಿರ ಮೀ ಓಟದಲ್ಲಿ ತೇಜಸ್ ಉದಯ್ ಗುನಗಿ ಪ್ರಥಮ ಸ್ಥಾನಪಡೆದಿದ್ದಾರೆ. ತ್ರಿವಿಧ ಜಿಗಿತ ನಾಗರಾಜ್ ವಿ ನಾಯ್ಕ ಮೊದಲಿಗರಾಗಿದ್ದಾರೆ. ಎತ್ತರ ಜಿಗಿತ ಸ್ಪರ್ಧೆಯಲ್ಲಿ ರುಶ್ಮಿತಾ ಗೌಡ ಪ್ರಥಮ ಸ್ಥಾನಪಡೆದಿದ್ದಾರೆ. ತ್ರಿವಿದ ಜಿಗಿತದಲ್ಲಿ ಸುಹಿತ್ ಎಲ್ ಗೌಡ ದ್ವಿತೀಯ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. 3 ಸಾವಿರ ಮೀಟರ್ ಓಟದಲ್ಲಿ ಹರ್ಷಿತ್ ದೇವರಾಜ್ ತಾಂಡೇಲ್ ದ್ವಿತೀಯ ಬಹುಮಾನಪಡೆದಿದ್ದಾರೆ.
ಗುಂಡು ಎಸೆತದಲ್ಲಿ ಸುಪ್ರೀತ್ ಆರ್ ನಾಯಕ್ ತೃತೀಯ, 1500ಮೀ ಓಟ ತೇಜಸ್ ಉದಯ್ ಗುನಗಿ ತೃತೀಯ ಹಾಗೂ 100ಮೀ ಓಟದಲ್ಲಿ ರಯಾನ್ ಎಂ ಫರ್ನಾಂಡಿಸ್ ತೃತೀಯ ಬಹುಮಾನಗಳನ್ನು ಗೆದ್ದಿದ್ದಾರೆ. ಶಾಲೆಯ ದೈಹಿಕ ಶಿಕ್ಷಕ ವಿಶ್ವನಾಥ್ ಗೌಡ ಅವರು ಈ ಎಲ್ಲಾ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದರು.
ಈ ಕ್ರೀಡಾ ತಂಡದ ವ್ಯವಸ್ಥಾಪಕರಾಗಿ ವಿಜ್ಞಾನ ಶಿಕ್ಷಕಿ ಟೀನಾ ಅಸ್ನೋಟಿಕರ್ ಕಾರ್ಯ ನಿರ್ವಹಿಸಿದ್ದು, ಸಾಧಕ ಮಕ್ಕಳಿಗೆ ಪ್ರಾಚಾರ್ಯೆ ನಾಗರತ್ನ ಅವರು ಶುಭ ಕೋರಿದರು. ತಾಲೂಕಾ ಮಟ್ಟದ ಸ್ಪರ್ಧೆಯಲ್ಲಿಯೂ ಬಹುಮಾನಗಳನ್ನು ಗೆದ್ದು ತರುವಂತೆ ಶಾಲಾ ಆಡಳಿತ ಮಂಡಳಿಯವರು ಹಾರೈಸಿದರು.
Discussion about this post