ವಿದೇಶಿ ಫೋನ್ ಸಂಖ್ಯೆ ಬಳಸಿ ಭಟ್ಕಳದ ದಂಪತಿಗೆ ಬ್ಲಾಕ್‌ಮೇಲ್ ಮಾಡಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಇಬ್ಬರು ಭಟ್ಕಳದವರೇ ಆಗಿದ್ದಾರೆ.
ಭಟ್ಕಳದ ಅಕ್ಬರಭಾಷಾ ಹಾಗೂ ಸಾಬೇರಾ ಬಾನು (ಹೆಸರು ಬದಲಿಸಿದೆ) ದಂಪತಿಗೆ ಈಚೆಗೆ ಪದೇ ಪದೇ ಫೋನ್ ಬರುತ್ತಿತ್ತು. 20 ಲಕ್ಷ ರೂ ನೀಡದೇ ಇದ್ದರೆ ನಿಮ್ಮ ಮಗಳ ಖಾಸಗಿ ಫೋಟೋ-ವಿಡಿಯೋ ಬಹಿರಂಗಪಡಿಸುವುದಾಗಿ ಫೋನ್ ಮಾಡಿದವರು ಬೆದರಿಸುತ್ತಿದ್ದರು. ಕೊನೆಗೆ 15 ಲಕ್ಷ ರೂ ಆದರೂ ಕೊಡಬೇಕು ಎಂದು ಪೀಡಿಸಿದ್ದರು. ಈ ಬಗ್ಗೆ ಅಕ್ಬರಭಾಷಾ ಅವರು ಪೊಲೀಸರ ಮೊರೆ ಹೋಗಿದ್ದರು.
ಈ ಬಗ್ಗೆ ಹುಡುಕಾಟ ನಡೆಸಿದ ಪೊಲೀಸರು ಭಟ್ಕಳದ ಅಬ್ಬುಹುರೇರಾ ಕಾಲೊನಿಯ ನಿರುದ್ಯೋಗಿ ಮೊಹಮ್ಮದ ಫಾರಿಸ್ (20), ಭಟ್ಕಳ ಮೂಸಾನಗರದ ಗುತ್ತಿಗೆದಾರ ಮೊಹಮ್ಮದ ಅರ್ಶದ (22) ಹಾಗೂ ಕುಂದಾಪುರ ಹಾಲಾಡಿಯ ಇಂಜಿನಿಯರಿoಗ್ ವಿದ್ಯಾರ್ಥಿ ಅಮನ್‌ಮಸೂದ ಖಾನ್ ಎಂಬಾತರನ್ನು ವಶಕ್ಕೆಪಡೆದರು. ಬ್ಲಾಕ್‌ಮೇಲ್ ಮಾಡಿದ್ದು ಈ ಮೂವರು ಎಂದು ಖಚಿತವಾದ ನಂತರ ಅವರನ್ನು ಬಂಧಿಸಿ ಜೈಲಿಗೆ ಹಾಕಿದರು.
Discussion about this post