ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ನಿರಂತರ ಅಪಪ್ರಚಾರವನ್ನು ಬಿಜೆಪಿ ಖಂಡಿಸಿದೆ. ಅಪಪ್ರಚಾರ ನಡೆಸುವವರ ವಿರುದ್ಧ ಪ್ರತಿಭಟನೆ ನಡೆಸಲು ಬಿಜೆಪಿ ನಿರ್ಧರಿಸಿದೆ.
`ಧರ್ಮ ರಕ್ಷಣೆ ವಿಷಯದಲ್ಲಿ ಬಿಜೆಪಿ ಸದಾ ಮುಂಚೂಣಿಯಲ್ಲಿದೆ. ಧಾರ್ಮಿಕ ಕೇಂದ್ರಗಳ ವಿರುದ್ಧ ನಡೆಸುವ ಷಡ್ಯಂತ್ರಗಳ ವಿರುದ್ಧ ಹೋರಾಟ ನಿಶ್ಚಿತ’ ಎಂದು ಬಿಜೆಪಿ ಪ್ರಮುಖರು ಹೇಳಿದ್ದಾರೆ. `ಧರ್ಮಸ್ಥಳ ಪ್ರಕರಣಕ್ಕೆ ಸಂಬoಧಿಸಿ ಯಲ್ಲಾಪುರದಲ್ಲಿ ಸೋಮವಾರ ಬೃಹತ್ ಪ್ರತಿಭಟನಾ ಜಾಥಾ ನಡೆಸಲಾಗುತ್ತದೆ’ ಎಂದು ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ್ ಕೋಣೆಮನೆ ಹೇಳಿದ್ದಾರೆ.
`ಧರ್ಮಸ್ಥಳದ ವಿಷಯ ಹಾಗೂ ಶ್ರೀಕ್ಷೇತ್ರದ ಹೆಸರು ಹಾಳು ಮಾಡಲು ಪ್ರಯತ್ನಿಸಿದ ಬಗ್ಗೆ ದೇಶದ ಜನರ ಮುಂದಿಡುವ ಪ್ರಯತ್ನ ಬಿಜೆಪಿಯದ್ದಾಗಿದೆ. ಹಿಂದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡುವವರ ವಿರುದ್ಧ ಕ್ರಮವಾಗಬೇಕಿದೆ’ ಎಂದವರು ಒತ್ತಾಯಿಸಿದರು. `ರಾಮ ಜನ್ಮಭೂಮಿ, ಅಯೋಧ್ಯೆ, ಕೇರಳದ ಶಬರಿಮಲೈ ಸೇರಿ ಹಲವು ಕಡೆ ಹಿಂದು ವಿರೋಧಿ ಮಾನಸಿಕತೆಯ ಅಪಪ್ರಚಾರ ಮಾಡಿದ್ದು, ಆಗಲೂ ಬಿಜೆಪಿ ಧರ್ಮದ ಪರ ಕೆಲಸ ಮಾಡಿದೆ. ಧರ್ಮಸ್ಥಳ ವಿಚಾರದದಲ್ಲಿ ತಮಿಳುನಾಡಿನ ಸಂಸದ ಶಶಿಕಾಂತ್ ಸೆಂದಿಲ್ ಅವರ ಕೈವಾಡವಿದೆ’ ಎಂದು ದೂರಿದರು. ಈ ಬಗ್ಗೆ ತನಿಖೆಗೆ ಆಗ್ರಹಿಸಿದರು.
ಯಲ್ಲಾಪುರ ಬಿಜೆಪಿ ಮಂಡಲಾಧ್ಯಕ್ಷ ಪ್ರಸಾದ್ ಹೆಗಡೆ, ಪಕ್ಷ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸೋಮೇಶ್ವರ ನಾಯ್ಕ, ಪಕ್ಷದ ಪ್ರಧಾನ ಕಾರ್ಯದರ್ಶಿ ನಟರಾಜ್ ಗೌಡರ್ ಇದ್ದರು.
Discussion about this post