`ಧರ್ಮಸ್ಥಳದ ಬುರುಡೆ ರಹಸ್ಯ ಬಯಲಿಗೆ ತರಲು ಸಕಾರ ವಿಶೇಷ ತನಿಖಾ ತಂಡ ರಚಿಸಿದ ಮಾದರಿಯಲ್ಲಿಯೇ ಮುಸುಕುದಾರಿ ಹಾಗೂ ಆತನ ಹಿಂದಿರುವ ದುಷ್ಟಶಕ್ತಿ ಪತ್ತೆಗೆ ಮತ್ತೊಂದು ತನಿಖಾ ತಂಡ ರಚಿಸಬೇಕು’ ಎಂದು ನಾಗರಿಕ ವೇದಿಕೆ ಆಗ್ರಹಿಸಿದೆ.
ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಈ ಬಗ್ಗೆ ಒತ್ತಾಯಿಸಿದ್ದು `ಮುಸುಕುದಾರಿಯ ಸಂಪೂರ್ಣ ಜಾತಕ ಬಯಲು ಮಾಡಬೇಕು’ ಎಂದು ಒತ್ತಾಯಿಸಿದ್ದಾರೆ. `ಧರ್ಮಸ್ಥಳದಲ್ಲಿ ಧರ್ಮದ್ರೋಹಿಗಳ ಮುಖವಾಡ ಕಳಚಿ ಬಿದ್ದಿದೆ. ಸರಕಾರ ಈ ಮುಖವಾಡಿಗಳ ಮಾತು ನಂಬಿ ತನಿಖಾ ತಂಡ ರಚನೆ ಮಾಡಿತ್ತು. ಆದರೆ, ಆ ತಂಡಕ್ಕೆ ಅಲ್ಲಿ ಏನೂ ಸಿಕ್ಕಿಲ್ಲ. ಹೀಗಾಗಿ ಇದೊಂದು ಷಡ್ಯಂತ್ರ ಎಂದು ಇಡೀ ದೇಶಕ್ಕೇ ಗೊತ್ತಾಯಿತು’ ಎಂದವರು ಹೇಳಿದ್ದಾರೆ.
`ಈ ಕಥೆ ಇಲ್ಲಿಗೆ ಮುಗಿಯಬಾರದು. ಈ ಎಲ್ಲಾ ಮುಸುಕುಧಾರಿಗಳ ಮುಖವಾಡ ಕಳಚಿಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ದೂರುದಾರ ಚನ್ನಯ್ಯ, ಸುಜಾತಾ ಭಟ್ಟ ಅವರ ಬೆಂಬಲಿಗರಾಗಿರುವ ತಿಮ್ಮರೋಡಿ, ಜಯಂತ ಟಿ, ಗಿರೀಶ ಮಟ್ಟಣ್ಣ, ಸಮೀರ ಹಾಗೂ ಇನ್ನಿತರರ ವಿಚಾರಣೆ ನಡೆಯಬೇಕು. ಅವರ ಹಿಂದೆ ನಿಂತು ಆಟ ಆಡಿಸುತ್ತಿದ್ದ ರಾಷ್ಟ್ರಮಟ್ಟದ ಹಿಂದು ವಿರೋಧಿ ತಂಡದವರನ್ನು ಬಯಲಿಗೆಳೆಯಬೇಕು’ ಎಂದವರು ಆಗ್ರಹಿಸಿದ್ದಾರೆ.
Discussion about this post