• Latest
Eid Milad along with Ganesh Chaturthi For any problem WhatsApp here 9483511015!

ಗಣೇಶೋತ್ಸವದ ಜೊತೆ ಈದ್ ಮಿಲಾದ್: ಯಾವುದೇ ಸಮಸ್ಯೆಗೆ ಇಲ್ಲಿ ವಾಟ್ಸಪ್ ಮಾಡಿ!

2 months ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

4 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

4 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

4 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

4 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

4 weeks ago
Wednesday, October 22, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಗಣೇಶೋತ್ಸವದ ಜೊತೆ ಈದ್ ಮಿಲಾದ್: ಯಾವುದೇ ಸಮಸ್ಯೆಗೆ ಇಲ್ಲಿ ವಾಟ್ಸಪ್ ಮಾಡಿ!

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
Eid Milad along with Ganesh Chaturthi For any problem WhatsApp here 9483511015!
ADVERTISEMENT

`ಗಣೇಶ ಉತ್ಸವ ಹಾಗೂ ಈದ್ ಮಿಲಾದ್ ಹಬ್ಬವನ್ನು ಶಾಂತಿ ಮತ್ತು ಸೌಹಾರ್ದಯುತವಾಗಿ ಆಚರಿಸಬೇಕು’ ಎಂದು ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಕರೆ ನೀಡಿದ್ದಾರೆ. `ಯಾರಿಗೆ, ಯಾವುದೇ ಸಮಸ್ಯೆ ಆದರೂ 9483511015ಗೆ ವಾಟ್ಸಪ್ ಮಾಡಿ ಮಾಡಿ’ ಎಂದವರು ಹೇಳಿದ್ದಾರೆ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಲ್ಲಾ ಸಮುದಾಯ ಮುಖಂಡರೊoದಿಗೆ ಸಭೆ ನಡೆಸಿದ ಅವರು ವಿವಿಧ ಸೂಚನೆ ನೀಡಿದರು. `ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವಾಗ ಮಣ್ಣಿನಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ಮಾತ್ರ ಪ್ರತಿಷ್ಠಾಪಿಸಬೇಕು. ಪಿಓಪಿ ಮತ್ತು ರಾಸಾಯನಿಕ ಬಣ್ಣಗಳನ್ನು ಬಳಸಿರುವ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಅವಕಾಶವಿಲ್ಲ. ಗಣೇಶ ಪ್ರತಿಷ್ಠಾಪನೆ ಸ್ಥಳದಲ್ಲಿ ಮತ್ತು ವಿಸರ್ಜನೆ ಸಮಯದಲ್ಲಿ ಯಾವುದೇ ರೀತಿಯ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ಬಳಕೆ ಮಾಡುವ ಹಾಗಿಲ್ಲ. ಪೆಂಡಾಲ್ ನಿರ್ಮಾಣ ಮತ್ತು ಅಲಂಕಾರದಲ್ಲಿಯೂ ಪ್ಲಾಸ್ಟಿಕ್ ಬಳಕೆ ಆಗುವ ಹಾಗಿಲ್ಲ’ ಎಂದು ಸರ್ಕಾರಿ ನಿಯಮವನ್ನು ಪುನರುಚ್ಚರಿಸಿದರು.

ADVERTISEMENT

`ಗಣೇಶ ವಿಸರ್ಜನೆ ಸಂದರ್ಭದಲ್ಲಿ ಮತ್ತು ಪ್ರತಿಷ್ಠಾಪನೆ ಪ್ರದೇಶದಲ್ಲಿ ವಿದ್ಯುತ್ ಲೈನ್‌ಗಳ ಸಂಪರ್ಕದಿAದ ಯಾವುದೇ ಅನಾಹುತ ಆಗದಂತೆ ಎಚ್ಚರಿಕೆವಹಿಸಬೇಕು. ಸಾರ್ವಜನಿಕರಿಗೆ ಪ್ರಸಾದದ ರೂಪದಲ್ಲಿ ವಿತರಿಸುವ ಆಹಾರ ಪದಾರ್ಥಗಳ ಬಗ್ಗೆಯೂ ಆಯೋಜಕರು ಹೆಚ್ಚಿನ ಮುತುವರ್ಜಿವಹಿಸಬೇಕು. ಗಣೇಶ ಮೂರ್ತಿಗಳನ್ನು ನಗರ ಸ್ಥಳೀಯ ಸಂಸ್ಥೆಗಳು ಗುರುತಿಸಿರುವ ಸ್ಥಳದಲ್ಲಿಯೇ ವಿಸರ್ಜನೆ ಮಾಡಬೇಕು, ಆ ಪ್ರದೇಶದಲ್ಲಿ ತ್ಯಾಜ್ಯ ಉತ್ಪತ್ತಿಯಾಗದಂತೆ ಸ್ಥಳೀಯಾಡಳಿತಗಳು ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಬೇಕು’ ಎಂದು ಸೂಚಿಸಿದರು. `ಗಣೇಶ ಪ್ರತಿಷ್ಠಾಪನೆಗೆ ಅನುಮತಿ ನೀಡುವಾಗ ಸಿಂಗಲ್ ವಿಂಡೋ ವ್ಯವಸ್ಥೆಯಡಿ ಎಲ್ಲಾ ಅಗತ್ಯ ಅನುಮತಿ ಪಡೆಯಬೇಕು’ ಎಂದು ತಿಳಿಸಿದರು.

`ಹೆಚ್ಚು ಶಬ್ದ ಮಾಡುವ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ. ಸುಪ್ರೀಂ ಕೋರ್ಟಿನ ಸೂಚನೆಯಂತೆ ಡಿಜೆಗಳ ಬಳಕೆಯನ್ನು ಮಾಡುವಂತಿಲ್ಲ. ಆಸ್ಪತ್ರೆ, ಶಾಲೆ, ನ್ಯಾಯಾಲಯ ಪ್ರದೇಶದಲ್ಲಿ ಧ್ವನಿವರ್ಧಕ ಬಳಕೆ ನಿಷಿದ್ಧ’ ಎಂದು ವಿವರಿಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ಮೆರವಣಿಗೆ ಸಂದರ್ಭದಲ್ಲಿ ಮದ್ಯದಂಗಡಿಗಳನ್ನು ಮುಚ್ಚಲಾಗುತ್ತದೆ. ಅದಾಗಿಯೂ ಸಾರ್ವಜನಿಕರು ಯಾವುದೇ ಸಮಸ್ಯೆಗಳಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಕಂಟ್ರೋಲ್ ರೂಂ 9483511015 ಮತ್ತು ಪೊಲೀಸ್ ಸಹಾಯವಾಣಿ 112ಗೆ ಫೋನ್ ಮಾಡಿ’ ಎಂದರು.

`ಗಣೇಶ ಪ್ರತಿಷ್ಠಾಪನೆ ಸ್ಥಳದಲ್ಲಿ ಸಿಸಿಟಿವಿ ಅಳವಡಿಸಬೇಕು. ಬೆಂಕಿ ಅವಗಡಗಳು ಸಂಭವಿಸಿದAತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಪೆಂಡಾಲ್‌ಗಳ ಬಳಿ ಸ್ವಯಂ ಸೇವಕರನ್ನು ನಿಯೋಜಿಸಬೇಕು, ಪೊಲೀಸ್ ಇಲಾಖೆಯ ಮಾರ್ಗಸೂಚಿಯಂತೆ ಎಲ್ಲಾ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಬೇಕು. ಯಾವುದೇ ಹಂತದಲ್ಲೂ ಕಾನೂನು ಉಲ್ಲಂಘನೆ ಮತ್ತು ಶಾಂತಿ ಸುವ್ಯವಸ್ಥೆಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಶಾಂತಿಯುತವಾಗಿ ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಆಚರಣೆ ನಡೆಯಬೇಕು’ ಎಂದು ಪೊಲೀಸ್ ವರಿಷ್ಠಾಧಿಕಾರಿ ದೀಪನ್ ತಿಳಿಸಿದರು.

ನಗರಸಭೆ ಅಧ್ಯಕ್ಷ ರವಿರಾಜ್ ಅಂಕೋಲೆಕರ್, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಪ್ರೋಬೇಷನರಿ ಐ ಎ ಎಸ್ ಅಧಿಕಾರಿ ಜೂಫಿಶಾನ್ ಹಕ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ದೇವರಾಜ್, ಜಿಲ್ಲಾ ಪರಿಸರ ಅಧಿಕಾರಿ ಸಂತೋಷ್ ಇತರರಿದ್ದರು.

ADVERTISEMENT

Discussion about this post

Previous Post

2025 ಅಗಸ್ಟ 24ರ ದಿನ ಭವಿಷ್ಯ

Next Post

ಬೈಕಿಗೆ ಗುದ್ದಿದ ಟ್ಯಾಂಕರ್: ಹೆಲ್ಮೆಟ್ ಜೊತೆ ತಲೆಯೂ ಎರಡು ಹೋಳು!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋