ಮುರುಡೇಶ್ವರ, ಬನವಾಸಿ ಹಾಗೂ ಕುಮಟಾದಲ್ಲಿ ಮಟ್ಕಾ ಆಡಿಸುತ್ತಿದ್ದವರ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಈ ಮೂರು ಕಡೆ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಮುರುಡೇಶ್ವರ ಶಿರಾಣಿಯ ಗಣಪತಿ ನಾಯ್ಕ ಅವರು ಮುರುಡೇಶ್ವರ ಬಸ್ತಿಯ ದುರ್ಗಾ ಮೆಡಿಕಲ್ ಶಾಫ್ ಎದುರು ಮಟ್ಕಾ ಆಡಿಸುತ್ತಿರುವಾಗ ಸಿಕ್ಕಿ ಬಿದ್ದಿದ್ದಾರೆ. ಅಗಸ್ಟ 22ರಂದು ಮುರುಡೇಶ್ವರ ಪಿಐ ಸಂತೋಷ ಕಾಯ್ಕಿಣಿ ಅವರ ಮೇಲೆ ದಾಳಿ ನಡೆಸಿ ಜನರಿಂದ ಸಂಗ್ರಹಿಸಿದ್ದ 930ರೂ ಹಣವಶಕ್ಕೆಪಡೆದರು.
ಅದೇ ದಿನ ಕುಮಟಾ ಹೆಗಡೆ ಗಾಂಧೀನಗರದ ಗಣಪತಿ ಮುಕ್ರಿ ಅವರು ಹೆಗಡೆ ಗ್ರಾಮದ ಸರ್ಕಾರಿ ಶಾಲೆ ಬಳಿ ಮಟ್ಕಾ ಆಡಿಸುವಾಗ ಕುಮಟಾ ಪಿಎಸ್‌ಐ ಮಂಜುನಾಥ ಗೌಡ ಅವರು ದಾಳಿ ಮಾಡಿದರು. ಗಣಪತಿ ಮುಕ್ರಿ ಅವರು ಜನರಿಗೆ ಆಮೀಷ ಒಡ್ಡಿ ಸಂಗ್ರಹಿಸಿದ್ದ 710ರೂಪಾಯಿಗಳನ್ನು ವಶಕ್ಕೆಪಡೆದರು.
ಶಿರಸಿಯ ದಾಸನಕೊಪ್ಪ ಬದನಗೋಡದ ಪರಶುರಾಮ ಓಬಣ್ಣ ಅವರು ದಾಸನಕೊಪ್ಪದ ಭೂತಪ್ಪನ ಕಟ್ಟೆ ಬಳಿ ಮಟ್ಕಾ ಆಡಿಸುವಾಗ ಸಿಕ್ಕಿಬಿದ್ದರು. ಬನವಾಸಿ ಪಿಎಸ್‌ಐ ಮಹಾಂತೇಪ್ಪ ಕುಂಬಾರ್ ಅವರು ಪರಶುರಾಮ ಓಬಣ್ಣ ಅವರ ಬಳಿಯಿದ್ದ 550ರೂ ಹಣವಶಕ್ಕೆಪಡೆದರು. ಈ ಎಲ್ಲಾ ಕಡೆ ಹಣದ ಜೊತೆ ಮಟ್ಕಾ ಪರಿಕ್ಕರಗಳನ್ನು ಜಪ್ತು ಮಾಡಿದ್ದು, ಎಲ್ಲರ ವಿರುದ್ಧ ಪ್ರಕರಣ ದಾಖಲಾಗಿದೆ.
Discussion about this post