ಮೇಷ ರಾಶಿ: ಹೊಸ ಉದ್ದಿಮೆ, ಹೊಸ ಆಲೋಚನೆ ಶುರು ಮಾಡಲು ಶುಭ ದಿನ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಹಣಕಾಸು ವಿಷಯದಲ್ಲಿ ತಾಳ್ಮೆ ಅಗತ್ಯ. ಕೆಲಸದಲ್ಲಿ ಒತ್ತಡ ಸಹಜ.
ವೃಷಭ ರಾಶಿ: ಹೊಸ ಹೂಡಿಕೆಗಳನ್ನು ಶುರು ಮಾಡಲು ಈ ದಿನ ಉತ್ತಮವಾಗಿಲ್ಲ. ಆರೋಗ್ಯದ ಬಗ್ಗೆ ಗಮನಹರಿಸುವುದು ಮುಖ್ಯ. ಕುಟುಂಬದವರ ಬೆಂಬಲದಿoದ ಸಮಸ್ಯೆಗಳು ದೂರವಾಗಲಿದೆ.
ಮಿಥುನ ರಾಶಿ: ಆತ್ಮವಿಶ್ವಾಸದಿಂದ ಕೆಲಸ ಮಾಡಿ. ನಿಮ್ಮ ಶ್ರಮವೇ ನಿಮಗೆ ಅದೃಷ್ಠ ತಂದುಕೊಡಲಿದೆ. ಅನಗತ್ಯವಾದ ವೆಚ್ಚಗಳನ್ನು ತಪ್ಪಿಸಿ.
ಕರ್ಕ ರಾಶಿ: ಕುಟುಂಬದವರ ಜೊತೆ ಕಾಲ ಕಳೆಯಿರಿ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಸರಿಯಾಗಿ ಯೋಚಿಸಿ. ಆರ್ಥಿಕವಾಗಿ ಲಾಭ ಆಗಲಿದ್ದು, ಐಷಾರಾಮಿ ವಸ್ತುಗಳಿಗಾಗಿ ಖರ್ಚು-ವೆಚ್ಚಗಳನ್ನು ನಿಯಂತ್ರಿಸುವುದು ಉತ್ತಮ.
ಸಿಂಹ ರಾಶಿ: ನಿಮ್ಮೊಳ್ಳಿಗೆ ಆತ್ಮವಿಶ್ವಾಸ ಹೆಚ್ಚಾಗಲಿದೆ. ಆರೋಗ್ಯವಾಗಿರಲಿದ್ದೀರಿ. ಹೊಸ ಕೆಲಸದ ಶುರುವಿಗೆ ಉತ್ತಮ ದಿನ. ನಾಯಕತ್ವವಹಿಸಿದ ಕೆಲಸದಲ್ಲಿ ಯಶಸ್ಸು ಸಿಗಲಿದೆ.
ಕನ್ಯಾ ರಾಶಿ: ನಿಮ್ಮ ಸುತ್ತಲಿನ ಪರಿಸರದಲ್ಲಾಗುವ ಘಟನಾವಳಿಗಳನ್ನು ಗಂಭೀರವಾಗಿ ಪರಿಗಣಿಸಿ. ಉದ್ಯೋಗದಲ್ಲಿನ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ಪೂರೈಸಿ. ಮನೆಯವರ ಜೊತೆ ಸಂತೋಷದ ಕ್ಷಣ ಕಳೆಯುವಿರಿ.
ತುಲಾ ರಾಶಿ: ಮನಸ್ಸಿನಲ್ಲಿ ನೆಮ್ಮದಿಯ ವಾತಾವರಣವಿರಲಿದೆ. ಪ್ರೀತಿ-ಪ್ರೇಮದ ವಿಷಯದಲ್ಲಿ ಸಂಗಾತಿಯ ಸಹಕಾರ ಸಿಗಲಿದೆ. ಹಣಕಾಸು ಬೆಳವಣಿಗೆಯೂ ಸಾಧ್ಯವಿದೆ.
ವೃಶ್ಚಿಕ ರಾಶಿ: ವ್ಯಾಪಾರ ವಿಷಯದಲ್ಲಿ ಉತ್ತಮ ರೀತಿ ವಿಚಾರ ಮಾಡಲಿದ್ದೀರಿ. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಭವಿಷ್ಯದ ಯೋಜನೆಗಳ ಬಗ್ಗೆ ಚಿಂತಿಸಿ, ಕಾರ್ಯರೂಪಕ್ಕೆ ತನ್ನಿ.
ಧನು ರಾಶಿ: ಹೊಸ ಆಲೋಚನೆಗಳು ನಿಮಗೆ ಬರಲಿದೆ. ಆ ಆಲೋಚನೆ ಅನುಷ್ಠಾನಕ್ಕೆ ತರುವುದರಿಂದ ಯಶಸ್ಸು ಸಿಗಲಿದೆ. ಕುಟುಂಬದ ಸಮಸ್ಯೆಗಳನ್ನು ಚರ್ಚಿಸಿ ಬಗೆಹರಿಸಿಕೊಳ್ಳಿ.
ಮಕರ ರಾಶಿ: ನೀವು ಮಾಡುವ ಕೆಲಸದಲ್ಲಿ ನಿಮಗೆ ಸ್ಪಷ್ಠತೆಯಿರಬೇಕು. ಕುಟುಂಬದ ಜೊತೆ ಸಮಯ ಕಳೆಯುವುದು ಮುಖ್ಯ. ವ್ಯವಹಾರಗಳ ಬಗ್ಗೆ ಕಾಳಜಿವಹಿಸಿ.
ಕುಂಭ ರಾಶಿ: ನೀವು ಅಂದುಕೊoಡoತೆ ಎಲ್ಲವೂ ನಡೆಯುವುದಿಲ್ಲ. ಹೊಸ ಪರಿಚಯದವರಿಂದ ನಿಮಗೆ ನೆರವು ಸಿಗಲಿದೆ. ನಿರಂತರ ಪ್ರಯತ್ನದಿಂದ ಗೆಲುವು ಸಿಗುತ್ತದೆ.
ಮೀನು ರಾಶಿ: ಸ್ನೇಹಿತರ ಸಹಾಯದಿಂದ ಸಮಸ್ಯೆ ದೂರವಾಗುತ್ತದೆ. ಜಾಸ್ತಿ ಚಿಂತೆ ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಹಣಕಾಸು ವಿಷಯದಲ್ಲಿ ಜಾಗೃತೆ ಅಗತ್ಯ.
Discussion about this post