ಭಟ್ಕಳ ಬಸ್ ನಿಲ್ದಾಣದ ಬಳಿ ನಡೆದ ಅಪಘಾತದಲ್ಲಿ ಬಸ್ತಿಯ ಈಶ್ವರ ನಾಯ್ಕ ಅವರು ಸಾವನಪ್ಪಿದ್ದಾರೆ. ಅವರ ಪತ್ನಿ ಭಾರತಿ ನಾಯ್ಕ ಅವರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದಾರೆ.
ಶನಿವಾರ ಬೆಳಗ್ಗೆ ಮುರುಡೇಶ್ವರ ಬಳಿಯ ಈಶ್ವರ ನಾಯ್ಕ (61) ಅವರು ಬಸ್ತಿಯಿಂದ ಭಟ್ಕಳ ಕಡೆಗೆ ಬೈಕಿನಲ್ಲಿ ಬರುತ್ತಿದ್ದರು. ಅವರ ಪತ್ನಿ ಸಹ ಬೈಕಿನಲ್ಲಿ ಜೊತೆಯಿದ್ದರು. ನೂರ್ ಮಸೀದಿ ಹತ್ತಿರ ಹೆದ್ದಾರಿ ಮೇಲೆ ಚಲಿಸುತ್ತಿದ್ದ ಈಶ್ವರ ನಾಯ್ಕ ಅವರ ಬೈಕಿಗೆ ಎದುರಿನಿಂದ ಟ್ಯಾಂಕರ್ ಗುದ್ದಿತು.
ಪರಿಣಾಮ ಈ ದಂಪತಿ ನೆಲಕ್ಕೆ ಬಿದ್ದಿದ್ದು, ಟ್ಯಾಂಕರ್ ಚಕ್ರಕ್ಕೆ ಸಿಲುಕಿದ ಈಶ್ವರ ನಾಯ್ಕ ಅವರು ಅಲ್ಲಿಯೇ ಕೊನೆಯುಸಿರೆಳೆದರು. ಈಶ್ವರ ನಾಯ್ಕ ಅವರು ಬೈಕ್ ಓಡಿಸುವಾಗ ಹೆಲ್ಮೆಟ್ ಧರಿಸಿದ್ದರು. ಟ್ಯಾಂಕರ್ ಚಕ್ರ ಹತ್ತಿದ ರಭಸಕ್ಕೆ ಹೆಲ್ಮೆಟ್ ಪುಡಿಪುಡಿಯಾಗಿ ಈಶ್ವರ ನಾಯ್ಕ ಅವರ ತಲೆಯೂ ಎರಡು ಹೋಳಾಯಿತು.
ಭಾರತಿ ನಾಯ್ಕ ಅವರು ಗಾಯಗೊಂಡಿದ್ದರೂ ಅನತಿ ದೂರದಲ್ಲಿ ಬಿದ್ದಿದ್ದರಿಂದ ಪ್ರಾಣ ಉಳಿಸಿಕೊಂಡರು. ಅದಾಗಿಯೂ ಭಾರತಿ ನಾಯ್ಕ ಅವರ ಕೈಮೇಲೆ ಟ್ಯಾಂಕರ್ ಹತ್ತಿದೆ. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Discussion about this post