ಹೊನ್ನಾವರದ ಚಾಲಕ ಶಶಾಂಕ ನಾಯ್ಕ ಅವರಿಗೆ ಮೂವರು ಸೇರಿ ಥಳಿಸಿದ್ದಾರೆ. ಕಬ್ಬಿಣದ ರಾಡಿನಿಂದ ಅವರ ಮೇಲೆ ದಾಳಿ ನಡೆದಿದೆ.
ಹೊನ್ನಾವರದ ನಗರಬಸ್ತಿಕೇರಿಯ ಶಶಾಂಕ ನಾಯ್ಕ ಅವರು ಮಂಕಿಯ ಎಳಮಕ್ಕಿಯಲ್ಲಿ ವಾಸವಾಗಿದ್ದರು. ಅಗಸ್ಟ 22ರ ಸಂಜೆ ತಮ್ಮ ಬ್ರೆಸ್‌ಲೈಟ್ ರಿಪೇರಿಗಾಗಿ ಗೆಳೆಯ ನಾಗೇಂದ್ರ ಅವರ ಜೊತೆ ಜೊತೆ ಮಂಕಿ ಗುಳದಕೇರಿಗೆ ಹೋಗಿದ್ದರು. ಅಲ್ಲಿರುವ ಶಾಲೆ ಬಳಿಯ ಬಂಗಾರದ ಅಂಗಡಿಗೆ ಹೋದಾಗ ಇಬ್ಬರು ಬುಲೆಟ್ ಬೈಕಿನಲ್ಲಿ ಬಂದರು.
ಮoಕಿ ಬೋಳೆಮಸ್ತಿಯ ನವೀನ ನಾಯ್ಕ ಹಾಗೂ ನಿತಿನ್ ನಾಯ್ಕ ಆ ಬೈಕಿನಲ್ಲಿದ್ದವರಾಗಿದ್ದು, ಏಕಾಏಕಿ ಬಯ್ಯಲು ಶುರು ಮಾಡಿದರು. `ಏಕೆ ಬಯ್ಯುವೆ?’ ಎಂದು ಶಶಾಂಕ ನಾಯ್ಕ ಅವರು ಪ್ರಶ್ನಿಸಿದಾಗ ನಿತಿನ್ ನಾಯ್ಕ ಅವರು ಶಶಾಂಕ ನಾಯ್ಕ ಅವರ ಕುತ್ತಿಗೆ ಹಿಡಿದರು. ನವೀನ್ ನಾಯ್ಕ ಅವರು ಕಬ್ಬಿಣದ ರಾಡಿನಿಂದ ಹೊಡೆದರು.
ಆಗ ಶಶಾಂಕ ನಾಯ್ಕ ಅವರು ನೆಲಕ್ಕೆ ಬಿದ್ದು ಗಾಯಗೊಂಡಿದ್ದು, ಇಬ್ಬರು ಸೇರಿ ಅವರನ್ನು ಕಾಲಿನಿಂದ ಒದ್ದರು. ಶಶಾಂಕ ನಾಯ್ಕ ಅವರ ಸ್ನೇಹಿತ ನಾಗೇಂದ್ರ ಅವರು ಈ ಹೊಡೆದಾಟ ಬಿಡಿಸಿದರು. ಶಶಾಂಕ ನಾಯ್ಕ ಅವರ ದೂರಿನ ಮೇರೆಗೆ ಮಂಕಿ ಪೊಲೀಸರು ಪ್ರಕರಣ ದಾಖಲಿಸಿದರು.
Discussion about this post