ಯಲ್ಲಾಪುರ ರವೀಂದ್ರ ನಗರದ ಶಶಿಕುಮಾರ ವಾಲ್ಮೀಕಿ ಹಾಗೂ ಮಂಜುನಾಥ ನಗರದ ಮಹ್ಮದ್ ಗೌಸ್ ಗಾಂಜಾ ನಶೆಯಲ್ಲಿರುವಾಗ ಪೊಲೀಸರ ಬಳಿ ಸಿಕ್ಕಿ ಬಿದ್ದಿದ್ದಾರೆ. ಪೊಲೀಸರು ಅವರಿಬ್ಬರ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ.
28 ವರ್ಷದ ಶಶಿಕುಮಾರ ವಾಲ್ಮೀಕಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಅಗಸ್ಟ 22ರ ರಾತ್ರಿ ಅವರು ಲಿಂಗನಕೊಪ್ಪ ಕ್ರಾಸಿನ ಬಳಿ ಅಲೆದಾಡುತ್ತಿದ್ದರು. ಪಿಎಸ್‌ಐ ಸಿದ್ದಪ್ಪ ಗುಡಿ ಅವರು ಶಶಿಕುಮಾರ ವಾಲ್ಮೀಕಿ ಅವರನ್ನು ವಿಚಾರಣೆಗೊಳಪಡಿಸಿದರು. ನಶೆಯಲ್ಲಿರುವಂತೆ ಕಾಣಿಸಿದ್ದರಿಂದ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರು.
ಅದೇ ದಿನ ಯಲ್ಲಾಪುರ ಬಸ್ ನಿಲ್ದಾಣದ ಶೌಚಾಲಯದ ಬಳಿ ಮಂಜುನಾಥ ನಗರದ ಮಹ್ಮದ್ ಗೌಸ್ (39) ಸಹ ಅಮಲಿನಲ್ಲಿದ್ದರು. ಪಿಎಸ್‌ಐ ಶೇಡಜಿ ಚೌಹ್ಹಾಣ್ ಅವರನ್ನು ವಿಚಾರಣೆಗೊಳಪಡಿಸಿದರು. ಅದಾದ ನಂತರ ಮಹ್ಮದ್ ಗೌಸ್ ಅವರನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದರು. ಈ ಇಬ್ಬರು ಗಾಂಜಾ ಸೇವಿಸಿದ ಬಗ್ಗೆ ವೈದ್ಯರು ವರದಿ ನೀಡಿದ್ದು, ಪೊಲೀಸರು ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಿದರು.
Discussion about this post