ಕಾರವಾರದ ಅಸ್ನೋಟಿ ಶಿವಾಜಿ ವಿದ್ಯಾ ಮಂದಿರದ ವಿದ್ಯಾರ್ಥಿಗಳಿಗೆ ಉತ್ತರ ಕರ್ನಾಟಕ ನಿವೃತ್ತ ಅರಣ್ಯ ಇಲಾಖೆಯ ಅಧಿಕಾರಿಗಳ ಒಕ್ಕೂಟವೂ ಮಕ್ಕಳ ಅಧ್ಯಯನಕ್ಕೆ ಅಗತ್ಯವಿರುವ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದೆ.
ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಅನುಕೂವಾಗಬಹುದಾದ ಪ್ರಶ್ನೆಗಳನ್ನು ಕ್ರೂಡಿಕರಿಸಿ ಅದನ್ನು ಪುಸ್ತಕ ರೂಪದಲ್ಲಿ ಮುದ್ರಿಸಿ ಕೊಡಲಾಗಿದೆ. ನಿವೃತ್ತ ಉಪಅರಣ್ಯ ಸಂರಕ್ಷಣಾಧಿಕಾರಿ ಸುದರ್ಶನ ಸಾವಂತ ಅವರು ಈ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು. ನಂತರ ಮಾತನಾಡಿದ ಅವರು `ಜೀವನದಲ್ಲಿ ನಿಷ್ಠೆ ಮತ್ತು ಶ್ರದ್ಧೆ ಇರಬೇಕು. ಆಗ ಮಾತ್ರ ಸಾಧನೆ ಸಾಧ್ಯ’ ಎಂದು ಕರೆ ನೀಡಿದರು.
`ಗ್ರಾಮೀಣ ಭಾಗದ ಸೌಲಭ್ಯ ಕೊರತೆಯನ್ನು ಮೀರಿ ಅಸ್ನೋಟಿ ಶಿವಾಜಿ ವಿದ್ಯಾ ಮಂದಿರ ಸಾಧನೆ ಮಾಡುತ್ತಿದೆ. ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸಿದ ಅನೇಕರು ಸಾಧನೆ ಮಾಡಿದ್ದಾರೆ. ಇಲ್ಲಿನ ಮಕ್ಕಳು ಸಾಧನೆ ಮಾಡಲಿ ಎಂಬ ಆಶಯದಿಂದ ಪುಸ್ತಕಗಳನ್ನು ಕೊಡುಗೆಯಾಗಿ ನೀಡಲಾಗಿದೆ’ ಎಂದರು.
ಶಾಲೆಯ ಮುಖ್ಯ ಶಿಕ್ಷಕ ಗಣೇಶ ಬಿಷ್ಟಣ್ಣನವರ ಅವರು ಮಾತನಾಡಿ `ಸುದರ್ಶನ ಸಾವಂತ ಅವರು ಮಾಡಿದ ಸೇವೆಗೆ ಕರ್ನಾಟಕ ಸರ್ಕಾರ ಬೆಸ್ಟ್ ಆರ್ ಎಫ್ ಓ ಅವಾರ್ಡ್ ನೀಡಿ ಗೌರವಿಸಿದೆ. ಅವರ ಶೈಕ್ಷಣಿಕ ಸೇವೆ ನಿರಂತರವಾಗಿರಲಿ. ಅವರ ಮಾರ್ಗದರ್ಶನವೂ ಮಕ್ಕಳ ಮೇಲಿರಲಿ’ ಎಂದರು. ಶಿಕ್ಷಕರಾದ ವಿಜಯಕುಮಾರ್ ನಾಯ್ಕ, ರೂಪಾಲಿ ಸಾವಂತ, ಶಂಕ್ರಮ್ಮ ಬಳ್ಳಾರಿ, ಜೆ ಬಿ ತಿಪ್ಪೇಸ್ವಾಮಿ ಇತರರು ಕಾರ್ಯಕ್ರಮದಲ್ಲಿದ್ದರು.
Discussion about this post