ಗೋವಾದಿಂದ ಗದಗಕ್ಕೆ ಸಾಗಾಟವಾಗುತ್ತಿದ್ದ ಸರಾಯಿಯನ್ನು ಅಬಕಾರಿ ಅಧಿಕಾರಿಗಳು ತಡೆದಿದ್ದಾರೆ. ಜೊಯಿಡಾ ಗಡಿಭಾಗದ ಆನಮೋಡು ತನಿಖಾ ಠಾಣೆಯಲ್ಲಿ ಕಾರಿನ ಜೊತೆ ಸರಾಯಿಯನ್ನು ವಶಕ್ಕೆಪಡೆದ ಅಬಕಾರಿ ಸಿಬ್ಬಂದಿ ಅಕ್ರಮ ಎಸಗಿದ ಕಾರಿನ ಚಾಲಕನ್ನು ವಶಕ್ಕೆಪಡೆದಿದ್ದಾರೆ.
ಗದಗದ ಕಾರ್ತಿಕ್ ಹಿರೇಮಠ್ ಅವರು ಕಾರು ತೆಗೆದುಕೊಂಡು ಗೋವಾಗೆ ಹೋಗಿದ್ದರು. ಮರಳಿ ಬರುವಾಗ ಖಾಲಿ ಬರುವುದು ಬೇಡ ಎಂದು ನಿರ್ಧರಿಸಿ ಕಾರಿನ ತುಂಬ ಸರಾಯಿ ಬಾಟಲಿಗಳನ್ನು ತುಂಬಿಕೊAಡರು. ಅಗಸ್ಟ 26ರ ಬೆಳಗ್ಗೆ ಆನಮೋಡದಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ಅಬಕಾರಿ ಸಿಬ್ಬಂದಿ ಕಾರ್ತಿಕ್ ಅವರ ಟಯೋಟಾ ಕಂಪನಿಯ ಕಾರನ್ನು ತಡೆದರು. ಅದರಲ್ಲಿ ಪ್ಲಾಸ್ಟಿಕ್ ಚೀಲದ ಮೂಟೆ ಸಿಕ್ಕಿದ್ದು, ಅದರ ಒಳಗೆ ಇಣುಕಿ ನೋಡಿದರು.
ಆ ಮೂಟೆಯ ಒಳಗೆ 2 ಲೀಟರಿನ ರಾಯಲ್ ಸ್ಟಾಗ್, 750ಮಿಲೀಯ ವಿಸ್ಕಿ, ಗೋವಾ ಫೆನ್ನಿ ಸೇರಿ ಬಗೆ ಬಗೆಯ ಮದ್ಯಗಳಿದ್ದವು. ಕೂಡಲೇ ಆ ಕಾರನ್ನು ಅಬಕಾರಿ ಸಿಬ್ಬಂದಿ ಜಪ್ತು ಮಾಡಿದರು. 52 ಸಾವಿರದ ಸರಾಯಿ ಜೊತೆ 4.5 ಲಕ್ಷ ರೂ ಮೌಲ್ಯದ ಕಾರು ಸರ್ಕಾರದ ವಶವಾಯಿತು.
ಅಬಕಾರಿ ಉಪನಿರೀಕ್ಷಕ ಟಿ ಬಿ ಮಲ್ಲಣ್ಣವರ ಈ ಕಾರ್ಯಾಚರಣೆ ಉಸ್ತುವಾರಿವಹಿಸಿದ್ದು, ಅಬಕಾರಿ ಪೇದೆಗಳಾಧ ಮಹಾಂತೇಶ ಹೊನ್ನೂರ, ಈರಣ್ಣ ಕುರುಬೇರ, ರವಿ ಸಂಕಣ್ಣನವರ್, ರಮೇಶ ರಾತೋಡ್ ಕಾರ್ಯಾಚರಣೆಯಲ್ಲಿದ್ದರು.
Discussion about this post