`ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ ಅವರು ಸಹ ಹಿಂದು ಹಾಗೂ ಹಿಂದುಸ್ತಾನಿ ಆಗಿದ್ದು, ಅವರು ನಮಸ್ತೇ ಸದಾ ವತ್ಸಲೇ.. ಹಾಡುವುದರಲ್ಲಿ ತಪ್ಪೇನಿಲ್ಲ. ಹೀಗಿರುವಾಗ ಅದು ಕಾಂಗ್ರೆಸ್ಸಿಗರಿಗೆ ಏಕೆ ಮುಜುಗರ ತರುತ್ತದೆ?’ ಎಂದು ಜೆಪಿ ಮುಖಂಡ ರಾಮು ನಾಯ್ಕ ಪ್ರಶ್ನಿಸಿದ್ದಾರೆ.
`ನಾನು ಜನ್ಮ ತಳೆದ ಹೇ ತಾಯಿ ನೆಲವೇ. ನಿನ್ನನ್ನು ಸದಾ ವಂದಿಸುತ್ತೇನೆ. ನಾನು ಸುಖವಾಗಿರಲು, ಅಭಿವೃಧ್ದಿ ಹೊಂದಲು ಕಾರಣವಾಗಿರುವ ನೀನು ನಿತ್ಯ ಸ್ಮರಣೀಯಳು’ ಎಂದು ಡಿಕೆ ಶಿವಕುಮಾರ್ ಅವರು ನಮಸ್ತೇ ಸದಾ ವತ್ಸಲೇ.. ಹಾಡಿನ ಮೂಲಕ ಹೇಳಿದ್ದಾರೆ. ಹೀಗೆ ಹೇಳುವುದರಲ್ಲಿ ತಪ್ಪೇನಿದೆ?’ ಎಂದು ರಾಮು ನಾಯ್ಕ ಅವರು ಪ್ರಶ್ನಿಸಿದ್ದಾರೆ.
`ತಾನು ಬದುಕಿ ಬಾಳುವ ಈ ಭೂಮಿ ತಾಯಿಗೆ ನಮಸ್ಕರಿಸಿದರೆ ಅದು ಉತ್ತಮ ವಿಷಯ. ಅದರಿಂದ ಯಾರೂ ತಲೆಭಾಗಿಸಬೇಕಿಲ್ಲ. ಇದರಿಂದ ಕಾಂಗ್ರೆಸ್ಸಿಗರಿಗೇಕೆ ಮುಜುಗರ ಆಗುತ್ತಿದೆ? ಎಂದು ಅವರು ಕೇಳಿದ್ದಾರೆ. `ಕಾಂಗ್ರೆಸ್ಸಿಗರು ತಮ್ಮದೇ ಪಕ್ಷದ ಓರ್ವ ಹಿರಿಯ ವ್ಯಕ್ತಿ ಆಡಿದ ಮಾತುಗಳನ್ನು ಅಪಾರ್ಥ ಮಾಡಿಕೊಳ್ಳುತ್ತಿದ್ದಾರೆ. ಅದರ ಬದಲು ಅವರು ಈ ಹಾಡನ್ನು ಹಾಡಿ ಅಭಿಮಾನಪ್ರಕಟಿಸಬೇಕು’ ಎಂದಿದ್ದಾರೆ.
Discussion about this post