ಕಾರವಾರದಲ್ಲಿರುವ ಕೆನರಾ ಬ್ಯಾಂಕ್ ನಿವೃತ್ತ ಉದ್ಯೋಗಿ ಜಗದೀಶ ದೇಸಾಯಿ ಅವರ ಬ್ಯಾಂಕ್ ಖಾತೆ ಹ್ಯಾಕ್ ಆಗಿದೆ. ಅವರ ಖಾತೆಯಲ್ಲಿದ್ದ 57 ಸಾವಿರ ರೂ ಹಣವನ್ನು ಸೈಬರ್ ಕ್ರೈಂ ಕ್ರಿಮಿಗಳು ಅಪಹರಿಸಿದ್ದಾರೆ.
ಕಾರವಾರದ ಕಾಜುಭಾಗದ ಗೋಲ್ಡನ್ ಆರ್ಕಿಡ್ ಅಪಾರ್ಟಮೆಂಟಿನಲ್ಲಿ ಜಗದೀಶ ದೇಸಾಯಿ ಅವರು ವಾಸವಾಗಿದ್ದಾರೆ. 76 ವರ್ಷದ ಜಗದೀಶ ದೇಸಾಯಿ ಅವರು ಕೆನರಾ ಬ್ಯಾಂಕಿನಲ್ಲಿ ಸುದೀರ್ಘ ಸೇವೆ ಸಲ್ಲಿಸಿದವರು. ಬ್ಯಾಂಕಿನ ಮೇಲಿನ ಅಭಿಮಾನದಿಂದ ಅವರು ಕೆನರಾ ಬ್ಯಾಂಕಿನಲ್ಲಿ ತಮ್ಮ ಖಾತೆಹೊಂದಿದ್ದು, ಅದೇ ಖಾತೆಯಲ್ಲಿದ್ದ ಹಣ ಕಾಣೆಯಾಗಿದೆ.
ಅಗಸ್ಟ 25ರಂದು ಜಗದೀಶ ದೇಸಾಯಿ ಅವರಿಗೆ 2 ಸಾವಿರ ರೂ ಹಣ ಬೇಕಿತ್ತು. ಹೀಗಾಗಿ ಅವರು ಪಿಕಳೆ ರಸ್ತೆಯಲ್ಲಿರುವ ಎಚ್‌ಡಿಎಫ್‌ಸಿ ಬ್ಯಾಂಕಿನ ಎಟಿಎಂ ಅದನ್ನು ತೆಗೆದಿದ್ದರು. ಅದೇ ದಿನ ಸಂಜೆ ಅವರ ಬ್ಯಾಂಕ್ ಖಾತೆಯನ್ನು ಸೈಬರ್ ಕ್ರೈಂ ಜಾಲದವರು ಹ್ಯಾಕ್ ಮಾಡಿ ಖಾತೆಯಲ್ಲಿದ್ದ 57 ಸಾವಿರ ರೂ ಹಣ ದೋಚಿದರು.
ಜಗದೀಶ ದೇಸಾಯಿ ಅವರ ಬ್ಯಾಂಕ್ ಖಾತೆಯಲ್ಲಿನ ಹಣ ಬೇರೆ ಬೇರೆ ವ್ಯಕ್ತಿಗಳ ಖಾತೆಗೆ ಜಮಾ ಆಗಿದೆ. ಈ ಬಗ್ಗೆ ಅರಿತ ಜಗದೀಶ ದೇಸಾಯಿ ಅವರು ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಶೋಧ ನಡೆಸಿದ್ದಾರೆ.
`ನಿಮಗೂ ಇಂಥ ಅನುಭವ ಆಗಿದ್ದರೆ ಕೂಡಲೇ ದೂರು ನೀಡಿ’
Discussion about this post