ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಪ್ರಮಾಣದ ಮಳೆಯಾಗುತ್ತಿದೆ. ಈ ಮಳೆ ಮುಂದುವರೆಯುವ ಸಾಧ್ಯತೆ ಹೆಚ್ಚಿದೆ.
ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಅಗಸ್ಟ 27ರ ಇಡೀ ದಿನ ಮಳೆ ಸುರಿಯಲಿದೆ. ಅಗಸ್ಟ 28ರಂದು ಮಳೆ ಕಡಿಮೆಯಾಗುವ ಸಾಧ್ಯತೆಯಿದೆ. ಆದರೆ, ಅಗಸ್ಟ್ 28ರಂದು ಸಹ ಪದೇ ಪದೇ ಮಳೆ ಸುರಿಯುವ ಲಕ್ಷಣಗಳಿವೆ.
ಕರಾವಳಿ ಭಾಗದಲ್ಲಿ ಮಳೆ ಅತ್ಯಧಿಕವಾಗಿದೆ. ಮಲೆನಾಡು ಪ್ರದೇಶದಲ್ಲಿಯೂ ನಿರಂತರ ಮಳೆ ಸುರಿಯುತ್ತಿದೆ. ನದಗಳೆಲ್ಲವೂ ಅಪಾಯದ ಅಂಚಿನಲ್ಲಿ ಹರಿಯುತ್ತಿದ್ದು, ಸಮೀಪ ಹೋಗುವುದು ಕ್ಷೇಮವಲ್ಲ.
ವಿವಿಧ ಜಲಾನಯನ ಪ್ರದೇಶದಲ್ಲಿ ಮಳೆ ಜೋರಾಗಿರುವುದರಿಂದ ಜಲಾಶಯಗಳ ನೀರಿನ ಮಟ್ಟವೂ ಏರಿಕೆ ಕಂಡಿದೆ.
ಅಗಸ್ಟ 27ರ ಮಳೆ ಪ್ರಮಾಣದ ವಿವರ ಇಲ್ಲಿ ನೋಡಿ..
ಅಗಸ್ಟ 27ರ ಜಲಾಶಯಗಳ ನೀರಿನ ಮಟ್ಟದ ವಿವರ ಇಲ್ಲಿ ನೋಡಿ..
Discussion about this post