ಪ್ರತಿ ದಿನ ಪತ್ನಿ ಜೊತೆ ಜಗಳ ಮಾಡುತ್ತಿದ್ದ ಹಳಿಯಾಳದ ಸುರೇಶ ಮರಾಠಿ ಅವರು ಪತ್ನಿ ತವರಿಗೆ ಹೋದಾಗ ಏಕಾಂತ ಕಾಡಿದ್ದರಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಹಳಿಯಾಳದ ಆರ್ಲವಾಡದಲ್ಲಿ ಸುರೇಶ ಮರಾಠಿ (35) ಅವರು ವಾಸವಾಗಿದ್ದರು. ಕೂಲಿ ಕೆಲಸ ಮಾಡಿಕೊಂಡಿದ್ದ ಅವರು ನಿತ್ಯವೂ ಪತ್ನಿ ಜೊತೆ ಜಗಳ ಮಾಡುತ್ತಿದ್ದರು. ಈ ಹಿಂಸೆ ಸಹಿಸದೇ ಅವರ ಪತ್ನಿ ತವರು ಮನೆಗೆ ಹೋಗಿದ್ದರು.
ಪತ್ನಿ ತವರು ಮನೆಗೆ ಹೋದ ನಂತರ ಸುರೇಶ ಮರಾಠಿ ಅವರು ಸರಾಯಿ ಕುಡಿಯಲು ಶುರು ಮಾಡಿದರು. ಮದ್ಯ ಸೇವನೆ ಮಿತಿ ಮೀರಿದರೂ ಅವರು ವ್ಯಸನದಿಂದ ಹೊರಬರಲಿಲ್ಲ. ಪತ್ನಿ ಮನೆಯಲ್ಲಿಲ್ಲದ ನೋವಿನಲ್ಲಿಯೇ ಅವರು ಕೊರಗಲು ಶುರು ಮಾಡಿದರು.
ಅಗಸ್ಟ 25ರಂದು ಮಧ್ಯಾಹ್ನ ಅವರು ಪತ್ನಿಯ ಸೀರೆಯ ಜೊತೆ ಮನೆಯಲ್ಲಿದ್ದ ಮೂರನೇ ಕೋಣೆ ಪ್ರವೇಶಿಸಿದ್ದು, ಅಲ್ಲಿಂದ ಎಷ್ಟು ಹೊತ್ತಾದರೂ ಮರಳಿ ಬರಲಿಲ್ಲ. 26ರಂದು ನೋಡಿದಾಗ ಅವರು ಆ ಸೀರೆಯಿಂದ ನೇಣು ಹಾಕಿಕೊಂಡು ಸಾವನಪ್ಪಿದ್ದರು.
ಈ ವಿದ್ಯಮಾನದ ಬಗ್ಗೆ ಸುರೇಶ ಮರಾಠಿ ಅವರ ಅಣ್ಣ ನಾರಾಯಣ ಮರಾಠಿ ಅವರು ಪೊಲೀಸರಿಗೆ ಮಾಹಿತಿ ನೀಡಿದರು. ತಾವು ನೋಡುವುದರೊಳಗೆ ಸುರೇಶ ಮರಾಠಿ ಅವರು ಸಾವನಪ್ಪಿದ ವಿಷಯ ತಿಳಿಸಿದರು. ಹಳಿಯಾಳ ಪೊಲೀಸರು ಪ್ರಕರಣ ದಾಖಲಿಸಿದರು.
Discussion about this post