ಪದೇ ಪದೇ ಆತ್ಮಹತ್ಯೆ ಬಗ್ಗೆ ಯೋಚಿಸುತ್ತಿದ್ದ ದಾಂಡೇಲಿಯ ಲಕ್ಕಪ್ಪ ನಾಯ್ಕರ್ ಅವರು ಕೊನೆಗೂ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳದಂತೆ ಸಾಕಷ್ಟು ಜನ ಬುದ್ದಿ ಹೇಳಿದರೂ ಅವರು ಅದನ್ನು ಕೇಳದೇ ದುಡುಕು ನಿರ್ಧಾರದಿಂದ ಸಾವನ್ಪಿದ್ದಾರೆ.
ದಾಂಡೇಲಿಯ ಲಮಾಣಿಚಾಳದಲ್ಲಿ ಲಕ್ಕಪ್ಪ ನಾಯ್ಕರ್ (46) ಅವರು ವಾಸವಾಗಿದ್ದರು. ಅಲ್ಲಿ-ಇಲ್ಲಿ ಕೂಲಿ ಕೆಲಸ ಮಾಡಿಕೊಂಡು ಅವರು ಬದುಕಿದ್ದರು. ಈ ನಡುವೆ `ತಮ್ಮ ಕುಟುಂಬ ಸರಿ ಇಲ್ಲ’ ಎಂಬ ಕಾರಣದಿಂದ ಅವರು ಕೊರಗುತ್ತಿದ್ದರು. ಅದಕ್ಕಾಗಿ ಅನೇಕ ಬಾರಿ ಆತ್ಮಹತ್ಯೆಯ ಯೋಚನೆ ಮಾಡಿದ್ದರು. ಅನೇಕರು ಅವರಿಗೆ ಬುದ್ದಿ ಹೇಳಿದ್ದರು.
ಅಗಸ್ಟ 29ರಂದು ಸಹ ಅವರು ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಆ ವೇಳೆ ಕುಟುಂಬದವರೇ ಅವರ ಪ್ರಯತ್ನಕ್ಕೆ ತಡೆ ನೀಡಿದ್ದರು. ಆಗಲೂ ಬುದ್ದಿ ಹೇಳಿ ಆತ್ಮಹತ್ಯೆ ಅಪರಾಧ ಎಂದು ತಿಳಿಸಿದ್ದರು. ಆಗ ಸಮಾದಾನವಾಗಿದ್ದ ಲಕ್ಕಪ್ಪ ನಾಯ್ಕರ್ ಅವರು ರಾತ್ರಿ ಮನೆಯಲ್ಲಿದ್ದವರೆಲ್ಲ ಗಣಪತಿ ಪೂಜೆಯಲ್ಲಿ ತೊಡಗಿದಾಗ ಮತ್ತೊಮ್ಮೆ ಆತ್ಮಹತ್ಯೆಗೆ ಪ್ರಯತ್ನಿಸಿದರು.
ತಾವು ಮಲಗುವ ಕೋಣೆಯ ಫ್ಯಾನಿಗೆ ನೇಣು ಹಾಕಿಕೊಂಡು ಅವರು ಸಾವನಪ್ಪಿದರು. ಹಳೆ ದಾಂಡೇಲಿ ಲಮಾಣಚಾಳ ಲಕ್ಷಿö್ಮಗುಡಿ ಬಳಿಯ ನಿಖಿಲ್ ನಾಯ್ಕರ್ ಅವರು ಚಿಕ್ಕಪ್ಪನ ಸಾವಿನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು. ದಾಂಡೇಲಿ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿದರು.
