ಮೇಷ ರಾಶಿ: ನಿಮ್ಮೊಳಗಿನ ಧೈರ್ಯ ಉತ್ಸಾಹ ಕೊಡಲಿದೆ. ಅಂಹಕಾರ ಸ್ವಭಾವ ಪ್ರದರ್ಶಿಸಿದಲ್ಲಿ ಶುಭ ಕಾರ್ಯಗಳಿಗೆ ಅಡ್ಡಿ ಆಗಲಿದೆ. ಹೊಸ ಚಿಂತನೆಗಳನ್ನು ಕಾರ್ಯರೂಪಕ್ಕೆ ತನ್ನಿ.
ವೃಷಭ ರಾಶಿ: ಸಹನೆಯಿಂದ ವರ್ತಿಸುವುದು ನಿಮಗೆ ಒಳತು. ಶೃದ್ಧೆಯಿಂದ ಓದು ಜ್ಞಾನ ಕೊಡಲಿದೆ. ನಿಮ್ಮ ದಾರಿ ಸುಗಮವಾಗುವ ಲಕ್ಷಣಗಳಿವೆ.
ಮಿಥುನ ರಾಶಿ: ಚಂಚಲ ಸ್ವಭಾವದಿಂದ ಹೊರ ಬನ್ನಿ. ನಿಮ್ಮ ನಿರ್ಧಾರ ಸ್ಪಷ್ಠವಾಗಿರಲಿ. ಸಂವಹನ ಕೌಶಲ್ಯ ಬೇರೆಯವರನ್ನು ಸೆಳೆಯುತ್ತದೆ.
ಕರ್ಕ ರಾಶಿ: ಭಾವನಾತ್ಮಕ ವಿಚಾರಗಳು ಸಂಬoಧ ಬೆಸೆಯಲಿದೆ. ಮನಸ್ಸಿನಲ್ಲಿನ ಗೊಂದಗಳನ್ನು ದೂರ ಮಾಡಿಕೊಳ್ಳಿ. ಅತಿಯಾದ ಚಿಂತೆ ಒಳ್ಳೆಯದಲ್ಲ.
ಸಿಂಹ ರಾಶಿ: ನಿಮ್ಮ ಬೆಳವಣಿಗೆಗೆ ಸೃಜನಶೀಲ ಗುಣ ಕಾರಣವಾಗಲಿದೆ. ಶತ್ರುಗಳ ಕಾಟದಿಂದ ಜೀವನದಲ್ಲಿ ತೊಂದರೆ ಎದುರಾಗಬಹುದು. ನಾಯಕತ್ವ ಗುಣದಿಂದ ಶತ್ರುಗಳಿಂದ ರಕ್ಷಣೆ ಸಾಧ್ಯವಿದೆ.
ಕನ್ಯಾ ರಾಶಿ: ನಿಮ್ಮ ಆಲೋಚನೆಗಳು ಸರಿಯಾದ ದಿಕ್ಕಿನಲ್ಲಿರಲಿ. ದ್ವಂದ್ವ ಮನಸ್ಥಿಯಿಂದ ಹೊರ ಬರುವುದು ಉತ್ತಮ. ನಿಷ್ಠೆಯಿಂದ ಕೆಲಸ ಮಾಡಿ.
ತುಲಾ ರಾಶಿ: ನೀವು ಮಾಡುವ ತಪ್ಪು ನಿರ್ಧಾರ ಜೀವನದಲ್ಲಿ ದುಷ್ಪರಿಣಾಮ ಬೀರಬಹುದು. ಹೀಗಾಗಿ ಈ ದಿನ ನಿರ್ಧಾರ ತೆಗೆದುಕೊಳ್ಳದಿರುವುದು ಉತ್ತಮ.
ವೃಶ್ಚಿಕ ರಾಶಿ: ಹಿಂಸೆ ಸ್ವಭಾವವನ್ನು ಸಹಿಸಿಕೊಳ್ಳದಿರಿ. ನಿಷ್ಠೆಯಿಂದ ಕೆಲಸ ಮಾಡಿದರೆ ಸಾಧನೆ ಸಾಧ್ಯವಿದೆ. ಧೈರ್ಯದಿಂದ ಬದುಕುವುದನ್ನು ಕಲಿಯಿರಿ.
ಧನು ರಾಶಿ: ನಿಮ್ಮೊಳಗಿನ ಉತ್ಸಾಹ ಇಮ್ಮಡಿ ಆಗಲಿದೆ. ಅತಿಯಾದ ವಿಶ್ವಾಸದಿಂದ ಕೆಲಸ ಮಾಡಿ. ದುರದೃಷ್ಠಿಯ ಯೋಜನೆಗಳಿಗೆ ತಡೆ ಬೀಳುವ ಸಾಧ್ಯತೆಯಿದ್ದರೂ, ಆತಂಕ ಬೇಡ.
ಮಕರ ರಾಶಿ: ನಿಮಗೆ ನೀಡಿದ ಜವಾಬ್ದಾರಿಗಳಿಂದ ತಪ್ಪಿಸಿಕೊಳ್ಳಬೇಡಿ. ಸಂಕೋಚದ ಸ್ವಭಾವ ಒಳಿತಲ್ಲ. ಪರಿಶ್ರಮದಿಂದ ಕೆಲಸ ಮಾಡಿದರೆ ಯಶಸ್ಸು ಸಿದ್ಧ.
ಕುಂಭ ರಾಶಿ: ಸಹಕಾರದ ಮನೋಭಾವನೆ ಅಡಿ ಕೆಲಸ ಮಾಡಿದರೆ ಉತ್ತಮ. ಕೆಲ ಕಾರ್ಯಗಳಿಗೆ ಅಡ್ಡಿ ಆಗಲಿದೆ. ಸೃಜನಶೀಲತೆ ಬೆಳೆಸಿಕೊಂಡರೆ ಆರ್ಥಿಕ ಲಾಭ ಸಾಧ್ಯ.
ಮೀನ ರಾಶಿ: ನಿಮ್ಮೊಳಗಿನ ಸೌಂದರ್ಯ ಬೇರೆಯವರ ಮೆಚ್ಚುಗೆಗಳಿಸಲಿದೆ. ಸಮಸ್ಯೆಗಳು ಬಂದರೆ ಧೈರ್ಯವಾಗಿ ಎದುರಿಸಿ.
