ಎಲ್ಲರ ಜೊತೆ ಸರಿಯಾಗಿಯೇ ಇದ್ದ ಕುಮಟಾದ ಅಶೋಕ ಪಟಗಾರ ಅವರು ದಿಢೀರ್ ಆಗಿ ಆತ್ಮಹತ್ಯೆಯ ನಿರ್ಧಾರ ಮಾಡಿದ್ದಾರೆ. ಅವರ ಸಾವಿನಲ್ಲಿ ಕುಟುಂಬದವರಿಗೆ ಸಂಶಯ ಕಾಡುತ್ತಿದೆ.
ಕುಮಟಾ ಕೋಡ್ಕಣಿಯ ಐಗಳಕೂರ್ವೆ ಪ್ಲಾಟಿನಲ್ಲಿ ಅಶೋಕ ಪಟಗಾರ್ (47) ಅವರು ವಾಸವಾಗಿದ್ದರು. ಗೌಂಡಿ ಕೆಲಸ ಮಾಡಿಕೊಂಡು ಅವರು ಸಂಸಾರ ನಡೆಸುತ್ತಿದ್ದರು. ಅಗಸ್ಟ 28ರ ರಾತ್ರಿ 10 ಗಂಟೆಯವರೆಗೂ ಅವರು ಸರಿಯಾಗಿಯೇ ಇದ್ದರು. ಆದರೆ, ಅಗಸ್ಟ 29ರ ಬೆಳಗ್ಗೆ ಅವರು ಶವವಾಗಿದ್ದರು.
ಅಗಸ್ಟ 29ರ ಬೆಳಗ್ಗೆ 10 ಗಂಟೆಯ ಅವಧಿಯಲ್ಲಿ ತಾವು ವಾಸಿಸುವ ಮನೆಯಲ್ಲಿ ಅಶೋಕ ಪಟಗಾರ್ ಅವರು ನೇಣು ಹಾಕಿಕೊಂಡ ಸ್ಥಿತಿಯಲ್ಲಿದ್ದರು. ಕೋಣೆಯಲ್ಲಿದ್ದ ಅವರ ಶವ ನೋಡಿದ ಅಶೋಕ ಪಟಗಾರ ಅವರ ಪತ್ನಿ ರಾಧಾ ಪಟಗಾರ್ ಸಾವಿನ ಬಗ್ಗೆ ಸಂಶಯವ್ಯಕ್ತಪಡಿಸಿದರು.
ಈ ಬಗ್ಗೆ ತನಿಖೆಗೆ ಒತ್ತಾಯಿಸಿ ಅವರು ಪೊಲೀಸ್ ದೂರು ನೀಡಿದರು. ಕುಮಟಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
