ಹಳಿಯಾಳದ ಭಾಗವತಿ ಅರಣ್ಯ ಪ್ರದೇಶದಲ್ಲಿ ಅದೇ ಊರಿನ ಅದಾಂಡೇಲಪ್ಪ ಆರಮುಗಂ ಬಂದೂಕು ಹಿಡಿದು ತಿರುಗಾಡುತ್ತಿದ್ದು, ಅರಣ್ಯ ಅಧಿಕಾರಿಗಳು ಅವರನ್ನು ವಶಕ್ಕೆಪಡೆದಿದ್ದಾರೆ. ಅದಾಂಡೇಲಪ್ಪ ಆರಮುಗಂ ಅವರ ಜೊತೆ ಗೌಳಿವಾಡದ ಕೇದಾರಿ ಸೆಳಕೆ ಹಾಗೂ ಗಂಗಾರಾಮ ಜಾನೇಕರ್ ಸಹ ಸಿಕ್ಕಿಬಿದ್ದಿದ್ದಾರೆ.
ಅಗಸ್ಟ 14ರಂದು ಈ ಮೂವರು ಅರಣ್ಯಾಧಿಕಾರಿಗಳ ಬಳಿ ಸಿಕ್ಕಿಬಿದ್ದಿದ್ದು, ಈ ಪ್ರಕರಣ ಇದೀಗ ಪೊಲೀಸರಿಗೆ ವರ್ಗವಾಗಿದೆ. ಭಾಗವತಿಯ ದಾಂಡೇಲಪ್ಪ ಆರಮುಗಂ ಅವರು ಅನಧಿಕೃತ ಬಂದೂಕುಹೊoದಿದ್ದರು. ಕಳ್ಳಬೇಟೆಗಾಗಿ ಅವರು ಕಾಡುಗಳಲ್ಲಿ ಅಲೆದಾಡುತ್ತಿದ್ದರು. ಗೌಳಿವಾಡದ ಕೇದಾರಿ ಸೆಳಕೆ ಹಾಗೂ ಗಂಗಾರಾಮ ಜಾನೇಕರ್ ಸಹ ಅವರ ಜೊತೆ ಕಾಡು ಮಾಂಸದ ಹಿಂದೆ ಹೋಗುತ್ತಿದ್ದರು.
ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ಭಾಗವತಿ ವಲಯ ಅರಣ್ಯಾಧಿಕಾರಿಗಳು ಅಗಸ್ಟ 14ರ ನಸುಕಿನ 5ಗಂಟೆಗೆ ಕಾಡು ಪ್ರವೇಶಿಸಿದರು. ಬಂದೂಕು ಹಿಡಿದು ಅಲೆದಾಡುತ್ತಿದ್ದ ಮೂವರನ್ನು ವಶಕ್ಕೆಪಡೆದರು. ಅನುಮತಿ ಇಲ್ಲದೇ ಅರಣ್ಯ ಪ್ರವೇಶಿಸಿದ್ದನ್ನು ಸೇರಿ ಅಕ್ರಮ ಬಂದೂಕು ಹೊಂದಿದನ್ನು ಪತ್ತೆ ಮಾಡಿದರು. ಆ ವೇಳೆ ಆ ಮೂವರು ಕಳ್ಳಬೇಟೆಗೆ ಬಂದಿದನ್ನು ಒಪ್ಪಿಕೊಂಡರು.
ಅನಧಿಕೃತ ಬಂದೂಕು ಇದ್ದ ಕಾರಣ ಭಾರತೀಯ ಆಯುಧ ಕಾಯ್ದೆಯಲ್ಲಿ ತನಿಖೆ ನಡೆಸುವಂತೆ ಭಾಗವತಿ ಅರಣ್ಯ ಇಲಾಖೆ ಕಚೇರಿಯ ಮೋಚಣಿದಾರ ಶಿವರಾಜಸಿದ್ರಾಮ ಪಾಟೀಲ್ ದೂರಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
