ಭಟ್ಕಳದ ಗಡಿಭಾಗದವಾದ ಶಿರೂರು ಪೊಲೀಸ್ ತಪಾಸಣಾ ಕೇಂದ್ರದ ಬಳಿ ನಡೆದ ಅಪಘಾತದಲ್ಲಿ ಹಡವಿನಕೋಣೆಯ ಗೋಪಾಲ ಜಿ ಮೇಸ್ತ ಅವರು ಸಾವನಪ್ಪದ್ದಾರೆ. ಅವರ ಜೊತೆಗಿದ್ದ ಮನೋಜ ಮೇಸ್ತ ಅವರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದಾರೆ.
ಗೋಪಾಲ ಮೇಸ್ತ ಹಾಗೂ ಮನೋಜ ಮೇಸ್ತ ಅವರು ಶುಕ್ರವಾರ ರಾತ್ರಿ ಗಣೇಶ ಮೂರ್ತಿ ನೋಡಲು ಪೇಟೆಗೆ ಬಂದಿದ್ದರು. ರಾತ್ರಿ 1.30ರ ಆಸುಪಾಸಿನಲ್ಲಿ ಉತ್ಸವ ಮುಗಿಸಿ ಅವರು ಊಟಕ್ಕೆ ಹೋಗುತ್ತಿದ್ದರು. ಆ ವೇಳೆ ಲಾರಿಯೊಂದು ಅವರಿಗೆ ಡಿಕ್ಕಿಯಾಯಿತು.
ಲಾರಿ ಗುದ್ದಿದ ರಭಸಕ್ಕೆ ಗೋಪಾಲ ಮೇಸ್ತ ಅಲ್ಲಿಯೇ ಸಾವನಪ್ಪಿದರು. ಮನೋಜ್ ಮೇಸ್ತ ಗಂಭೀರ ಗಾಯಗೊಂಡರು. ಮನೋಜ ಮೇಸ್ತ ಅವರನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ನಂತರ ಕುಂದಾಪುರದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು.
