ಹೊನ್ನಾವರದಲ್ಲಿ ಧಾರಾಕಾರಾ ಮಳೆ ಸುರಿಯುತ್ತಿರುವುದರಿಂದ ಹಳ್ಳ-ಕೊಳ್ಳಗಳು ತುಂಬಿದ್ದು, ಕೂಲಿ ಕೆಲಸಕ್ಕೆ ಹೊರಟಿದ್ದ ಗಣೇಶ ಮರಾಠಿ ಅವರು ಹಳ್ಳದಲ್ಲಿ ಬಿದ್ದು ಸಾವನಪ್ಪಿದ್ದಾರೆ.
ಹೊನ್ನಾವರದ ಉಪ್ಪೋಣಿ ಸಮೀಪದ ಹುಕ್ಕೋಳಿ ಬಳಿಯ ಮಹಿಮೆಯಲ್ಲಿ ಗಣೇಶ ಮರಾಠಿ (46) ಅವರು ವಾಸವಾಗಿದ್ದರು. ಕೂಲಿ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದ ಅವರಿಗೆ ಕೆಲಸ ಮಾಡದೇ ಆ ದಿನ ಕಳೆಯುವ ಹಾಗಿರಲಿಲ್ಲ. ಹೀಗಾಗಿ ಅಗಸ್ಟ 27ರ ಬೆಳಗ್ಗೆ ಅವರು ಕೆಲಸಕ್ಕೆ ಹೋಗುವುದಾಗಿ ಹೇಳಿ ಹೊರಟಿದ್ದರು. ಆದರೆ, ಸಂಜೆಯಾದರೂ ಮನೆಗೆ ಮರಳಲಿಲ್ಲ.
ಆ ದಿನ ಅವರು ಹುಕ್ಕೋಳಿಯಿಂದ ಬೈಲಗದ್ದೆ ಮಾಸ್ತಿಮನೆ ಕಡೆ ಹಾಯ್ದು ಹಳ್ಳದ ಬಳಿ ಹೊರಟಾಗ ಕಾಲು ಜಾರಿತು. ಪರಿಣಾಮ ಹಳ್ಳದಲ್ಲಿ ಕೊಚ್ಚಿ ಹೋದರು. ಸಾಕಷ್ಟು ಹುಡುಕಾಟ ನಡೆಸಿದರೂ ಅವರು ಸಿಗಲಿಲ್ಲ. ಅಗಸ್ಟ 30ರ ಬೆಳಗ್ಗೆ 11 ಗಂಟೆ ವೇಳೆಗೆ ಗಣೇಶ ಮರಾಠಿ ಅವರು ಶವವಾಗಿ ಸಿಕ್ಕರು. ತಂದೆಯ ಸಾವಿನ ಬಗ್ಗೆ ಪುತ್ರ ಪ್ರಮೋದ ಮರಾಠಿ ಪೊಲೀಸರಿಗೆ ಮಾಹಿತಿ ನೀಡಿದರು. ಹೊನ್ನಾವರ ಪೊಲೀಸರು ಪ್ರಕರಣ ದಾಖಲಿಸಿದರು.
