ಮೇಷ ರಾಶಿ: ನಿಮ್ಮ ಕುತೂಹಲ ಹೆಚ್ಚಾಗಲಿದೆ. ಕುಟುಂಬದ ಜೊತೆ ಸಂತೋಷದ ಕ್ಷಣ ಆನಂದಿಸುವಿರಿ. ಉತ್ತಮ ಕಾರ್ಯಗಳಿಗೆ ಕಾಯುವುದು ಯೋಗ್ಯ. ನಿಮ್ಮ ನಡೆ-ನುಡಿ ಗಂಭೀರವಾಗಿದ್ದರೆ ಒಳಿತು.
ವೃಷಭ ರಾಶಿ: ನಿಮ್ಮ ಕೆಲಸ ನಿಧಾನವಾಗಿ ಸಾಗಿದರೂ ಅದರಲ್ಲಿ ಯಶಸ್ಸು ಸಿಗುತ್ತದೆ. ಹೊಸ ಆದಾಯಗಳ ಅವಕಾಶ ಬರಲಿದೆ. ಹಣ ಭದ್ರತೆಯ ಬಗ್ಗೆ ಯೋಚಿಸಿ, ಖರ್ಚುಗಳನ್ನು ಕಡಿಮೆ ಮಾಡಿ. ಅನಾವಶ್ಯಕ ಹೂಡಿಕೆ ಸಹ ಸರಿಯಲ್ಲ.
ಮಿಥುನ ರಾಶಿ: ನಿಮ್ಮ ಬೆಳವಣಿಗೆಗೆ ತಕ್ಕ ಅವಕಾಶಗಳು ಸಿಗಲಿದೆ. ಹಳೆಯ ನೆನಪುಗಳು ನಿಮ್ಮನ್ನು ಆವರಿಸಲಿದೆ. ನಿದ್ದೆ ಬಾರದ ಸಮಸ್ಯೆ ನಿಮ್ಮನ್ನು ಕಾಡಬಹುದು. ಹೊಸ ಯೋಜನೆಗಳ ಅನುಷ್ಠಾನಕ್ಕೆ ಇದು ಸಮಯವಲ್ಲ.
ಕರ್ಕ ರಾಶಿ: ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಧೈರ್ಯದಿಂದ ಮುನ್ನಡೆಯಬೇಕು. ಕಾರ್ಯಕ್ಷೇತ್ರದಲ್ಲಿ ಬದಲಾವಣೆ ಸಾಧ್ಯವಿದೆ. ಆರೋಗ್ಯದ ವಿಷಯದಲ್ಲಿ ಎಚ್ಚರಿಕೆ ಅಗತ್ಯ. ಸಾಕಷ್ಟು ನೀರು ಕುಡಿಯಿರಿ.
ಸಿಂಹ ರಾಶಿ: ನಿಮ್ಮ ಸವಾಲುಗಳನ್ನು ಆತ್ಮವಿಶ್ವಾಸದಿಂದ ಗೆಲ್ಲಲು ಸಾಧ್ಯವಿದೆ. ವ್ಯವಹಾರದಲ್ಲಿ ಒತ್ತಡ ಸಹಜ. ಹಣಕಾಸು ವಿಷಯದಲ್ಲಿ ಅತಿಯಾದ ನಿರೀಕ್ಷೆ ಬೇಡ. ಆರೋಗ್ಯ ಸುಧಾರಣೆ ಆಗಲಿದೆ.
ಕನ್ಯಾ ರಾಶಿ: ಬೇರೆ ಬೇರೆ ಕ್ಷೇತ್ರದಲ್ಲಿರುವವರನ್ನು ಭೇಟಿ ಮಾಡಿ, ಅವರಿಂದ ಪ್ರೇರಣೆಪಡೆಯುವಿರಿ. ಕುಟುಂಬದ ಒಳತಿನ ಬಗ್ಗೆ ಯೋಚಿಸುವುದು ಮುಖ್ಯ. ಅನಗತ್ಯ ವಿಷಯಗಳಿಂದ ನೀವು ದೂರವಿರುವುದು ಉತ್ತಮ.
ತುಲಾ ರಾಶಿ: ಗುರುಹಿರಿಯರ ಸಹಕಾರ ಸಿಗಲಿದೆ. ಉದ್ಯೋಗದಲ್ಲಿ ಪ್ರಗತಿ ಸಾಧ್ಯವಿದೆ. ನೀವು ಕೈಗೊಳ್ಳುವ ನಿರ್ಧಾರ ಸರಿಯಾಗಿರಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಿದರೆ ಮನಸ್ಸಿಗೂ ನೆಮ್ಮದಿ ಸಿಗಲಿದೆ.
ವೃಶ್ಚಿಕ ರಾಶಿ: ನಿಮ್ಮ ಶ್ರಮಕ್ಕೆ ಸ್ವಲ್ಪ ಸಮಯದಲ್ಲಿ ಪ್ರತಿಫಲ ಸಿಗಲಿದೆ. ಆರೋಗ್ಯ ಹದಗೆಡುವ ಸಾಧ್ಯತೆಯಿದೆ. ನಿಮ್ಮ ಮನೋಬಲ ಹೆಚ್ಚಾಗಲಿದೆ. ಹಣಕಾಸು ವಿಷಯದಲ್ಲಿ ಸುಧಾರಣೆ ಸಾಧ್ಯ.
ಧನು ರಾಶಿ: ಕೆಲಸದ ಕಡೆ ಗಮನ ಮುಖ್ಯ. ಅನಗತ್ಯ ವೆಚ್ಚಗಳನ್ನು ತಪ್ಪಿಸಿ. ಹೊಸ ಅವಕಾಶಗಳನ್ನು ಸ್ವೀಕರಿಸಿ. ಹಳೆಯ ಸ್ನೇಹಿತರ ಭೇಟಿ ಸಾಧ್ಯವಿದೆ.
ಮಕರ ರಾಶಿ: ಹಣಕಾಸಿನ ಯೋಜನೆಗಳಲ್ಲಿ ಮುನ್ನಡೆ ಸಾಧಿಸುವಿರಿ. ಹೊಸ ಆದಾಯಕ್ಕೆ ದಾರಿ ಸಿಗಲಿದೆ. ಸ್ವಚ್ಚತೆ ಕಾಪಾಡಿಕೊಂಡರೆ ಆರೋಗ್ಯ ಸಮಸ್ಯೆ ಕಾಡುವುದಿಲ್ಲ.
ಕುಂಭ ರಾಶಿ: ನಿಮಗೆ ಪದೋನ್ನತಿ ಸಿಗುವ ಸಮಯ ಬಂದಿದೆ. ಹೊಸ ಯೋಜನೆಗಳ ಜಾರಿಗೆ ಇದು ಸಮಯ ಅಲ್ಲ. ಸಮಾಧಾನದಿಂದ ಕೆಲಸ ಮಾಡಿ. ಸೃಜನಾತ್ಮಕ ಕಲೆಗೆ ಯಶಸ್ಸು ಖಚಿತ.
ಮೀನ ರಾಶಿ: ಕುಟುಂಬದಲ್ಲಿ ಕಲಹವಾಗುವ ಲಕ್ಷಣವಿದೆ. ಆರೋಗ್ಯದಲ್ಲಿ ಜಾಗೃತೆ ಬೇಕು. ಹಣಕಾಸು ವಿಷಯಗಳು ಸ್ಥಿರವಾಗಿರಲಿದೆ. ಆದಾಯ ಕಡಿಮೆ,ಖರ್ಚು ಜಾಸ್ತಿ ಆಗದಂತೆ ನೋಡಿಕೊಳ್ಳಿ.
