ಸಾಮಾನ್ಯ ಸಿಗರೇಟುಗಳಿಗಿಂಥಲೂ 10 ಪಟ್ಟು ಅಪಾಯಕಾರಿಯಾದ E-ಸಿಗರೇಟು ಭಟ್ಕಳದಲ್ಲಿ ಮಾರಾಟಕ್ಕಿದ್ದು, ಪಿಎಸ್ಐ ನವೀನ ನಾಯ್ಕ, ತಿಮ್ಮಪ್ಪ ನಾಯ್ಕ ಜೊತೆ ಹಣಮಂತ ಬೀರಾದರ್ ಅವರು ಆ ಮಾರಾಟಕ್ಕೆ ತಡೆ ಒಡ್ಡಿದ್ದಾರೆ. ಒಟ್ಟು 2.39 ಲಕ್ಷ ರೂ ಮೌಲ್ಯದ ನಿಷೇಧಿತ ಇ-ಸಿಗರೇಟುಗಳನ್ನು ಅವರು ವಶಕ್ಕೆಪಡೆದಿದ್ದಾರೆ.
ಭಟ್ಕಳದ ಬಂದರ್ ರೋಡಿನ ಮುಗ್ದಂ ಕಾಲೋನಿ ಗುಲ್ಚಾರ್ ಸ್ಟಿಟಿನ ನಿವಾಸಿ ಮಕ್ಬುಲ್ ಮಡಿಕಲ್ ನಿಷೇಧಿತ E-ಸಿಗರೇಟುಗಳನ್ನು ಮಾರಾಟ ಮಾಡುತ್ತಿದ್ದರು. ಸೆಪ್ಟೆಂಬರ್ 1ರ ರಾತ್ರಿ 11.30ಕ್ಕೆ ಪೊಲೀಸರು ನಿಷೇಧಿತ ಇ-ಸಿಗರೇಟು ಮಾರಾಟ ಮಾಡುವ ಮಳಿಗೆ ಮೇಲೆ ದಾಳಿ ನಡೆಸಿದರು. ಲಕ್ಷ ರೂ ಬೆಲೆಯ ಇ-ಸಿಗರೇಟುಗಳ ಜೊತೆ ಅದಕ್ಕೆ ಬಳಸುವ ದೃವ ಪದಾರ್ಥಗಳು ಅಲ್ಲಿ ಸಿಕ್ಕಿದವು. ಒಟ್ಟು 51 ನಿಕೋಟಿನ್ ಲಿಕ್ವಿಟ್ ರಿಫಿಲ್ಗಳನ್ನು ಪೊಲೀಸರು ಈ ವೇಳೆ ಜಪ್ತು ಮಾಡಿದರು.
ಇ-ಸಿಗರೇಟು ಸಾಮಾನ್ಯ ಸಿಗರೇಟಿಗಿಂತಲೂ ಹೆಚ್ಚು ಅಪಾಯಕಾರಿ. ಬ್ಯಾಟರಿ ಚಾಲಿತವಾಗಿ ಈ ಸಿಗರೇಟು ಕೆಲಸ ಮಾಡುತ್ತದೆ. ಎಷ್ಟು ಸುಟ್ಟರೂ ಸುಡದೇ ಇರುವುದು ಈ ಸಿಗರೇಟಿನ ವಿಶೇಷ. ಅತಿ ಹೆಚ್ಚು ನಿಕೋಟಿನ್ ಅಂಶವನ್ನು ಈ ಸಿಗರೇಟು ಒಳಗೊಂಡಿರುತ್ತದೆ. ಆಧುನಿಕ ವಿನ್ಯಾಸ, ವಿವಿಧ ರುಚಿ ಹಾಗೂ ಸುಲಭ ಬಳಕೆ ಅನುಭವ ನೀಡುವುದರಿಂದ ವಿದೇಶಗಳಲ್ಲಿ ಇ-ಸಿಗರೇಟು ಜನಪ್ರಿಯವಾಗಿದೆ. ಆದರೆ, ಇಲ್ಲಿ ಇ-ಸಿಗರೇಟು ಬಳಕೆ ಹಾಗೂ ಮಾರಾಟಕ್ಕೆ ಅನುಮತಿ ಇಲ್ಲ. ಇ-ಸಿಗರೇಟಿನಲ್ಲಿ ನಿಕೋಟಿನ್ ಜೊತೆ ಪ್ರೊಪಿಲಿನ್ ಗ್ಲೈಕಾಲ್, ಗ್ಲೈಸರಿನ್ ಅಂಶಗಳಿರುತ್ತವೆ. ಆ ರಾಸಾಯನಿಕ ಸೇವನೆಯಿಂದ ಬಾಯಿ, ಮೆದುಳು ಸೇರಿ ದೇಹದ ವಿವಿಧ ಅಂಗಾಗoಗಳಿಗೆ ಅಡ್ಡಪರಿಣಾಮಗಳಿವೆ. ಉಸಿರಾಟದ ಕಾಯಿಲೆ, ಕೂದಲು ಉದುರುವಿಕೆ, ಕೆಮ್ಮು, ಶ್ವಾಸಕೋಶದ ಹಾನಿಗೂ ಇ-ಸಿಗರೇಟು ಕಾರಣವಾಗುತ್ತದೆ. ಹೃದಯರೋಗಗಳಿಗೂ ಇ-ಸಿಗರೇಟು ದಾರಿ ಮಾಡಿಕೊಡುತ್ತದೆ.
ಇ-ಸಿಗರೇಟಿನಲ್ಲಿರುವ ಫಾರ್ಮಾಲ್ಡಿಹೈಡ್, ಅಸೆಟಾಲ್ಡಿಹೈಡ್ ಎಂಬ ರಾಸಾಯನಿಕಗಳು ಕಾನ್ಸರ್ ರೋಗ ತರಿಸುತ್ತವೆ. ಪಾರ್ಶವಾಯು ಹಾಗೂ ನರ ಸಮಸ್ಯೆಗಳಿಗೂ ಇದರಲ್ಲಿನ ಅಂಶಗಳು ಕಾರಣವಾಗುತ್ತದೆ. ಈ ಎಲ್ಲಾ ಕಾರಣದಿಂದ ಇ-ಸಿಗರೇಟು ಸೇವನೆ ಹಾಗೂ ಮಾರಾಟವನ್ನು ನಿಷೇಧಿಸಲಾಗಿದೆ. ಅದಾಗಿಯೂ ಭಟ್ಕಳದ ಮುರುಡೇಶ್ವರದ ತೆರ್ನಮಕ್ಕಿ ಚರ್ಚಿನ ಬಳಿ ಮಕ್ಬುಲ್ ಮಡಿಕಲ್ ಅವರು ಇ-ಸಿಗರೇಟು ಮಾರಾಟ ಮಾಡುತ್ತಿದ್ದರು. ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಅವರು ಈ ಬಗ್ಗೆ ಅರಿತು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಿ ಕೃಷ್ಣಮೂರ್ತಿ ಹಾಗೂ ಜಗದೀಶ್ ನಾಯ್ಕ ಅವರ ಬಳಿ ಚರ್ಚಿಸಿದರು. ಅದಾದ ನಂತರ ಭಟ್ಕಳ ಡಿವೈಎಸ್ಪಿ ಮಹೇಶ ಎಂ ಕೆ ಅವರ ಮುಂದಾಳತ್ವದಲ್ಲಿ ಪಿಐ ದಿವಾಕರ ಪಿ ಎಂ ಅವರ ನೇತ್ರತ್ವದಲ್ಲಿ ಕಾರ್ಯಾಚರಣೆಗೆ ಸಿದ್ಧರಾದರು. ಪೊಲೀಸ್ ಸಿಬ್ಬಂದಿ ದಿನೇಶ ನಾಯಕ, ದೀಪಕ ನಾಯ್ಕ, ಮಹಾಂತೇಶ ಹಿರೇಮಠ್, ಕಾಶಿನಾಥ ಕೊಟಗೊಣಸಿ, ಜಗದೀಶ ನಾಯ್ಕ, ಕೃಷ್ಣ ಎನ್ ಜಿ ಅವರು ಮಳಿಗೆ ಮೇಲೆ ದಾಳಿ ನಡೆಸಿದರು.
ಪೊಲೀಸ್ ಸಿಬ್ಬಂದಿ ಮಲ್ಲಿಕಾರ್ಜುನ ಉಟಗಿ, ಕಿರಣ ಪಾಟೀಲ, ಲೋಕೇಶ ಕತ್ತಿ, ರೇವಣಸಿದ್ದಪ್ಪ ಮಾಗಿ ಜೊತೆ ಆ ಭಾಗದ ಬೀಟ್ ಸಿಬ್ಬಂದಿ ವಿಶ್ವನಾಥ ಬೇವಿನಗಿಡದ, ಅಮಗೋತ ಮಹೇಶ ನಾಯ್ಕ ಅವರು ಕಾರ್ಯಾಚರಣೆಯಲ್ಲಿದ್ದರು. ತಮ್ಮ ವ್ಯಾಪ್ತಿಯಲ್ಲಿ ಅಕ್ರಮ ನಡೆಸಿದ ಮಸೂದ್ ಮಡಿಕಲ್ ವಿರುದ್ಧ ಮುರುಡೇಶ್ವರ ಪಿಎಸ್ಐ ಹಣಮಂತ ಬೀರಾದರ್ ಅವರು ಪ್ರಕರಣ ದಾಖಲಿಸಿದರು.
`ಮಾದಕ ವ್ಯಸನಗಳಿಂದ ದೂರವಿರುವುದು ನಿಮಗೂ ಒಳ್ಳೆಯದು.. ನಮಗೂ ಒಳ್ಳೆಯದು’
