ಜನರಲ್ಲಿ ಒಗ್ಗಟ್ಟು ಮೂಡಿಸುವ ನಿಟ್ಟಿನಲ್ಲಿ ಶುರುವಾದ ಗಣೇಶ ಉತ್ಸವ ಅಲ್ಲಲ್ಲಿ ಗಲಾಟೆಗೆ ಕಾರಣವಾಗುತ್ತಿದೆ. ಈ ಬಾರಿ ಎಲ್ಲಡೆ ಶಾಂತಿ-ಸುವ್ಯವಸ್ಥೆಯಿoದ ಗಣೇಶ ಉತ್ಸವ ಆಯೋಜನೆಗೆ ಒತ್ತು ನೀಡಲಾಗಿದ್ದರೂ ಯಲ್ಲಾಪುರದ ಇಡಗುಂದಿಯಲ್ಲಿ ಸಣ್ಣದೊಂದು ಹೊಡೆದಾಟ ನಡೆದಿದೆ.
ಯಲ್ಲಾಪುರದ ಇಡಗುಂದಿಯಲ್ಲಿ ಗಜಾನನ ಉತ್ಸವ ಸಮಿತಿಯವರು ಅತ್ಯಂತ ಅಚ್ಚುಕಟ್ಟಾಗಿ ಗಣೇಶ ಉತ್ಸವ ಆಯೋಜಿಸುತ್ತ ಬಂದಿದ್ದಾರೆ. ಶಿಸ್ತು ಹಾಗೂ ಸಂಯಮದಿAದ ಊರಿನ ಸಮಾನ ಮನಸ್ಕರೆಲ್ಲರೂ ಸೇರಿ ಇಲ್ಲಿ ಉತ್ಸವ ಆಯೋಜಿಸುತ್ತಿದ್ದಾರೆ. ಅನೇಕ ಭಕ್ತರು ಇಲ್ಲಿನ ಗಣಪನಿಗೆ ನಡೆದುಕೊಂಡಿದ್ದು, ಶ್ರದ್ಧಾ-ಭಕ್ತಿಯಿಂದ ಪೂಜೆ ಸಲ್ಲಿಸಿದ್ದಾರೆ. ಗಣೇಶ ಉತ್ಸವದ ಅಂಗವಾಗಿ ಮನರಂಜನಾ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ನಡುವೆ ನಡೆದ ಗಲಾಟೆ ಹೊಡೆದಾಟದ ಸ್ವರೂಪಪಡೆದಿದೆ.
ಸೆಪ್ಟೆಂಬರ್ 1ರ ರಾತ್ರಿ ಇಡಗುಂದಿಯಲ್ಲಿ ನಡೆದ ಹೊಡೆದಾಟದಲ್ಲಿ ಅಲ್ಲಿನ ಗಣೇಶ ಹೊಟೇಲಿನಲ್ಲಿ ಕೆಲಸ ಮಾಡುವ ಗಂಗಾಧರ ನಾಯ್ಕ ಹಾಗೂ ಅದೇ ಊರಿನ ಮಂಜುನಾಥ ವಡ್ಡರ್ ಅವರಿಗೆ ಪೆಟ್ಟಾಗಿದೆ. ಗಂಗಾಧರ ನಾಯ್ಕ ಅವರು ದೂರಿರುವ ಪ್ರಕಾರ 7 ಜನ ಸೇರಿ ಅವರಿಬ್ಬರನ್ನು ಥಳಿಸಿದ್ದಾರೆ. ವಜ್ರಳ್ಳಿ ಮಾರ್ಕಿಜಡ್ಡಿಯ ವಿನೋದ ನಾಯ್ಕ, ಇಡಗುಂದಿಯ ಮಾರುತಿ ನಾಯ್ಕ, ಉದಯ ಮೇಸ್ತಾ, ವಸಂತ ನಾಯ್ಕ, ವಿಘ್ನೇಶ ನಾಯ್ಕ, ಅಣ್ಣಪ್ಪ ರಾಯ್ಕರ್ ಹಾಗೂ ಸಂತೋಷ ನಾಯ್ಕ ಅವರ ವಿರುದ್ಧ ಗಂಗಾಧರ ನಾಯ್ಕ ಅವರು ಕಾನೂನು ಕೈಗೆತ್ತುಕೊಂಡಿರುವ ಆರೋಪ ಮಾಡಿದ್ದಾರೆ.
ಇಡಗುಂದಿಯಲ್ಲಿ ಸಾರ್ವಜನಿಕ ಗಣೇಶ ಉತ್ಸವ ಅಂಗವಾಗಿ ಸೆಪ್ಟೆಂಬರ್ 1ರ ರಾತ್ರಿ ಆರ್ಕೇಸ್ಟಾç ಕಾರ್ಯಕ್ರಮ ನಡೆಯುತ್ತಿತ್ತು. ಆ ವೇಳೆ ಮಂಜುನಾಥ ವಡ್ಡರ್ ಅವರು ಅಲ್ಲಿ ಗಲಾಟೆ ಶುರು ಮಾಡಿದ್ದರು. ಆ ಗಲಾಟೆ ಸಹಿಸದ ಉದಯ ಮೇಸ್ತಾ ಅವರು ಮಂಜುನಾಥ ವಡ್ಡರ್ ಅವರಿಗೆ ಸುಮ್ಮನಿರುವಂತೆ ಸೂಚಿಸಿದರು. ಅದಾಗಿಯೂ ಸುಮ್ಮನಿರದ ಕಾರಣ ವಸಂತ ನಾಯ್ಕ, ವಿಘ್ನೇಶ ನಾಯ್ಕ, ಅಣ್ಣಪ್ಪ ರಾಯ್ಕರ್ ಹಾಗೂ ಸಂತೋಷ ನಾಯ್ಕ ಸೇರಿ ಮಂಜುನಾಥ ವಡ್ಡರ್ ಅವರಿಗೆ ಹೊಡೆದು ಹೊರಗೆ ಎಳೆದೊಯ್ದರು. ಇದನ್ನು ನೋಡಿದ ಗಂಗಾಧರ ನಾಯ್ಕ ಅವರು ಮಂಜುನಾಥ ವಡ್ಡರ್ ಅವರ ರಕ್ಷಣೆಗೆ ತೆರಳಿದರು.
ಆಗ, ಅಲ್ಲಿಗೆ ಬಂದ ವಿನೋದ ನಾಯ್ಕ ಹಾಗೂ ಮಾರುತಿ ನಾಯ್ಕ ಅವರು ಗಂಗಾಧರ ನಾಯ್ಕ ಅವರನ್ನು ಹಿಡಿದು ಹೊಡೆದರು. ಈ ಗಲಾಟೆ ನೋಡಿದ ಗಂಗಾಧರ ನಾಯ್ಕ ಅವರನ್ನು ನೆಲಕ್ಕೆ ಬೀಳಿಸಿ ಕಾಲಿನಿಂದ ತುಳಿದರು. ಆಗ ಅಲ್ಲಿದ್ದ ಗಂಗಾಧರ ನಾಯ್ಕ ಅವರ ಪತ್ನಿ ಪತ್ನಿ ಜ್ಯೋತಿ ನಾಯ್ಕ, ಪರಿಚಯಸ್ಥರಾದ ಮಂಜುನಾಥ ಅಸ್ನೋಟಿಕರ್ ಹಾಗೂ ಮನೋಜ ಗೌಡ ಆಗಮಿಸಿ ಹೊಡೆದಾಟ ತಪ್ಪಿಸಿದರು. ಈ ಎಲ್ಲಾ ವಿದ್ಯಮಾನಗಳ ಬಗ್ಗೆ ಗಂಗಾಧರ ನಾಯ್ಕ ಅವರು ಯಲ್ಲಾಪುರ ಪೊಲೀಸರಿಗೆ ಮಾಹಿತಿ ನೀಡಿದರು. ಪಿಎಸ್ಐ ಯಲ್ಲಲಿಂಗ ಕನ್ನೂರು ಅವರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಶುರು ಮಾಡಿದ್ದಾರೆ. ಜೊತೆಗೆ `ಸಣ್ಣ ಪುಟ್ಟ ಕಾರಣಗಳಿಗೆ ಹೊಡೆದಾಟ ಮಾಡಬೇಡಿ. ದ್ವೇಷ ಸಾಧಿಸದೇ ಪ್ರೀತಿಯಿಂದ ಬದುಕಿ’ ಎಂದು ಬುದ್ದಿಮಾತು ಹೇಳಿದ್ದಾರೆ.
`ತುರ್ತು ಸಮಯದಲ್ಲಿ 112ಗೆ ಫೋನ್ ಮಾಡಿ’
