ಕಾರವಾರದ ಚಿತ್ತಾಕುಲ PSI ಮಹಾಂತೇಶ ವಾಲ್ಮಿಕಿ ಅವರ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಅಕ್ಷಯ್ ಎಸ್ ಬಿ ಅವರು ವಿವಿಧ ಕಡೆ ದೂರು ಸಲ್ಲಿಸಿ ತಿಂಗಳು ಕಳೆದಿದೆ. ಆದರೆ, ಈವರೆಗೂ PSI ಮಹಾಂತೇಶ ವಾಲ್ಮಿಕಿ ಅವರ ವಿರುದ್ಧ ಯಾವ ಕ್ರಮವೂ ಆಗಿಲ್ಲ. ಈ ಹಿನ್ನಲೆ ಇನ್ನಷ್ಟು ಉಗ್ರ ಹೋರಾಟ ನಡೆಸುವುದಾಗಿ ಅಕ್ಷಯ್ ಎಸ್ ಬಿ ಅವರು ಇದೀಗ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಚಿತ್ತಾಕುಲ ಪಿಎಸ್ಐ ಮಹಾಂತೇಶ ವಾಲ್ಮಿಕಿ ಅವರು ಅನ್ಯಾಯ-ಅಕ್ರಮಗಳ ಮೂಲಕ ಭ್ರಷ್ಟಾಚಾರ ನಡೆಸುತ್ತಿದ್ದಾರೆ ಎಂದು ಅಕ್ಷಯ್ ಅವರು ದೂರಿದ್ದಾರೆ. ಈ ಕುರಿತಾಗಿ ಪೊಲೀಸ್ ಅಧೀಕ್ಷಕರು ಹಾಗೂ ಲೋಕಾಯುಕ್ತರಿಗೆ ವಿವಿಧ ದಾಖಲೆಗಳನ್ನು ಸಲ್ಲಿಸಿದ್ದಾರೆ. ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೆ ಸಾಕ್ಷಿ ಒದಗಿಸುವಂತೆ ದೂರುದಾರರಿಗೆ ತನಿಖಾಧಿಕಾರಿಗಳಿಂದ ಪತ್ರವೂ ಬಂದಿದ್ದು, `ದೂರುದಾರರ ಮೇಲೆ ಮಾಹಂತೇಶ ವಾಲ್ಮೀಕಿ ಅವರು ಒತ್ತಡ ತರುತ್ತಿದ್ದಾರೆ’ ಎಂದು ವೇದಿಕೆ ಜಿಲ್ಲಾಧ್ಯಕ್ಷ ಅಕ್ಷಯ ಎಸ್ ಬಿ ಇನ್ನೊಂದು ದೂರು ಸಲ್ಲಿಸಿದ್ದಾರೆ!
`ರಾಜಕಾರಣಿಗಳಿಂದಲೂ ತಮಗೆ ಒತ್ತಡ ಬರುತ್ತಿದೆ. ಸ್ವತಃ ಮಹಾಂತೇಶ ವಾಲ್ಮಿಕಿ ಅವರು ದೂರು ಹಿಂಪಡೆಯುವoತೆ ಒತ್ತಾಯಿಸುತ್ತಿದ್ದಾರೆ’ ಎಂದವರು ಪೊಲೀಸ್ ಅಧೀಕ್ಷಕರಿಗೆ ಅಕ್ಷಯ ಎಸ್ ಬಿ ಅವರು ಮತ್ತೊಂದು ಪತ್ರ ಬರೆದಿದ್ದಾರೆ. `2025ರ ಅಗಸ್ಟ 8ರ ರಾತ್ರಿ 9.30ರ ವೇಳೆಗೆ ಕಾಜುಭಾಗದಲ್ಲಿ ಭೇಟಿಯಾದ ಪಿಎಸ್ಐ ಮಹೇಂತೇಶ ವಾಲ್ಮಿಕಿ ಅವರು ದೂರು ಹಿಂಪಡೆಯುವAತೆ ಮನವಿ ಮಾಡಿದರು. ನಾನು ಅದಕ್ಕೆ ಒಪ್ಪಲಿಲ್ಲ. ಆಗ ಹಣದ ಆಮೀಷ ಒಡ್ಡಲು ಮುಂದಾಗಿದ್ದು, ಅದನ್ನು ಪಡೆಯದ ಕಾರಣ ನನ್ನ ವಿರುದ್ಧ ದೂರು ನೀಡಲು ಜನರನ್ನು ನೇಮಿಸುವುದಾಗಿ ಬೆದರಿಕೆ ಒಡ್ಡಿದ್ದಾರೆ’ ಎಂದು ಪೊಲೀಸ್ ಅಧೀಕ್ಷಕರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.
`ಅವರು ಆಮೀಷ ಒಡ್ಡಿದ ಘಟನಾವಳಿಗಳು ಸಮೀಪದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ತನಿಖೆ ವೇಳೆ ಅದನ್ನು ಪರಿಗಣಿಸಬೇಕು. ಸಾಕ್ಷಿನಾಶ, ಸಂತ್ರಸ್ತರದ ಮೇಲೆ ಒತ್ತಡ ಹೇರುವವರ ವಿರುದ್ಧವೂ ಪ್ರಕರಣ ದಾಖಲಿಸಬೇಕು’ ಎಂದು ಅಕ್ಷಯ ಅವರು ಪತ್ರದಲ್ಲಿ ಬರೆದಿದ್ದಾರೆ. ಈ ಪತ್ರದ ಪ್ರತಿಯನ್ನು ಲೋಕಾಯುಕ್ತ ಸೇರಿ ಇನ್ನಿತರ ಅಧಿಕಾರಿಗಳಿಗೆ ದೂರುದಾರರು ರವಾನಿಸಿದ್ದಾರೆ.
ಸರಾಯಿ ಸ್ವೀಕಾರದ ಆರೋಪ:
ಬಾಡಿಗೆ ವಾಹನ ಓಡಿಸಿ ಜೀವನ ನಡೆಸುವ ಸಮೀರ್ ಅತ್ತಾರ್ ಎಂಬಾತರಿAದಲೂ ಪಿಎಸ್ಐ ಮಹಾಂತೇಶ ವಾಲ್ಮೀಕಿ ಲಂಚಪಡೆದ ಆರೋಪವ್ಯಕ್ತವಾಗಿದೆ. ಈ ಬಗ್ಗೆ ಸಮೀರ್ ಅತ್ತಾರ್ ಅವರೇ ಪೊಲೀಸ್ ಅಧೀಕ್ಷಕರಿಗೆ ದೂರು ನೀಡಿದ್ದಾರೆ. `ಪಿಎಸ್ಐ ಮೇಲಿನ ಭಯದಿಂದ ಇಷ್ಟು ದಿನ ದೂರು ನೀಡಿರಲಿಲ್ಲ’ ಎಂಬ ಸ್ಪಷ್ಟನೆಯನ್ನು ಸಮೀರ್ ಮಾಡಿದ್ದಾರೆ.
