ಮೇಷ ರಾಶಿ: ಆರ್ಥಿಕ ಸ್ಥಿತಿ ಚನ್ನಾಗಿಲಿದೆ. ಸಹೋದರರ ಜೊತೆ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆಯಿದೆ. ಬೇಸರದ ವಿಷಯಗಳ ಬಗ್ಗೆ ಎಲ್ಲಿಯೂ ಮಾತನಾಡಬೇಡಿ.
ವೃಷಭ ರಾಶಿ: ಕಹಿ ಅನುಭವಗಳನ್ನು ಮರೆಯಲು ಪ್ರಯತ್ನಿಸಿ. ಆಹಾರ ಸೇವನೆ ವಿಷಯದಲ್ಲಿ ಎಚ್ಚರಿಕೆ ಅಗತ್ಯ. ಮೈ ತುರಿಕೆ, ಅಲರ್ಜಿ ನಿಮ್ಮನ್ನು ಕಾಡುವ ಲಕ್ಷಣಗಳಿದೆ.
ಮಿಥುನ ರಾಶಿ: ಹಣಕಾಸು ವಿಷಯದಲ್ಲಿ ಒತ್ತಡ ಬರಲಿದೆ. ಹತಾಷೆಯ ಮನೋಭಾವನೆ ನಿಮ್ಮನ್ನು ಆವರಿಸಲಿದೆ. ಭಾವನಾತ್ಮಕ ಒತ್ತಡಗಳು ಎದುರಾಗಲಿದೆ. ದುಷ್ಟರಿಂದ ದೂರವಿರುವುದು ಉತ್ತಮ.
ಕರ್ಕ ರಾಶಿ: ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಹುಡುಕಿ. ಪ್ರೀತಿ ಪಾತ್ರರ ಜೊತೆ ಮಾತನಾಡಿ. ಉದ್ಯೋಗ ವಿಷಯವಾಗಿ ಹಿರಿಯರ ಜೊತೆ ಚರ್ಚಿಸುವುದು ಉತ್ತಮ.
ಸಿಂಹ ರಾಶಿ: ವೈಯಕ್ತಿಕ ಜೀವನವನ್ನು ಸಮೃದ್ಧಗೊಳಿಸಲು ಚಿಂತಿಸಿ. ಕುಟುಂಬದವರ ಜೊತೆ ಕಾಲ ಕಳೆಯುವುದು ಮುಖ್ಯ. ಸಾರ್ವಜನಿಕ ಕ್ಷೇತ್ರದಲ್ಲಿ ಹೊಸ ಅವಕಾಶ ಸಿಗಲಿದೆ.
ಕನ್ಯಾ ರಾಶಿ: ಹಣಕಾಸು ಸಮಸ್ಯೆಗಳಿಗೆ ನೆರವು ಸಿಗಲಿದೆ. ಆರೋಗ್ಯ ಸುಧಾರಣೆ ಆಗಲಿದೆ. ನಿರೀಕ್ಷಿತ ಬದಲಾವಣೆಗಳು ಆಗಲಿದೆ.
ತುಲಾ ರಾಶಿ: ವೃತ್ತಿ ಬದುಕು ಹಾಗೂ ವೈಯಕ್ತಿಕ ಜೀವನದ ಸಮತೋಲನ ಅಗತ್ಯ. ಕುಟುಂಬಿಕ ವಿಷಯಗಳ ಬಗ್ಗೆ ಸರಿಯಾಗಿ ನಿರ್ಣಯ ತೆಗೆದುಕೊಳ್ಳಿ. ಭವಿಷ್ಯದ ಯೋಜನೆಗಳನ್ನು ಜಾಗೃತೆಯಿಂದ ಕಾರ್ಯಗತಗೊಳಿಸಿ.
ವೃಶ್ಚಿಕ ರಾಶಿ: ನಿಮ್ಮ ಹಣ ನಿಮಗೆ ಸುರಕ್ಷಿತವಾಗಿ ಸಿಗಲಿದೆ. ಓದಿನ ಖುಷಿ ಅನುಭವಿಸಿ. ಆರೋಗ್ಯ ವಿಚಾರದಲ್ಲಿ ಎಚ್ಚರಿಕೆ ಬೇಕು. ವೃತ್ತಿ ಜೀವನದ ಅವಕಾಶಗಳನ್ನು ಒಪ್ಪಿಕೊಳ್ಳಿ.
ಧನು ರಾಶಿ: ಸಂಭ್ರಮದ ಸಮಯ ಸಮೀಪದಲ್ಲಿದೆ. ಆರ್ಥಿಕ ಸ್ಥಿತಿ ಸುಧಾರಣೆ ಆಗಲಿದೆ. ಸ್ನೇಹಿತರ ಜೊತೆ ಸಮಯ ಕಳೆಯಿರಿ.
ಮಕರ ರಾಶಿ: ಕುಟುಂಬದ ಸ್ಥಿತಿ ಸುಸ್ಥಿರವಾಗಿರಲಿದೆ. ಹಣಕಾಸಿನ ನೆರವು ಸಿಗಲಿದೆ. ಎಣ್ಣೆಯಲ್ಲಿ ಕರಿದ ಆಹಾರ ನಿಮ್ಮ ಆರೋಗ್ಯಕ್ಕೆ ಸೂಕ್ತವಲ್ಲ.
ಕುಂಭ ರಾಶಿ: ಅಲರ್ಜಿ ಸಮಸ್ಯೆಗಳು ಕಾಣಿಸಿದರೆ ಚಿಕಿತ್ಸೆ ಅಗತ್ಯ. ಕಿರಿಕಿರಿ ಸ್ವಭಾವದವರಿಂದ ದೂರವಿರಿ. ಆಪ್ತರ ಜೊತೆ ಮಾತನಾಡಿ, ಸಮಸ್ಯೆ ಬಗೆಹರಿಸಿಕೊಳ್ಳಿ.
ಮೀನ ರಾಶಿ: ಭವಿಷ್ಯದಲ್ಲಿ ಯೋಚಿಸಿದ ಕಾರ್ಯಗಳು ಪ್ರಗತಿ ಸಾಧಿಸಲಿದೆ. ವೈಯಕ್ತಿಕ ಬೆಳವಣಿಗೆ ಸಾಧ್ಯವಿದೆ. ಆರ್ಥಿಕ ವಿಷಯದಲ್ಲಿಯೂ ಚೇತರಿಕೆ ಸಾಧ್ಯವಿದೆ.
