ಯಲ್ಲಾಪುರದ ಬಿದ್ರಳ್ಳಿ ಬಳಿ ಕಾರು ಹಾಗೂ ಜೀಪಿನ ನಡುವೆ ಅಪಘಾತವಾಗಿದೆ. ಈ ಅಪಘಾತದಲ್ಲಿ ಕಾರಿನಲ್ಲಿದ್ದ ಆರು ಜನ ಗಾಯಗೊಂಡಿದ್ದಾರೆ.
ಯಲ್ಲಾಪುರದ ಬಿದ್ರಳ್ಳಿ ರಾಮಲಿಂಗೇಶ್ವರ ದೇವಸ್ಥಾನ ಹತ್ತಿರ ಈ ಅಪಘಾತ ನಡೆದಿದೆ. ಗಾಯಗೊಂಡವರೆಲ್ಲರೂ ಹಳಿಯಾಳ ತಾಲೂಕಿನವರಾಗಿದ್ದಾರೆ. ಗಾಯಾಳು ಗುರುನಾಥ ಚೋಪಡಿ ಪೊಲೀಸ್ ದೂರು ನೀಡಿದ್ದಾರೆ.
ಸೆ 4ರಂದು ಬೆಳಗ್ಗೆ ಹಳಿಯಾಳ ಕೆಸರೋಳಿ ಬಳಿಯ ಅಗಸಲಟ್ಟಾದ ಗುರುನಾಥ ಚೋಪಡಿ ಅವರು ಯಲ್ಲಾಪುರದಿಂದ ಶಿರಸಿ ಕಡೆ ಕಾರು ಓಡಿಸಿಕೊಂಡು ಹೋಗುತ್ತಿದ್ದರು. ಅದೇ ವೇಳೆ ಖಾನಾಪುರದ ಮಲ್ಲಪ್ಪ ಜರಳಿ ಅವರು ಬುಲೇರೋ ಓಡಿಸುತ್ತಿದ್ದರು. ಬಿದ್ರಳ್ಳಿ ರಾಮಲಿಂಗೇಶ್ವರ ದೇವಸ್ಥಾನ ಹತ್ತಿರದ ರಸ್ತೆಯಲ್ಲಿ ಆ ಎರಡು ವಾಹನ ಮುಖಾಮುಖಿ ಡಿಕ್ಕಿಯಾಯಿತು.
ಡಿಕ್ಕಿ ರಭಸಕ್ಕೆ ಕಾರಿನಲ್ಲಿದ್ದ ಹಳಿಯಾಳದ ಕಾಳಗಿನಕೊಪ್ಪದ ಸಂದೀಪ ಶಮನಗೌಡ, ಅಗಸಲಕಟ್ಟಾದ ಸಯ್ಯದ ಅಲಿ, ಸುನೀಲ ಡಿಸೋಜಾ, ಜ್ಷಾನೇಶ್ವರ ಗಂದೇಟಕರ್, ಸಚಿನ ಪಾವಲೆ ಗಾಯಗೊಂಡರು. ಎರಡು ವಾಹನ ಜಖಂ ಆಯಿತು. ಕಾರು ಓಡಿಸುತ್ತಿದ್ದ ಗುರುನಾಥ ಚೋಪಡಿ ಅವರಿಗೂ ಪೆಟ್ಟಾಗಿದ್ದು, ಅವರು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು. ಪ್ರಕರಣ ದಾಖಲಿಸಿದ ಪಿಎಸ್ಐ ಸಿದ್ದಪ್ಪ ಗುಡಿ ಅವರು ತನಿಖೆ ನಡೆಸುತ್ತಿದ್ದಾರೆ.
