ಅರಣ್ಯದ ಬಗ್ಗೆ ಆಳವಾದ ಅಧ್ಯಯನ, ಸ್ನೇಹಮಯಿ ಆಡಳಿತ ನಡೆಸುವ ಟಿ ಹೀರಾಲಾಲ್ ಅವರು ಉತ್ತರ ಕನ್ನಡ ಜಿಲ್ಲೆಯ ನೂತನ ಸಿಸಿಎಫ್ ಆಗಿ ವರ್ಗವಾಗಿದ್ದಾರೆ. ಕಳೆದ ಮೂರು ವರ್ಷಗಳಿಂದ ಜನಸ್ನೇಹಿಯಾಗಿ ಕೆಲಸ ಮಾಡಿದ್ದ ವಸಂತ ರೆಡ್ಡಿ ಅವರಿಗೆ ವರ್ಗಾವಣೆಯಾಗಿದ್ದರೂ ಸರ್ಕಾರ ಅವರಿಗೆ ಹೊಸ ಸ್ಥಾನ ತೋರಿಸಿಲ್ಲ.
ವಸಂತ ರೆಡ್ಡಿ ಅವರು ಈ ಮೊದಲು ಕಾರವಾರ ಡಿಎಫ್ಓ ಆಗಿ ಕೆಲಸ ಮಾಡಿದ್ದರಿಂದ ಅವರಿಗೆ ಜಿಲ್ಲೆಯ ಜನಜೀವನ ಹಾಗೂ ಅರಣ್ಯದ ಬಗ್ಗೆ ಅಪಾರ ಅರಿವಿತ್ತು. ಅದೇ ಅನುಭವದ ಆಧಾರದಲ್ಲಿ ವಸಂತ ರೆಡ್ಡಿ ಅವರು ಜನಸ್ನೇಹಿಯಾಗಿ ಕೆಲಸ ಮಾಡಿದ್ದರು.
ಕಳೆದ ಮೂರೂ ವರ್ಷಗಳಿಂದ ವಸಂತ ರೆಡ್ಡಿ ಅವರು ಕೆನರಾ ವೃತ್ತಕ್ಕೆ ಮುಖ್ಯಸ್ಥರಾಗಿದ್ದರು. ಅರಣ್ಯ ರಕ್ಷಣೆ ವಿಷಯದಲ್ಲಿ ವಸಂತ ರೆಡ್ಡಿ ಅವರು ಕಟ್ಟುನಿಟ್ಟಿನ ನಿರ್ಧಾರಗಳನ್ನು ಕೈಗೊಂಡಿದ್ದರು. ಜೊತೆಗೆ ಜನಜೀವನಕ್ಕೆ ಸಹ ಹಾನಿಯಾಗದಂತೆ ಅವರು ಎಚ್ಚರಿಕೆವಹಿಸಿದ್ದರು.
ಅದೇ ರೀತಿ ಟಿ ಹೀರಾಲಾಲ್ ಅವರು ಸಹ ಕಾರವಾರದಲ್ಲಿ ಡಿಎಫ್ಓ ಆಗಿ ಕೆಲಸ ಮಾಡಿದವರಾಗಿದ್ದಾರೆ. ಕಾರವಾರದಿಂದ ವರ್ಗವಾದ ನಂತರ ಬೇರೆ ಬೇರೆ ವಿಭಾಗದಲ್ಲಿ ಕೆಲಸ ನಿರ್ವಹಿಸಿ ಮತ್ತೆ ಉತ್ತರ ಕನ್ನಡಕ್ಕೆ ಮರಳಿದ್ದಾರೆ. ಟಿ ಹೀರಾಲಾಲ್ ಅವರು ಚಾಮರಾಜನಗರದ ಸಿಸಿಎಫ್ ಆಗಿದ್ದು, ಈ ದಿನ ಅವರನ್ನು ಉತ್ತರ ಕನ್ನಡ ಜಿಲ್ಲೆಗೆ ವರ್ಗಾಯಿಸಲಾಗಿದೆ.
