ಮಕ್ಕಳ ಮುಂದೆ ಬಂದೂಕು ಹಿಡಿದು ಸಂಚರಿಸುವ ವ್ಯಕ್ತಿಯ ಕ್ಷಣಕಾಲದ ನಿರ್ಲಕ್ಷ್ಯದ ಪರಿಣಾಮ ಶಿರಸಿಯಲ್ಲಿ ಬಾಲಕನ ಸಾವಾಗಿದೆ. ಬಂದೂಕಿನಿoದ ಸಿಡಿದ ಗುಂಡು ಬಾಲಕನ ತಲೆಯೊಳಗೆ ಹೊಕ್ಕಿದ್ದು, ಅಲ್ಲಿಯೇ ಕುಸಿದು ಬಿದ್ದ ಕರಿಯಪ್ಪ (9) ಕೊನೆಯುಸಿರೆಳೆದಿದ್ದಾರೆ.
ಶಿರಸಿ ಸೋಮನಳ್ಳಿಯ ರಾಘವೇಂದ್ರ ಹೆಗಡೆ ಅವರ ಮನೆಯಲ್ಲಿ ಹಾವೇರಿಯ ಬಸಪ್ಪ ಉಡಿಯರ್ ಅವರು ತಮ್ಮ ಕುಟುಂಬದೊAದಿಗೆ ಕೆಲಸಕ್ಕಿದ್ದರು. ಬಸಪ್ಪ ಅವರ ಮಕ್ಕಳಾದ ಕರಿಯಪ್ಪ (9) ಹಾಗೂ ದೀಳಪ್ಪ (7) ಅಲ್ಲಿಯೇ ವಾಸವಾಗಿದ್ದರು. ಊರಿನಲ್ಲಿ ಮಂಗನ ಹಾವಳಿ ಹೆಚ್ಚಾದ ಪರಿಣಾಮ ಎಲ್ಲರೂ ಸೇರಿ ಮಂಗನ ಓಡಿಸಲು ನಿತೀಶ ಗೌಡ ಅವರನ್ನು ನೇಮಿಸಿದ್ದರು.
ಶುಕ್ರವಾರ ರಾಘವೇಂದ್ರ ಹೆಗಡೆ ಅವರಿಗೆ ಸೇರಿದ ಬಂದೂಕು ಹಿಡಿದು ನಿತೀಶ ಗೌಡ ಅವರು ಮನೆ ಸುತ್ತ ಸಂಚರಿಸುತ್ತಿದ್ದರು. ನಿತೀಶ ಗೌಡ ಅವರು ಹೆಗಲಿಗೆ ಬಂದೂಕು ಹಾಕಿಕೊಂಡು ಗೇಟಿನ ಬಳಿ ನಿಂತಿದ್ದರು. ಈ ವೇಳೆ ಮಕ್ಕಳು ಅಲ್ಲಿ ಆಟವಾಡುತ್ತಿದ್ದು, ಕೀಟಲೆ ಬುದ್ದಿಯ ದೀಳಪ್ಪ ಏಕಾಏಕಿ ಆ ಬಂದೂಕಿನ ಟ್ರಿಗರ್ ಒತ್ತಿದರು.
ಬಂದೂಕಿನಿoದ ಹಾರಿದ ಗುಂಡು ನೇರವಾಗಿ ಕರಿಯಪ್ಪ ಅವರ ಮುಖಕ್ಕೆ ನಾಟಿತು. ಆ ಗುಂಡು ಕರಿಯಪ್ಪ ಅವರ ತಲೆ ಸೀಳಿಕೊಂಡು ಹೋದ ಪರಿಣಾಮ ಅವರು ಅಲ್ಲಿಯೇ ಕುಸಿದು ಬಿದ್ದರು. ಕುಸಿದು ಬಿದ್ದ ಅಣ್ಣನನ್ನು ದೀಳಪ್ಪ ತಿರುಗಿಸಿ, ದೊಡ್ಡದಾಗಿ ಕಿರುಚಿದರು. ಗಾಯಗೊಂಡ ಬಾಲಕನನ್ನು ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಲಿಲ್ಲ.
ಮಕ್ಕಳ ಆಟ, ಬಂದೂಕಿನಿAದ ಹಾರಿದ ಗುಂಡು, ಬಾಲಕ ನೆಲಕ್ಕೆ ಬಿದ್ದು ಅಪ್ಪಳಿಸಿದ ದೃಶ್ಯಾವಳಿಗೆಳೆಲ್ಲವೂ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಡಿವೈಎಸ್ಪಿ ಗೀತಾ ಪಾಟೀಲ ಅವರ ಜೊತೆ ಪಿಐ ಶಶಿಕಾಂತ ವರ್ಮ ಪಿಎಸ್ಐ ಸಂತೋಷಕುಮಾರ್ ಹಾಗೂ ಅಶೋಕ ರಾಥೋಡ್ ಸ್ಥಳಕ್ಕೆ ದೌಡಾಯಿಸಿದ್ದಾರೆ.
