ಯಲ್ಲಾಪುರದ ರಾಷ್ಟ್ರೀಯ ಹೆದ್ದಾರಿ ಹಾಗೂ ಹೆದ್ದಾರಿ ಅಂಚಿನಲ್ಲಿ ನಿಲ್ಲಿಸುವ ಲಾರಿಗಳು ಇನ್ನಿತರ ವಾಹನ ಸವಾರರ ಜೀವ ತೆಗೆಯುತ್ತಿದೆ. ನಿನ್ನೆ ರಾತ್ರಿಯೂ ಹೆದ್ದಾರಿ ಅಂಚಿನಲ್ಲಿ ನಿಲ್ಲಿಸಿದ ಲಾರಿ ಬೈಕ್ ಸವಾರನ ಪ್ರಾಣಕ್ಕೆ ಕುತ್ತು ತಂದಿದೆ.
ರಸ್ತೆಯ ಮೇಲೆ ಯಾವುದೇ ಸೂಚನೆ ಇಲ್ಲದೇ ಚಾಲಕರು ಲಾರಿ ನಿಲ್ಲಿಸುತ್ತಿದ್ದಾರೆ. ಪಾರ್ಕಿಂಗ್ ಲೈಟ್ ಸಹ ಹಾಕುತ್ತಿಲ್ಲ. ಇದರ ಪರಿಣಾಮ ಅಪಘಾತಗಳ ಪ್ರಮಾಣ ಹೆಚ್ಚಾಗುತ್ತಿದೆ. ಗುರುವಾರ ರಾತ್ರಿ ಹೀಗೆ ನಿಲ್ಲಿಸಿದ್ದ ಲಾರಿಗೆ ಧಾರವಾಡ ಜಿಲ್ಲೆಯ ಕಲಘಟಗಿ ಜುಂಜನಬೈಲಿನ ಲಕ್ಷ್ಮಣ ತಿಪ್ಪಯ್ಯ ಚ್ಯಾಂಗೋಜಿ (44) ಎಂಬಾತರು ಬೈಕ್ ಗುದ್ದಿದ್ದಾರೆ. ಹದ್ದಿನಸರದ ಬಳಿ ಈ ಅಪಘಾತ ನಡೆದಿದ್ದು ಲಕ್ಷ್ಮಣ ತಿಪ್ಪಯ್ಯ ಚ್ಯಾಂಗೋಜಿ ಅಲ್ಲಿಯೇ ಸಾವನಪ್ಪಿದ್ದಾರೆ.
ಕೋಕ್ ತುಂಬಿದ ಲಾರಿಯನ್ನು ಅಲ್ಲಿ ನಿಲ್ಲಿಸಿದ್ದ ಕಾರಣ ಚಾಲಕ ಹೊಸಳ್ಳಿಯ ಸಂತೋಷ ಲಕ್ಷ್ಮಣ ಹರಿಜನ ವಿರುದ್ಧ ಯಲ್ಲಾಪುರ ನೂತನನಗರದ ಮಂಜುನಾಥ ಹರಮಣ್ಣನವರ್ ಈ ಬಗ್ಗೆ ದೂರು ನೀಡಿದ್ದು, ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
