ದಿನ ಬಳಕೆ ವಸ್ತುಗಳ ಮೇಲಿನ ಜಿಎಸ್ಟಿ ಕಡಿತವಾಗಿರುವುದಕ್ಕೆ ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಸಂತಸವ್ಯಕ್ತಪಡಿಸಿದ್ದಾರೆ. ನುಡಿದಂತೆ ನಡೆದ ಪ್ರಧಾನಿ ನರೇಂದ್ರ ಮೋದಿ ಅವರ ನಿಲುವನ್ನು ಅವರು ಸ್ವಾಗತಿಸಿದ್ದಾರೆ.
`ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಗಸ್ಟ 15ರ ಸ್ವಾತಂತ್ರ್ಯೋತ್ಸವ ದಿನ ದೇಶದ ತೆರಿಗೆ ವ್ಯವಸ್ಥೆ ಸರಳ ಮಾಡುವುದಾಗಿ ಹೇಳಿದ್ದರು. ಅಗತ್ಯ ವಸ್ತುಗಳ ಮೇಲಿನ ಜಿಎಸ್ಟಿ ಕಡಿಮೆ ಮಾಡಿ ಅವರು ದೀಪಾವಳಿ ಉಡುಗರೆ ನೀಡಿದ್ದಾರೆ’ ಎಂದು ರಾಮು ನಾಯ್ಕ ಅವರು ಹೇಳಿದ್ದಾರೆ.
`ಕೇಶತೈಲ, ಸಾಬೂನು, ಶಾಂಪು, ಶೇವಿಂಗ ಕ್ರೀಮ್, ಟೂಥ ಬ್ರಷ್, ಪೇಸ್ಟ್, ಸೈಕಲ್, ಮನೆ ಬಳಕೆ ಉಪಕರಣ, ಪಾದರಕ್ಷೆ, ಬೆಣ್ಣೆ, ತುಪ್ಪ, ಮಕ್ಕಳಿಗೆ ಹಾಲು ಕುಡಿಸುವ ಬಾಟಲಿಗಳು, ಬೇಬಿ ನ್ಯಾಪಕಿನ್, ಡೈಪರಗಳು, ಹೊಲಿಗೆಯಂತ್ರ, ಟ್ರ್ಯಾಕ್ಟರ್, ಟೈಯರ್, ಬಿಡಿ ಭಾಗಗಳು, ಹನಿ ನೀರಾವರಿಗೆ ಬಳಸುವ ವಸ್ತುಗಳ ಮೇಲಿನ ತೆರಿಗೆ ಕಡಿಮೆಯಾಗಿದೆ. ಕೃಷಿ ಹಾಗೂ ತೋಟಗಾರಿಕೆಯಲ್ಲಿ ಬಳಸುವ ಉಪಕರಣಗಳ ತೆರಿಗೆಯನ್ನು ಇಳಿಸಲಾಗಿದೆ’ ಎಂದವರು ವಿವರಿಸಿದರು.
ಇದರೊಂದಿಗೆ `ಅಲ್ಟ್ರಾ ಹೈ ಟೆಂಪರೇಚರ್ ಹಾಲು, ಪನ್ನೀರ, ರೊಟ್ಟಿ, ಪರೋಟಾ, 33 ರೀತಿಯ ಜೀವರಕ್ಷಕ ಔಷಧಿ, ಕ್ಯಾನ್ಸರ್ ನಿವಾರಕ ಔಷಧಿಗಳು, ಅಪರೂಪದ ಕಾಯಿಲೆಗಳಿಗೆ ಬಳಸುವ ಔಷಧಿಗೆ ತೆರಿಗೆಯೇ ಇಲ್ಲ’ ಎಂದು ಸಂತಸವ್ಯಕ್ತಪಡಿಸಿದರು.
