ಚಂದ್ರ ಗ್ರಹಣದ ಹಿನ್ನಲೆ ಭಾನುವಾರ ಸಂಜೆ ಗೋಕರ್ಣದಲ್ಲಿ ಪ್ರಸಾದ ಭೋಜನ ವಿತರಣೆಗೆ ತಡೆ ಒಡ್ಡಲಾಗಿದೆ. ಆ ದಿನ ದೇವರ ದರ್ಶನದ ಸಮಯದಲ್ಲಿಯೂ ಬದಲಾವಣೆ ನಡೆದಿದೆ.
ಮಹಾಬಲೇಶ್ವರ ದೇವಾಲಯದಲ್ಲಿ ಸೆಪ್ಟೆಂಬರ್ 7ರಂದು ಬೆಳಗ್ಗೆ 10.45ರವರೆಗೆ ಮಾತ್ರ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಆ ದಿನ ಮಧ್ಯಾಹ್ನ 12.30 ಗಂಟೆಯಯೊಳಗೆ ಮಹಾಪೂಜೆ ನಡೆಯಲಿದೆ. ಸಂಜೆ 4ರಿಂದ 5.30ರವರೆಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, 7 ಗಂಟೆಯ ಒಳಗೆ ಮಹಾಪೂಜೆ ನಡೆಯಲಿದೆ.
ಗೃಹಣಕಾಲದ ಅವಧಿಯಲ್ಲಿ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, ಅದರ ಪ್ರಕಾರ ರಾತ್ರಿ 9.45ರಿಂದ ರಾತ್ರಿ 1.26ರವರರವರೆಗೆ ಭಕ್ತರಿಗೆ ದೇವರ ದರ್ಶನಕ್ಕೆ ಬಿಡಲಾಗುತ್ತದೆ. ಗ್ರಹಣ ಮೋಕ್ಷದ ಬಳಿಕ ದೇವಾಲಯ ಶುಚಿಗೊಳಿಸುವ ಕಾರ್ಯ ನಡೆಯಲಿದ್ದು, ವಿಶೇಷ ಪುಣ್ಯಾಹವನ್ನು ನೆರವೇರಿಸಲಾಗುತ್ತದೆ.
