ಮೇಷ ರಾಶಿ: ನಿಮಗೆ ಸಿಗುವ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳುವುದು ಮುಖ್ಯ. ಆತ್ಮವಿಶ್ವಾಸವೇ ನಿಮ್ಮ ಗೆಲುವಿನ ಸೋಪಾನ. ವೃತ್ತಿ ಬದುಕಿನಲ್ಲಿ ಹೊಸ ಜವಾಬ್ದಾರಿ ಸಿಗಲಿದ್ದು, ಸಾಮಾಜಿಕ ಕಾರ್ಯಗಳಲ್ಲಿಯೂ ಗೌರವ ದೊರೆಯಲಿದೆ.
ವೃಷಭ ರಾಶಿ: ನಿತ್ಯದ ಕೆಲಸಗಳನ್ನು ಈ ದಿನ ಬೇಗ ಮುಗಿಸಲು ಸಾಧ್ಯವಿದೆ. ಅನೇಕ ದಿನದಿಂದ ಬಾಕಿಯಿರುವ ಬ್ಯಾಂಕ್ ವ್ಯವಹಾರ ಮುಗಿಸುವುದು ಒಳಿತು. ಮನಸ್ಸು ಆಹ್ಲಾದಕರವಾಗಿರಲಿದೆ. ಆರೋಗ್ಯ ಸ್ಥಿರವಾಗಿರಲಿದೆ.
ಮಿಥುನ ರಾಶಿ: ನಿಮ್ಮ ಕೆಲಸಗಳು ಸರಿಯಾಗಿ ಸಾಗಲಿದೆ. ಆರ್ಥಿಕ ಸುಧಾರಣೆಗೆ ಕಾಲಾವಕಾಶ ಬೇಕು. ಪ್ರವಾಸ ಮಾಡುವ ಲಕ್ಷಣಗಳಿದೆ. ಆರೋಗ್ಯದ ವಿಷಯದಲ್ಲಿ ಏರಿಳಿತ ಸಹಜ.
ಕರ್ಕ ರಾಶಿ: ನೀವು ತೆಗೆದುಕೊಳ್ಳುವ ಸಣ್ಣಪುಟ್ಟ ನಿರ್ಧಾರಗಳು ಇಡೀ ಬದುಕಿಗೆ ಅನ್ವಯ ಆಗಲಿದೆ. ಹಳೆಯ ಸಮಸ್ಯೆಗಳನ್ನು ನಿಧಾನವಾಗಿ ಪರಿಹರಿಸಿಕೊಳ್ಳಿ. ಕ್ರೀಯಾಶೀಲ ಚಟುವಟಿಕೆಯಲ್ಲಿರುವವರಿಗೆ ಜಯ ಸಿಗಲಿದೆ.
ಸಿಂಹ ರಾಶಿ: ಉದ್ಯೋಗದ ವಿಷಯದಲ್ಲಿ ಖುಷಿ ಅನುಭವಿಸಲು ಸಾಧ್ಯ. ವೃತ್ತಿ ಕುರಿತಾಗಿ ಗೊಂದಲ ಬೇಡ. ಹೊಸ ಅವಕಾಶಗಳನ್ನು ಬಳಸಿಕೊಂಡು ಮುನ್ನಡೆಯುವುದು ಸೂಕ್ತ.
ಕನ್ಯಾ ರಾಶಿ: ನಿಮ್ಮ ಪ್ರಯತ್ನ ಎಂದಿಗೂ ವ್ಯರ್ಥವಾಗುವುದಿಲ್ಲ. ವಾಣಿಜ್ಯ ಚಟುವಟಿಕೆಗಳ ಮೇಲೆ ಗಮನಹರಿಸಿ. ಶುಭ ಸುದ್ದಿ ಬರುವ ಸಾಧ್ಯತೆಯಿದೆ.
ತುಲಾ ರಾಶಿ: ಹಣಕಾಸಿನ ಸಮಸ್ಯೆಗಳು ದೂರವಾಗಲಿದೆ. ಮನಸ್ಸಿಗೆ ನೆಮ್ಮದಿ ಸಿಗಲಿದೆ. ನೆಂಟರ ಆಗಮನದಿಂದ ನಿಮಗೆ ಖುಷಿ ಸಿಗಲಿದೆ.
ವೃಶ್ಚಿಕ ರಾಶಿ: ಉತ್ತಮ ವಿಚಾರಗಳ ಅನುಷ್ಠಾನಕ್ಕೆ ನೀವು ಧೈರ್ಯದಿಂದ ಮುನ್ನಡೆಯಿರಿ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಇರಲಿದೆ. ಸ್ನೇಹಿತರ ಜೊತೆ ಸಮಾದಾನದಿಂದ ಸಮಯ ಕಳೆಯುವುದು ಸೂಕ್ತ.
ಧನು ರಾಶಿ: ನಿರಂತರ ಪ್ರಯತ್ನದಲ್ಲಿ ನಿಮಗೆ ಯಶಸ್ಸು ಸಿಗಲಿದೆ. ಹಣಕಾಸು ಆಗಮನ ಸಾಧ್ಯತೆಗಳಿವೆ. ಆರೋಗ್ಯದಲ್ಲಿಯೂ ಸುಧಾರಣೆ ಸಾಧ್ಯವಿದೆ. ಹೊಸ ವಿಷಯವೊಂದನ್ನು ಕಲಿಯುವಿರಿ.
ಮಕರ ರಾಶಿ: ಸಣ್ಣಪುಟ್ಟ ತೊಂದರೆಗಳು ನಿಮಗೆ ಕಾಡಲಿದೆ. ಹಣಕಾಸು ವಿಷಯದಲ್ಲಿ ತಾಳ್ಮೆಯಿಂದ ವ್ಯವಹರಿಸಿ. ಕುಟುಂಬದವರ ಜೊತೆ ಚರ್ಚಿಸಿ ನಿರ್ಧಾರ ಪ್ರಕಟಿಸುವುದು ಉತ್ತಮ. ಆರೋಗ್ಯದಲ್ಲಿ ಏರುಪೇರಾದರೆ ತಕ್ಷಣ ವೈದ್ಯರನ್ನು ಭೇಟಿ ಮಾಡಿ.
ಕುಂಭ ರಾಶಿ: ಉದ್ಯಮದಲ್ಲಿ ನಿಮಗೆ ಲಾಭ ಆಗಲಿದೆ. ಹೊಸ ಉದ್ಯೋಗ ಶುರು ಮಾಡಲು ಈ ದಿನ ಸೂಕ್ತ. ಕುಟುಂಬದವರ ಜೊತೆ ಮುಕ್ತವಾಗಿ ಮಾತನಾಡಿದರೆ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ.
ಮೀನ ರಾಶಿ: ಅನೇಕ ದಿನದಿಂದ ಆಗದ ಕೆಲವೊಂದು ಈ ದಿನ ಆಗಲಿದೆ. ಆರೋಗ್ಯ ಚೇತರಿಕೆ ಆಗಲಿದೆ. ನಿತ್ಯದ ಕೆಲಸ ಎಂದಿನAತೆ ಸಾಗಲಿದೆ. ಸಂತೋಷವನ್ನು ಕಾಣಲು ಸಾಧ್ಯ.
