ಶಿರಸಿಯ ಸೋಮನಳ್ಳಿಯಲ್ಲಿ ಶುಕ್ರವಾರ ನಡೆದ ಗುಂಡಿನ ಕಾಳಗ ಆಕಸ್ಮಿಕ ಅಲ್ಲ ಎಂದು ಗೊತ್ತಾಗಿದೆ. ಮಂಗನ ಓಡಿಸಲು ಬಂದಿದ್ದ ನಿತೇಶ ಗೌಡ ಅವರೇ ಮಕ್ಕಳನ್ನು ಗುರಿಯಾಗಿರಿಸಿಕೊಂಡು ಗುಂಡು ಹಾರಿಸಿದ್ದು ಇದೀಗ ಬೆಳಕಿಗೆ ಬಂದಿದೆ.
ಚಿಪಗಿ ಬಳಿಯ ಸೋಮನಳ್ಳಿಯಲ್ಲಿರುವ ರಾಘವ ಹೆಗಡೆ ಅವರ ಮನೆಯಲ್ಲಿ ಬಸಪ್ಪ ಉಂಡಿ ಹಾಗೂ ಪವಿತ್ರಾ ಉಂಡಿ ದಂಪತಿ ಉಳಿದಿದ್ದರು. ಅಲ್ಲಿನ ತೋಟದ ಕೆಲಸ ಮಾಡಿಕೊಂಡು ಅವರು ಜೀವನ ನಡೆಸುತ್ತಿದ್ದರು. ರಾಘವ ಹೆಗಡೆ ಅವರ ತೋಟದ ಮನೆಯಲ್ಲಿಯೇ ಈ ದಂಪತಿ ತಮ್ಮ ಇಬ್ಬರು ಮಕ್ಕಳ ಜೊತೆ ವಾಸವಾಗಿದ್ದರು. ಆ ಮಕ್ಕಳು ಸಹ ಅಲ್ಲಿನ ಶಾಲೆಗೆ ಹೋಗುತ್ತಿದ್ದರು. ಶುಕ್ರವಾರ ಶಾಲೆಗೆ ರಜೆಯಿದ್ದ ಕಾರಣ ಆ ಮಕ್ಕಳೆಲ್ಲರೂ ಮನೆ ಬಳಿ ಆಟವಾಡುತ್ತಿದ್ದರು.
ಊರಿನಲ್ಲಿ ಮಂಗನ ಕಾಟ ಹೆಚ್ಚಾದ ಕಾರಣ ಜನರೆಲ್ಲರೂ ಸೇರಿ ಮಂಗನನ್ನು ಓಡಿಸಲು ಸದಾಶಿವಳ್ಳಿಯ ನಿತೀಶ ಗೌಡ ಅವರನ್ನು ನೇಮಿಸಿದ್ದರು. ಆಗಾಗ ರಾಘವೇಂದ್ರ ಹೆಗಡೆ ಅವರ ಮನೆ ಕಡೆ ನಿತೀಶ ಗೌಡ ಬರುತ್ತಿದ್ದರು. ಆಗ, ಬಸಪ್ಪ ಉಂಡಿ ಅವರ ಮಕ್ಕಳು ಕೀಟಲೆ ಮಾಡುತ್ತಿದ್ದು, ಇದನ್ನು ನಿತೀಶ ಗೌಡ ಅವರು ಸಹಿಸುತ್ತಿರಲಿಲ್ಲ.
ಮಕ್ಕಳು ಆಡುವುದನ್ನು ನೋಡಿದ ನಿತೀಶ ಗೌಡ ಅದಕ್ಕೆ ಅಡ್ಡಿಪಡಿಸುತ್ತಿದ್ದರು. ಆ ಮಕ್ಕಳಿಬ್ಬರ ಮೇಲೆಯೂ ದ್ವೇಷ ಸಾಧಿಸುತ್ತಿದ್ದರು. ಜೊತೆಗೆ `ಈ ಇಬ್ಬರು ಮಕ್ಕಳು ತುಂಬಾ ಉಡಾಳರಾಗಿದ್ದಾರೆ’ ಎಂದು ಊರ ತುಂಬ ಹೇಳಿದ್ದರು. ಶುಕ್ರವಾರ ಸೋಮನಳ್ಳಿಯ ಗಣಪತಿ ಹೆಗಡೆ ಅವರ ಅಂಗಳದಲ್ಲಿ ಬಸಪ್ಪ ಉಂಡಿ ಅವರ ಮಕ್ಕಳಿಬ್ಬರು ಆಡುತ್ತಿದ್ದರು. ಆಗ, ನಿತೀಶ ಗೌಡ ಅವರು ರಾಘವ ಹೆಗಡೆ ಅವರ ಬಳಿಯಿಂದ ಗನ್ ತೆಗೆದುಕೊಂಡು ಬಂದು ಗುಂಡು ಹಾರಿಸಿದರು.
3ನೇ ತರಗತಿ ಓದುವ ಕರಿಯಪ್ಪ ಗುಂಡಿ ಅವರ ಎದೆಗೆ ಆ ಗುಂಡು ನಾಟಿದ್ದು, ಕರಿಯಪ್ಪ ಗುಂಡಿ ಅಲ್ಲಿಯೇ ಕುಸಿದು ಬಿದ್ದರು. ಜೊತೆಗೆ ಸಾವನಪ್ಪಿದರು. ಇದಾದ ನಂತರ ಕರಿಯಪ್ಪ ಗುಂಡಿ ಅವರಿಗೆ ಗುಂಡಿಕ್ಕಿದ ಆರೋಪ ಅವರ ತಮ್ಮ ದೀಳಪ್ಪ ಅವರ ಮೇಲೆ ಬಂದಿದ್ದು, ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಗುಂಡಿಕ್ಕಿದ್ದು ನಿತೀಶ ಗೌಡ ಎಂಬುದು ಅರಿವಾಯಿತು.
ಮೃತನ ತಾಯಿ ಸಹ ಮೊದಲು ಕಿರಿಯ ಮಗನೇ ಬಂದೂಕಿನ ಟ್ರಿಗರ್ ಒತ್ತಿದ ಬಗ್ಗೆ ಹೇಳಿದ್ದರು. ಅದಾದ ನಂತರ ನಿತೀಶ ಗೌಡ ಕೊಲೆ ಮಾಡುವ ಉದ್ದೇಶದಿಂದಲೇ ಗುಂಡು ಹೊಡೆದ ಬಗ್ಗೆ ದೂರು ನೀಡಿದರು.
ಈ ಬಗ್ಗೆ ಮೃತನ ತಾಯಿ ಪವಿತ್ರಾ ಉಂಡಿ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪವಿತ್ರಾ ಉಂಡಿ ಅವರು ಮಾತನಾಡಿದ ವಿಡಿಯೋ ಇಲ್ಲಿ ನೋಡಿ..
