ಕಾರವಾರದ ಪರೇಶ ಮೇಥಾ ಅವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಕುಟುಂಬದವರೇ ಚಿನ್ನಾಭರಣ ಕದ್ದಿರುವ ಸಂಶಯ ಕಾಡುತ್ತಿದೆ. ಹೀಗಾಗಿ ಕಳ್ಳರ ಪತ್ತೆಗೆ ಅವರು ಪೊಲೀಸರ ಮೊರೆ ಹೋಗಿದ್ದಾರೆ.
ಪರೇಶ ಮೇಥಾ ಅವರು ಕಾರವಾರದ ಮಾಜಾಳಿ ಗಾಭೀತವಾಡದಲ್ಲಿ ವಾಸವಾಗಿದ್ದಾರೆ. ಮೀನುಗಾರಿಕೆ ಅವರ ಕಸುಬು. ಅಗಸ್ಟ 7ರಂದು ಅವರು ಮನೆಯಲ್ಲಿ ಇಲ್ಲದ ವೇಳೆ ಕಳ್ಳರು ಅವರ ಮನೆಗೆ ನುಗ್ಗಿದ್ದಾರೆ. ಮನೆ ಬಾಗಿಲಿಗೆ ಹಾಕಿದ ಚಿಲಕ ಒಡೆದು ಒಳಗೆ ಪ್ರವೇಶಿಸಿದ್ದಾರೆ.
ಅದಾದ ನಂತರ ನೇರವಾಗಿ ದೇವರಕೋಣೆಗೆ ಕಳ್ಳರು ಹೋಗಿದ್ದು, ಅಲ್ಲಿನ ಕಪಾಟಿನಲ್ಲಿದ್ದ ಚಿನ್ನ ಎಗರಿಸಿದ್ದಾರೆ. ಕಪಾಡಿನ ಲಾಕರನ್ನು ಒಡೆದು ಹಾನಿ ಮಾಡಿದ್ದಾರೆ. ಕಳ್ಳತನವಾದ ಚಿನ್ನಾಭರಣ ಪರೇಶ ಮೇಥಾ ಅವರ ತಂಗಿ ತಂಗಿ ಪ್ರಗತಿ ಗಜನೀಕರ್ ಅವರದ್ದಾಗಿದೆ.
ಕುಟುಂಬದವರೇ ಕಳ್ಳತನ ಮಾಡಿದ ಸಂಶಯದ ಹಿನ್ನಲೆ ಇಷ್ಟು ದಿನ ಪರೇಶ ಮೇಥಾ ಅವರು ದೂರು ನೀಡಿರಲಿಲ್ಲ. ಕಳ್ಳರು ಸಿಗದ ಕಾರಣ ಅವರು ಇದೀಗ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣದ ವಿಚಾರಣೆ ನಡೆಸಿದ್ದಾರೆ.
