ಭದ್ರತೆಗೆ ನಿಯೋಜನೆಯಾಗಿದ್ದ ಪೊಲೀಸರ ಮುಂದೆಯೇ ನಾಲ್ವರು ಹೊಡೆದಾಡಿಕೊಂಡಿದ್ದು, ಆ ನಾಲ್ವರ ವಿರುದ್ಧವೂ ಯಲ್ಲಾಪುರ ಪಿಎಸ್ಐ ಶೇಡಜಿ ಚೌಹಾಣ್ ಅವರು ಕಾನೂನು ಕ್ರಮ ಜರುಗಿಸಿದ್ದಾರೆ.
ಸೆಪ್ಟೆಂಬರ್ 5ರ ರಾತ್ರಿ ಯಲ್ಲಾಪುರದ ಕಾಳಮ್ಮ ನಗರದಲ್ಲಿ ಈ ಹೊಡೆದಾಟ ನಡೆದಿದೆ. ಕಾಳಮ್ಮನಗರದ ಮೆಕಾನಿಕ್ ಸಮೀರ್ ಕರೋಸಿ (35), ಸವಣಗೇರಿಯ ಮೆಕಾನಿಕ್ ಸುಪಿಯ ಖಾನ್ (18), ಹುಬ್ಬಳ್ಳಿಯ ಭಾಷಾ ಶೇಖ್ (19) ಜೊತೆ ಉಮ್ಮಚ್ಗಿಯ ಅಪ್ಜಾನ್ ಪರಸ್ಪರ ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಅವರ ಹೊಡೆದಾಟ ತಪ್ಪಿಸುವ ಪ್ರಯತ್ನ ನಡೆದಿರೂ ಅದಕ್ಕೆ ಒಪ್ಪದೇ ಆ ನಾಲ್ವರು ಗಲಾಟೆ ಮಾಡಿದ್ದಾರೆ.
ಪಿಎಸ್ಐ ಶೇಡಜಿ ಚೌಹಾಣ್ ಅವರು ಆ ದಿನ ತಮ್ಮ ಸಿಬ್ಬಂದಿ ಜೊತೆ ಭದ್ರತಾ ಕೆಲಸದಲ್ಲಿದ್ದರು. ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡುವುದಕ್ಕಾಗಿ ಅವರು ಪಟ್ಟಣದಲ್ಲಿ ಸಂಚಾರ ನಡೆಸಿದ್ದರು. ಕಾಳಮ್ಮನಗರದಲ್ಲಿ ಗಲಾಟೆ ನಡೆಯುವುದನ್ನು ನೋಡಿ ಅವರು ಅದನ್ನು ತಡೆಯಲು ಪ್ರಯತ್ನಿಸಿದರು. ಅವರ ಜೊತೆಗಿದ್ದ ಪೊಲೀಸ್ ಸಿಬ್ಬಂದಿ ಸಹ ಗಲಾಟೆ ಮಾಡದಂತೆ ಆರೋಪಿತರಿಗೆ ಸೂಚಿಸಿದರು.
ಅದಾಗಿಯೂ ಅವರ ಹೊಡೆದಾಟ ಕಡಿಮೆ ಆಗಲಿಲ್ಲ. ಈ ಹೊಡೆದಾಟಕ್ಕೆ ಕಾರಣವೂ ಗೊತ್ತಾಗಲಿಲ್ಲ. ಕಾಳಮ್ಮನಗರ ಮೈದಾನದ ಬಳಿಯಿರುವ ಸಾರ್ವಜನಿಕ ಓಡಾಟದ ರಸ್ತೆಯಲ್ಲಿ ಶಾಂತತಾ ಭಂಗಕ್ಕೆ ಯತ್ನಿಸಿದ ಕಾರಣ ಅವರೆಲ್ಲರ ವಿರುದ್ಧ ಪೊಲೀಸರು ತಪ್ರಕರಣ ದಾಖಲಿಸಿದರು.
