ಅತಿಯಾದ ಹೊಟ್ಟೆನೋವು ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿದ್ದ ಅಂಕೋಲಾದ ವ್ಯಕ್ತಿಯೊಬ್ಬರು ಅದೇ ಸಮಸ್ಯೆಯಿಂದ ಬಳಲಿ ಸಾವನಪ್ಪಿದ್ದಾರೆ.
ಅಂಕೋಲಾ ಕಂತ್ರಿಯ ಸಂತೋಷ ಆಗೇರ ಅವರು ಪೇಂಟಿoಗ್ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದರು. ಸೆಪ್ಟೆಂಬರ್ 4ರಂದು ಅವರಿಗೆ ಹೊಟ್ಟೆನೋವು ಕಾಣಿಸಿತು. ಜೊತೆಗೆ ಗ್ಯಾಸ್ಟಿಕ್ ಸಮಸ್ಯೆ ಸಹ ಉಲ್ಬಣವಾಯಿತು.
ಸೆಪ್ಟೆಂಬರ್ 5ರಂದು ಹೊಟ್ಟೆನೋವು ಇನ್ನಷ್ಟು ಜಾಸ್ತಿ ಆಯಿತು. ಉಸಿರಾಟ ಸಮಸ್ಯೆಯೂ ಅವರನ್ನು ಆವರಿಸಿತು. ಕುಟುಂಬದವರು ಅವರನ್ನು ಆಸ್ಪತ್ರೆಗೆ ಕರೆದೊಯ್ಯುವುದರ ಒಳಗೆ ಸಂತೋಷ ಆಗೇರ್ ಅವರ ಉಸಿರು ನಿಂತಿತು.
ಆಸ್ಪತ್ರೆಯ ವೈದ್ಯರು ಸಂತೋಷ ಆಗೇರ ಅವರ ಸಾವನ್ನು ದೃಢೀಕರಿಸಿದರು. ಸಂತೋಷ ಅವರ ತಮ್ಮ ಗುರು ಆಗೇರ್ ಅವರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದರು.
Discussion about this post