ಮೇಷ ರಾಶಿ: ಕೆಲಸದ ವಿಷಯದಲ್ಲಿ ದುಡುಕುತನ ಒಳಿತಲ್ಲ. ತಾಳ್ಮೆಯಿಂದ ಕೆಲಸ ಮಾಡಿದರೆ ಯಶಸ್ಸು ಸಾಧ್ಯವಿದೆ. ಹಳೆಯ ಆರೋಗ್ಯ ಸಮಸ್ಯೆಗಳು ಮತ್ತೆ ಕಾಡಬಹುದು. ವ್ಯವಹಾರದಲ್ಲಿ ಪ್ರತಿಸ್ಪರ್ಧಿಗಳು ಹೆಚ್ಚಾಗಲಿದ್ದಾರೆ.
ವೃಷಭ ರಾಶಿ: ನಿಮ್ಮ ಸಮಯವೇ ನಿಮಗೆ ಶಕ್ತಿ ಎಂಬುದನ್ನು ನೆನಪಿಡಿ. ಸಮಯವನ್ನು ಸರಿಯಾಗಿ ಬಳಸಿಕೊಂಡು ನೀವು ಬೆಳೆಯಲು ಪ್ರಯತ್ನಿಸಿ. ಹಣಕಾಸು ವಿಷಯದಲ್ಲಿ ಜಾಗೃತಿ ಅಗತ್ಯ. ಪಾಲುದಾರಿಕೆಯ ವ್ಯವಹಾರಗಳ ದಾಖಲೆಗಳು ನಿಮ್ಮ ಬಳಿ ಸರಿಯಾಗಿರಲಿ.
ಮಿಥುನ ರಾಶಿ: ಕಾರ್ಯಕ್ಷೇತ್ರದಲ್ಲಿ ಒತ್ತಡ ಹೆಚ್ಚಾಗಲಿದೆ. ಕುಟುಂಬದವರ ಸಹಕಾರದಿಂದ ನೆಮ್ಮದಿ ಸಾಧ್ಯವಿದೆ. ವೃತ್ತಿ ಬದುಕಿನಲ್ಲಿ ಸರಿಯಾದ ನಿರ್ಧಾರ ಮಾಡಿ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ.
ಕರ್ಕ ರಾಶಿ: ಆರೋಗ್ಯದ ಬಗ್ಗೆ ಕಾಳಜಿವಹಿಸಿ. ಬಾಕಿ ಕೆಲಸಗಳನ್ನು ಬೇಗ ಮುಗಿಸುವುದು ಒಳಿತು. ವಾಹನ ಚಾಲನೆ ವಿಷಯದಲ್ಲಿ ಎಚ್ಚರಿಕೆ ಅಗತ್ಯ. ತಾಳ್ಮೆಯಿಂದ ವ್ಯವಹರಿಸಿ.
ಸಿಂಹ ರಾಶಿ: ಖರ್ಚು-ವೆಚ್ಚಗಳು ಹೆಚ್ಚಾಗಲಿದೆ. ಹಣಕಾಸಿನ ಹೂಡಿಕೆಗೆ ಪ್ರಯತ್ನಿಸಿ. ನಿಮ್ಮ ಮಾತು ಬೇರೆಯವರಿಗೆ ನೋವು ಕೊಡುವ ಸಾಧ್ಯತೆಗಳಿವೆ. ವಿರೋಧಿಗಳಿಂದ ದೂರವಿರಿ.
ಕನ್ಯಾ ರಾಶಿ: ಮನೆಯವರ ಬೆಂಬಲದಿAದ ನಿಮ್ಮ ಅಭಿವೃದ್ಧಿ ಸಾಧ್ಯವಿದೆ. ಹಳೆಯ ಕೆಲಸಗಳು ಪೂರ್ಣವಾಗಲಿದೆ. ಉದ್ಯೋಗದ ಸಮಸ್ಯೆ ದೂರವಗಲಿದೆ. ಆರ್ಥಿಕ ಅಭಿವೃದ್ಧಿಯೂ ಸಾಧ್ಯವಿದೆ.
ತುಲಾ ರಾಶಿ: ಜೀವನದಲ್ಲಿ ಏರುಪೇರಾಗುವ ಲಕ್ಷಣಗಳು ಹೆಚ್ಚಿದೆ. ಉತ್ತಮ ಪುಸ್ತಕಗಳು ನಿಮಗೆ ನೆರವಾಗಲಿದೆ. ಸಮಯದ ಸದುಪಯೋಗಪಡಿಸಿಕೊಳ್ಳದಿದ್ದರೆ ನಷ್ಟ ಆಗಬಹುದು. ತಜ್ಞರ ಸಲಗೆಪಡೆದು ವ್ಯವಹಾರ ಮಾಡಿ. ಅಪಾಯಕಾರಿ ನಿರ್ಧಾರಗಳನ್ನು ಮಾಡಬೇಡಿ.
ವೃಶ್ಚಿಕ ರಾಶಿ: ಚಿಂತೆಗಳಿoದ ದೂರವಿರಲು ಸಕಾರಾತ್ಮಕ ಯೋಜನೆ ಮಾಡಿ. ಸಾಲ ಹೆಚ್ಚಾಗುವ ಸಾಧ್ಯತೆಯಿದೆ. ಕಾನೂನು ವಿಚಾರದಲ್ಲಿ ತಜ್ಞರ ಸಲಹೆ ಮುಖ್ಯ. ಸಂಗಾತಿಯ ಆರೋಗ್ಯದ ಬಗ್ಗೆ ಗಮನಿಸಿ.
ಧನು ರಾಶಿ: ಕೆಲಸದ ಹೊರೆ ನಿಮ್ಮ ಮಾನಸಿಕ ನೆಮ್ಮದಿ ಕಸಿಯಬಹುದು. ದಿನಚರಿಯಲ್ಲಿ ಸಮತೋಲನ ಕಾಪಾಡಿಕೊಳ್ಳಿ. ಪ್ರಯಾಣ ಅವಕಾಶ ಬರಬಹುದು.
ಮಕರ ರಾಶಿ: ಪ್ರಯಾಣ ಯೋಗವಿದೆ. ಸಂತೋಷ ಹೆಚ್ಚಾಗಲಿದೆ. ಸ್ನೇಹಿತರ ಸಹಕಾರ ಸಿಗಲಿದೆ. ಈ ದಿನ ಖುಷಿಯಾಗಿ ಕಳೆಯುವಿರಿ.
ಕುಂಭ ರಾಶಿ: ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ನೂರು ಬಾರಿ ಯೋಚಿಸಿ. ಭಾವನಾತ್ಮಕವಾಗಿ ನಿರ್ಧಾರ ಪ್ರಕಟಿಸಬೇಡಿ. ನಿಧಾನವಾಗಿ ಕೆಲಸ ಮಾಡಿದರೂ ಅದು ಫಲ ಕೊಡುತ್ತದೆ.
ಮೀನ ರಾಶಿ: ತುಂಬಾ ದಿನದಿಂದ ಬಾಕಿಯಿರುವ ಕೆಲಸಗಳನ್ನು ಮುಗಿಸುವಿರಿ. ಆತ್ಮವಿಶ್ವಾಸ ಹೆಚ್ಚಳವಾಗಲಿದೆ. ಸಮಾಜದಲ್ಲಿ ಗೌರವ ಸಿಗಲಿದೆ. ಜೀವನ ಸಂತೋಷಕರವಾಗಿರಲಿದೆ.
